Site icon Vistara News

Nisha Narasappa : ಮಾಸ್ಟರ್​ ಆನಂದ್ ಪತ್ನಿಯ ವಿರುದ್ಧ ಹಲವು ಆರೋಪಗಳನ್ನು ಮಾಡಿದ ನಿಶಾ ನರಸಪ್ಪ

Nisha Narasappa

ಬೆಂಗಳೂರು: ಬಾಲ ಕಲಾವಿದೆ, ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಲ್ಲಿ ಹಲವು ಪೋಷಕರಿಗೆ ಮೋಸ ಮಾಡಿದ್ದಾರೆ ಎಂಬ ಆರೋಪ ಹೊತ್ತಿದ್ದ ಪ್ರೊಡಕ್ಷನ್ ಕಂಪನಿಯೊಂದ ಮಾಲಕಿ ನಿಶಾ ನರಸಪ್ಪ (Nisha Narasappa) ಜುಲೈ 29ರಂದು ಪತ್ರಿಕಾಗೋಷ್ಠಿ ಕರೆದು ಪ್ರಕರಣದ ಕುರಿತು ಮಾತನಾಡಿದ್ದಾರೆ. ಈ ವೇಳೆ ಅವರು ವಂಶಿಕಾಳ ತಾಯಿ ಯಶಸ್ವಿನಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.

ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ದೂರು ದಾಖಲಿಸಿದ್ದಾರೆ. ಇದರಲ್ಲಿ ಮಾಸ್ಟರ್ ಆನಂದ್​ ಪತ್ನಿ ಯಶಸ್ವಿನಿ ಅವರ ಕೈವಾಡವೂ ಇದೆ. ಅವರಿಗೂ ನನಗೂ ಒಂದು ವರ್ಷದ ಪರಿಚಯ. ಆದರೆ ಅವರು ನನ್ನ ಪರಿಚಯವೇ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ನನ್ನ ಪ್ರೊಡಕ್ಷನ್ ಕಂಪನಿ ಆಯೋಜಿಸಿದ್ದ ಕಾರ್ಯಕ್ರಮಕ್ಕೂ ಅವರು ಬಂದಿದ್ದಾರೆ. ಅದಕ್ಕಾಗಿ ದುಡ್ಡು ಕೂಡ ತೆಗೆದುಕೊಂಡಿದ್ದಾರೆ. ನನಗೇ ಅವರು 10 ಸಾವಿರ ರೂಪಾಯಿ ಕೊಡಬೇಕಾಗಿದೆ. ಆದರೆ ಈಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ನಿಶಾ ಹೇಳಿದ್ದಾರೆ.

ನನ್ನ ಹೆಸರು ಹಾಳು ಮಾಡುಲು ಆರು ತಿಂಗಳು ಪ್ಲ್ಯಾನ್​ ಮಾಡಿ‌ ಮಾಡಿದ್ದಾರೆ. ನನ್ನನ್ನು ಪರ್ಸನಲ್ ಆಗಿ ಟಾರ್ಗೆಟ್ ಮಾಡಿದವರಿಗೆ ಯಶಸ್ವಿನಿ ಸಹಾಯ ಮಾಡಿದ್ದಾರೆ. ಯಶಸ್ವಿನಿಗೆ ನಾನು ದುಡ್ಡು ಕೊಟ್ಟಿರುವುದಕ್ಕೆ ಸಂಬಂಧಿಸಿದ ಪೋಟೋಗಳು ಇವೆ. ಆದರೆ ನನಗೆ ಅವರಿಗೆ ಪರಿಚಯ ಇಲ್ಲ ಅನ್ನುವಂತೆ ತೋರಿಸಿಕೊಂಡ್ರು. ಯಶಸ್ವಿನಿಯವರು ಪುಗ್ಸಟ್ಟೆ ಯಾವುದೇ ಇವೆಂಟ್​ಗೆ ಬಂದಿರಲಿಲ್ಲ. ಪ್ರತಿಯೊಂದಕ್ಕೂ ದುಡ್ಡು ತೆಗೆದುಕೊಂಡಿದ್ದಾರೆ ಎಂದು ನಿಶಾ ಆರೋಪಿಸಿದ್ದಾರೆ.

ಇದನ್ನೂ ಓದಿ : Kichcha Sudeep: ತಿಮ್ಮಪ್ಪನ ದರ್ಶನ ಪಡೆದ ಕಿಚ್ಚ ಸುದೀಪ್‌!

ನನಗೆ ಆಗಿವು ನೋವನ್ನು ನಾನು ಹೊರಗೆ ಹೇಳಬಾರದಾ? ನನ್ನ ಪ್ರೊಡಕ್ಷನ್ ಕಂಪನಿಗೆ ಏಳು ವರ್ಷವಾಗಿದೆ. ವಂಶಿಕಾಗೆ ಕೇವಲ ಐದು ವರ್ಷ. ನಾನು ಅವರ ಮಗಳಿಂದಲೇನಾ ಬದುಕಿರೋದು? ಅವರು ಪ್ರತಿ ವಾಹಿನಿಯಲ್ಲೂ ಹಣ ಪಡೆದೇ ಭಾಗವಹಿಸುತ್ತಿರುವುದು ಎಂದು ಯಶಸ್ವಿನಿ ವಿರುದ್ಧ ನಿಶಾ ಆರೋಪ ಹೊರಿಸಿದ್ದಾರೆ.

ಹರ್ಷಿತಾಳಿಂದ ಸಮಸ್ಯೆ

ನಾನು ಏಳು ವರ್ಷಗಳಿಂದ ಎನ್.ಎನ್‌ ಪ್ರೊಡಕ್ಷನ್ ಕಂಪನಿ ನಡೆಸುತ್ತಿದ್ದೇನೆ. ನಾನು ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇನೆ. ನನ್ನ ಕಂಪನಿಗೆ ಒಳ್ಳೆಯ ಹೆಸರಿತ್ತು. ಕಂಪನಿಗೆ ಹರ್ಷಿತಾ ಅಂತ ಒಂದು ಹುಡುಗಿಯನ್ನು ಕೆಲಸಕ್ಕೆ ತಗೊಂಡೆ. ಆಕೆಯ ಫ್ಯಾಮಿಲಿ ನನಗೆ ಪರಿಚಯವಿತ್ತು. ಆಕೆ ಎರಡು ವರ್ಷ ನನ್ನ ಜೊತೆಯೇ ಇದ್ದಳು. ನನ್ನ ಎಲ್ಲ ಬ್ಯಾಂಕ್ ಡಿಟೇಲ್ಸ್​ ಆಕೆಗೆ ಗೊತ್ತಿತ್ತು. ಬಳಿಕ ಆಕೆ ನನ್ನ ಕಂಪನಿಯಲ್ಲಿ ಶೇರ್ ಕೇಳಿದ್ರು, ನಾನು ಒಪ್ಪಲಿಲ್ಲ. ಆಗ ಅವರ ಐಫೋನ್​​ನಲ್ಲಿ ನನ್ನ ಇನ್​ಸ್ಟಾಗ್ರಾಂ ಖಾತೆ ಓಪನ್​ ಮಾಡಿದ್ರು. ಕೇಳಿದ್ದಕ್ಕೆ ಕೆಲಸವೇ ಬಿಟ್ಟಳು ಎಂದು ನಿಶಾ ಹೇಳಿದ್ದಾರೆ.

ಹರ್ಷಿತಾ ಕೆಲಸ ಬಿಟ್ಟ ಬಳಿಕ ಆಕೆ ತೊಂದರೆ ಮಾಡಲು ಶುರು ಮಾಡಿದಳು. ಅದಕ್ಕೆ ಯಶಸ್ವಿನಿಯ ನೆರವೂ ಇದೆ. ನನ್ನ ಕ್ಲೈಂಟ್​ಗಳು ಮನೆ ಹತ್ತಿರ ಬಂದು ಗಲಾಟೆ ಮಾಡಲು ಶುರು ಮಾಡಿದರು. ಅವರನ್ನು ಹರ್ಷಿತಾ ಕಳಿಸುತ್ತಿದ್ದಳು. ಎನ್ ಎನ್ ಪ್ರೊಡಕ್ಷನ್ ಯಾರ ದುಡ್ಡು ಉಳಿಸಿಕೊಂಡಿಲ್ಲ. ಎಲ್ಲಾ ದುಡ್ಡು ಸೆಟಲ್ಮೆಂಟ್ ಮಾಡಿದ್ದೀವಿ. ನಾವು ಕ್ಯಾಶ್ ವ್ಯವಹಾರ ಮಾಡಲ್ಲ. ಆದರೂ ನನ್ನ ಮೇಲೆ ಆರೋಪಗಳನ್ನು ಹೊರಿಸಿದರು ಎಂದು ನಿಶಾ ಹೇಳಿದ್ದಾರೆ.

Exit mobile version