ಬೆಂಗಳೂರು: ತೆಲುಗು ಚಿತ್ರರಂಗದ ಉದಯೋನ್ಮುಖ ನಟ ನಿಖಿಲ್ ಸಿದ್ದಾರ್ಥ್ (Nikhil Siddhartha) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ನಿಖಿಲ್ ಜನುಮದಿನದ ಪ್ರಯುಕ್ತ ಅವರು ನಟಿಸುತ್ತಿರುವ 20ನೇ ಸಿನಿಮಾ ಘೋಷಣೆ ಮಾಡಲಾಗಿದೆ. ಭರತ್ ಕೃಷ್ಣಮಾಚಾರಿ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾಗೆ ʻಸ್ವಯಂಭೂʼ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ.
ಪಿಕ್ಸೆಲ್ ಸ್ಟುಡಿಯೊ ಮೂಲಕ ಭುವನ್ ಹಾಗೂ ಶ್ರೀಕರ್ ಚಿತ್ರ ನಿರ್ಮಾಣ ಮಾಡುತ್ತಿದ್ದು, ಟ್ಯಾಗೋರೆ ಮಧು ಪ್ರಸ್ತುತಪಡಿಸುತ್ತಿದ್ದಾರೆ. ಸ್ವಯಂಭೂ ಎಂದರೆ ಸ್ವಯಂ ಹುಟ್ಟು ಎಂದರ್ಥ. ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ನಿಖಿಲ್, ಉದ್ದವಾದ ಕೂದಲು ಬಿಟ್ಟು ಒಂದು ಕೈಯಲ್ಲಿ ಈಟಿ, ಮತ್ತೊಂದು ಕೈಯಲ್ಲಿ ಗುರಾಣಿ ಹಿಡಿದು ವೀರಯೋಧನಂತೆ ಕಾಣಿಸಿಕೊಂಡಿದ್ದಾರೆ.
ಸಹಸ್ರಮಾನಗಳ ಹಿಂದಿನ ಕಥೆಯನ್ನೊಳಗೊಂಡಿರುವ ʻಸ್ವಯಂಭೂʼ ಸಿನಿಮಾ ನಿಖಿಲ್ ಸಿದ್ದಾರ್ಥ್ ವೃತ್ತಿಜೀವನದ ಬಿಗ್ ಬಜೆಟ್ ಚಿತ್ರವಾಗಿದೆ. ಮನೋಜ್ ಪರಮಹಂಸ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ವಾಸುದೇವ್ ಮುನೆಪ್ಪಗರಿ ಚಿತ್ರಕ್ಕೆ ಸಂಭಾಷಣೆಯನ್ನು ನೀಡಿದ್ದಾರೆ.
ವಿ ಮೆಗಾ ಪಿಕ್ಚರ್ಸ್ ಮತ್ತು ಅಭಿಷೇಕ್ ಅಗರ್ವಾಲ್ ಅವರ ಆರ್ಟ್ ಬ್ಯಾನರ್ ಸಹಯೋಗದಲ್ಲಿ ಮೊದಲ ಸಿನಿಮಾವನ್ನು ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರ ಜನ್ಮದಿನದ ಸಂದರ್ಭದಲ್ಲಿ ಗ್ಲೋಬಲ್ ಸ್ಟಾರ್ ರಾಮ್ ಚರಣ್ (Ram Charan) ಅನೌನ್ಸ್ ಮಾಡಿದ್ದರು. ರಾಮ್ ವಂಶಿ ಕೃಷ್ಣ ನಿರ್ದೇಶನದ ʻದಿ ಇಂಡಿಯಾ ಹೌಸ್ʼ ಶೀರ್ಷಿಕೆಯ ಚಿತ್ರದಲ್ಲಿ ನಿಖಿಲ್ ಸಿದ್ಧಾರ್ಥ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: Ram Charan: ವೀರ್ ಸಾವರ್ಕರ್ ಜನುಮದಿನದಂದೇ ʻವಿ ಮೆಗಾ ಪಿಕ್ಚರ್ಸ್ʼ ಹೊಸ ಸಿನಿಮಾ ಅನೌನ್ಸ್; ವಿಡಿಯೊ ಹಂಚಿಕೊಂಡ ರಾಮ್‌ಚರಣ್!
ಈ ಸಿನಿಮಾವನ್ನು ರಾಮ್ ಚರಣ್ ಪ್ರಸ್ತುತಪಡಿಸಿದ್ದಾರೆ.ಕ್ಯಾಮರೂನ್ ಬ್ರೈಸನ್ ಅವರ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಅನುಪಮ್ ಖೇರ್ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಚಲನಚಿತ್ರವನ್ನು ಪ್ರಮುಖ ಭಾರತೀಯ ಭಾಷೆಗಳಲ್ಲಿ ಮತ್ತು ವಿದೇಶಿ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಯಾರಕರು ಘೋಷಿಸಿದ್ದಾರೆ. ಉಳಿದ ಪಾತ್ರವರ್ಗ ಮತ್ತು ತಂಡದ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂಬರುವ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ಚಿತ್ರತಂಡ ಹೇಳಿಕೊಂಡಿದೆ.