Site icon Vistara News

Nikhil Siddharth: ಸಿಲಿಕಾನ್ ಸಿಟಿಯಲ್ಲಿ ʻಸ್ಪೈʼ ಸಿನಿಮಾ ಪ್ರಚಾರ: ಜೂನ್‌ 29ಕ್ಕೆ ರಿಲೀಸ್‌!

Nikhil Siddhartha And Iswarya Menon

#image_title

ಬೆಂಗಳೂರು: ಟಾಲಿವುಡ್ ನಟ ನಿಖಿಲ್ ಸಿದ್ಧಾರ್ಥ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಸ್ಪೈ ಇದೇ ಜೂನ್‌ 29ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಮುಂಬೈನಲ್ಲಿ ಪ್ರಮೋಷನ್ ಮುಗಿಸಿರುವ ಸ್ಪೈ ಟೀಂ ಈಗ ಬೆಂಗಳೂರಿಗೆ ಬಂದಿಳಿದಿದೆ. ನಾಯಕ ನಿಖಿಲ್ ಸಿದ್ಧಾರ್ಥ್, ನಾಯಕಿ ಐಶ್ವರ್ಯ ಮೆನನ್ ಸಿಲಿಕಾನ್ ಸಿಟಿಯಲ್ಲಿ ಪ್ರಚಾರ ನಡೆಸಲಿದ್ದಾರೆ.

ಭಾರತದ ಟಾಪ್ ಸೀಕ್ರೆಟ್ ರಹಸ್ಯಗಳು, ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಮೃತಪಟ್ಟಿದ್ದಾರೆ ಎನ್ನಲಾದ ವಿಚಾರಗಳನ್ನು ಬೆನ್ನು ಹತ್ತುವ ಗೂಢಚಾರಿ ಪಾತ್ರದಲ್ಲಿ ನಿಖಿಲ್ ಸಿದ್ದಾರ್ಥ್ ಅಭಿನಯಿಸಿದ್ದಾರೆ.

ಐಶ್ವರ್ಯ ಮೆನನ್ ನಾಯಕಿಯಾಗಿ, ಸನ್ಯಾ ಠಾಕೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸ್ಪೆಷಲ್ ರೋಲ್‌ನಲ್ಲಿ ಬಾಹುಬಲಿ ಬಲ್ಲಾಳದೇವ ರಾಣಾ ದಗ್ಗುಭಾಟಿ ಕೂಡ ಕಾಣಿಸಿಕೊಂಡಿದ್ದಾರೆ. ಅಭಿನವ್ ಗೋಮತಮ್, ಮಕರಂದ್ ದೇಶಪಾಂಡೆ, ನಿತಿನ್ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್, ಸೋನಿಯಾ ನರೇಶ್ ಮತ್ತು ಇತರರು ತಾರಾಬಳಗದಲ್ಲಿದ್ದಾರೆ.

ಖ್ಯಾತ ನಿರ್ದೇಶಕ ಹಾಗೂ ಸಂಕಲನಕಾರರು ಆಗಿರುವ ಗ್ಯಾರಿ ಬಿ ಹೆಚ್ ಸ್ಪೈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಎವರು ಮತ್ತು ಹಿಟ್ ಸಿನಿಮಾಗಳ ನಿರ್ಮಾಪಕ ಕೆ.ರಾಜಶೇಖರ್ ರೆಡ್ಡಿ ED ಎಂಟರ್‌ಟೈನ್‌ಮೆಂಟ್‌ನಡಿ ಚರಣ್ ರಾಜ್ ಉಪ್ಪಲಪತಿ ಜತೆಗೂಡಿ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದಾರೆ.

ಇದನ್ನೂ ಓದಿ: Nikhil Siddhartha: ನಿಖಿಲ್ ಸಿದ್ದಾರ್ಥ್ ಹುಟ್ಟುಹಬ್ಬಕ್ಕೆ 20ನೇ ಸಿನಿಮಾ ಅನೌನ್ಸ್!

ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ‌ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ರಾಜಶೇಖರ್ ರೆಡ್ಡಿ ನಿರ್ಮಾಣದ ಜತೆಗೆ ಕಥೆ ಕೂಡ ಬರೆದಿದ್ದಾರೆ. ಗ್ಯಾರಿ ಬಿ.ಎಚ್. ನಿರ್ದೇಶನದ ಜತೆಗೆ ಸಂಕಲನದ ಹೊಣೆ ಹೊತ್ತಿದ್ದಾರೆ. ಅಮರು ಸೂರಿಸೆಟ್ಟಿ ಛಾಯಾಗ್ರಹಣ, ಶ್ರೀಚರಣ್ ಪಕಳ ಸಂಗೀತ, ಅರ್ಜುನ್ ಸೂರಿಸೆಟ್ಟಿ ಕಲಾ ನಿರ್ದೇಶನ ಸಿನಿಮಾಕ್ಕಿದೆ. ಇದೇ 29ರಂದು ಸ್ಪೈ ಸಿನಿಮಾ ವಿಶ್ವಾದ್ಯಂತ ತೆರೆ ಕಾಣುತ್ತಿದೆ.

Exit mobile version