Site icon Vistara News

Nita Ambani: ವಿಶೇಷ ಪ್ರಶಸ್ತಿ ಸ್ವೀಕರಿಸಿ ಸತ್ಯಂ ಶಿವಂ ಸುಂದರಂ ಎಂದ ನೀತಾ ಅಂಬಾನಿ!

Nita Ambani 'Beauty With Purpose Humanitarian Award’

ಬೆಂಗಳೂರು: ರಿಲಯನ್ಸ್ ಫೌಂಡೇಶನ್‌ ಅಧ್ಯಕ್ಷೆ ಮತ್ತು ಸಂಸ್ಥಾಪಕಿ ನೀತಾ ಮುಕೇಶ್ ಅಂಬಾನಿ ಅವರಿಗೆ ಶನಿವಾರ (ಮಾ.9)ರಂದು ಮಿಸ್ ವರ್ಲ್ಡ್ ಫೌಂಡೇಶನ್‌ ವತಿಯಿಂದ ‘ಬ್ಯೂಟಿ ವಿತ್ ಎ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್’ (Beauty With Purpose Humanitarian Award) ನೀಡಲಾಯಿತು. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶನಿವಾರ ನಡೆದ 71ನೇ ವಿಶ್ವ ಸುಂದರಿ ಫಿನಾಲೆಯಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನೀತಾ ಅಂಬಾನಿ ಅವರ ಸಾಮಾಜಿಕ ಸೇವೆಗಾಗಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಮಿಸ್ ವರ್ಲ್ಡ್ ಆರ್ಗನೈಸೇಶನ್‌ನ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲೆ ಪ್ರಶಸ್ತಿಯನ್ನು ನೀಡಿದರು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ನೀತಾ ಮುಕೇಶ್ ಅಂಬಾನಿ ಮಾತನಾಡಿ ʻʻಈ ಗೌರವಕ್ಕೆ ಧನ್ಯವಾದಗಳು. ಈ ಗೌರವವು ಕೇವಲ ವೈಯಕ್ತಿಕ ಸಾಧನೆಯಲ್ಲ. ನನ್ನ ಪ್ರಯಾಣದ ಉದ್ದಕ್ಕೂ, ಸತ್ಯಂ, ಶಿವಂ, ಸುಂದರಂ ಎಂಬ ಸನಾತನ ಭಾರತೀಯ ತತ್ವಗಳನ್ನು ಅನುಸರಿಸಿಕೊಂಡು ಬಂದಿದ್ದೇನೆ. ರಿಲಯನ್ಸ್ ಫೌಂಡೇಶನ್‌ನಲ್ಲಿ, ಶಿಕ್ಷಣ, ಆರೋಗ್ಯ, ಕ್ರೀಡೆ, ಕಲೆ ಮತ್ತು ಸಂಸ್ಕೃತಿಯಲ್ಲಿ ಪ್ರತಿಯೊಬ್ಬ ಭಾರತೀಯರನ್ನು ವಿಶೇಷವಾಗಿ ಮಹಿಳೆಯರು ಮತ್ತು ಯುವತಿಯರನ್ನು ಸಬಲೀಕರಣಗೊಳಿಸಲು ಪ್ರಯತ್ನ ಪಡುತ್ತಿದ್ದೇವೆ. ಎಲ್ಲ ಯುವಯತಿಯರಿಗೆ ಧನ್ಯವಾದ. ಈ ಶತಮಾನ ಮಹಿಳೆಯರಿಗೆ ಸೇರಿದ್ದು. ಮಹಿಳೆಯರು ಏನು ಬೇಕಾದರೂ ಸಾಧನೆ ಮಾಡಬಹುದುʼʼಎಂದು ಹೇಳಿದರು.

ಇದನ್ನೂ ಓದಿ: Nita Ambani: ಮಗನ ಮದುವೆ: ಕೈ ಮಗ್ಗದ ಕಾಂಚೀವರಂ ಸೀರೆಯುಟ್ಟು ಮಿಂಚಿದ ನೀತಾ ಅಂಬಾನಿ!

ಮಿಸ್ ವರ್ಲ್ಡ್ 2024 ಈವೆಂಟ್‌ನಲ್ಲಿ ನೀತಾ ಅಂಬಾನಿ ಸಾಂಪ್ರದಾಯಿಕ ಬನಾರಸಿ ಸೀರೆಯೊಂದಿಗೆ ಕಾಣಿಸಿಕೊಂಡರು. ಸ್ವದೇಶ್ ಮತ್ತು ಮನೀಶ್ ಮಲ್ಹೋತ್ರಾ ಒಟ್ಟಾಗಿ ಸೇರಿ ಸುಮಾರು 45ದಿನಗಳ ಕಾಲ ಈ ಸೀರೆಯನ್ನು ನೇಯ್ದಿರುವುದಾಗಿ ನೀತಾ ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಜೆಕ್ ಗಣರಾಜ್ಯ ದೇಶದ ಕ್ರಿಸ್ಟಿನಾ ಪಿಸ್ಕೋವಾ (Miss World 2024) (Krystyna Pyszkova) 2024ನೇ ಆವೃತ್ತಿಯ ವಿಶ್ವ ಸುಂದರಿ (Miss World 2024)ಯಾಗಿ ಹೊರಹೊಮ್ಮಿದ್ದಾರೆ. ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌(Jio World Convention Centre in BKC, Mumbai)ನಲ್ಲಿ  ಶನಿವಾರ (ಮಾ.9) ನಡೆದ ಸ್ಪರ್ಧೆಯಲ್ಲಿ ಅವರು 71ನೇ ವಿಶ್ವ ಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡರು. ವಿಶೇಷ ಎಂದರೆ ವಿಶ್ವ ಸುಂದರಿ ಸ್ಪರ್ಧೆಯ ಆತಿಥ್ಯವನ್ನು ಭಾರತ ಬರೋಬ್ಬರಿ 28 ವರ್ಷಗಳ ಬಳಿಕ ವಹಿಸಿತ್ತು. 1996ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತವು ಕೊನೆಯದಾಗಿ ಆಯೋಜಿಸಿತ್ತು. 

Exit mobile version