Site icon Vistara News

Nithya Menen: ನಿತ್ಯಾ ಮೆನನ್ ಅಜ್ಜಿ ನಿಧನ; ಭಾವುಕ ಪೋಸ್ಟ್‌ ಹಂಚಿಕೊಂಡ ನಟಿ!

Nithya Menen with grandmother

ಬೆಂಗಳೂರು: ಬಹುಭಾಷಾ ನಟಿ ನಿತ್ಯಾ ಮೆನನ್ (Nithya Menen) ಅಜ್ಜಿ ಇಹಲೋಕ ತ್ಯಜಿಸಿದ್ದಾರೆ. ತಮ್ಮ ವೃತ್ತಿಜೀವನದುದ್ದಕ್ಕೂ ಹಲವು ಪ್ರಯೋಗಾತ್ಮಕ ಪಾತ್ರಗಳಲ್ಲಿ ನಟಿಸಿರುವ ನಿತ್ಯಾ ಮೆನನ್ ಅವರು ತಮ್ಮ ಅಜ್ಜಿಯರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ತನ್ನ ಪ್ರೀತಿಯ ಅಜ್ಜಿಯನ್ನು ಕಳೆದುಕೊಂಡಿರುವ ವಿಷಯವನ್ನು ಸ್ವತಃ ನಿತ್ಯಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಈ ಸಂದರ್ಭದಲ್ಲಿ ನಿತ್ಯಾ ಅವರ ಭಾವನಾತ್ಮಕ ಪೋಸ್ಟ್ ವೈರಲ್‌ ಆಗಿದೆ.

ʻಯುಗವೊಂದು ಕೊನೆಗೊಂಡಿದೆ. ಗುಡ್ ಬೈ ಅಜ್ಜಿ ಮತ್ತು ನನ್ನ ಚೆರ್ರಿಮನ್. ನಾನು ನಿಮ್ಮನ್ನು ಬೇರೊಂದು ಜಗತ್ತಿನಲ್ಲಿ ಭೇಟಿಯಾಗುತ್ತೇನೆʼ ಎಂದು ಅವರು ಪೋಸ್ಟ್ ಮಾಡಿದ್ದಾರೆ. ತಮ್ಮ ಅಜ್ಜ, ಅಜ್ಜಿಯ ಜತೆಗೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಕನ್ನಡದ ಮೈನಾ, ಕೋಟಿಗೊಬ್ಬ2, ಸಿನಿಮಾಗಳಲ್ಲಿ ನಟಿಸಿರುವ ನಿತ್ಯಾ ಮೆನನ್ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಈ ಮೊದಲೇ ಅಜ್ಜನನ್ನು ಕಳೆದುಕೊಂಡಳು. ಈಗ ಇವರಿಬ್ಬರು ಜತೆಗಿಲ್ಲ ಎನ್ನುವುದನ್ನು ನಿತ್ಯಾ ಮೆನನ್‌ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನೋವಿನಿಂದಾಗಿ ಅವರು ತಮ್ಮ ಅಜ್ಜಿ ಮತ್ತು ಅಜ್ಜನೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮದುವೆಯೇ ಆಗದೆ ಗರ್ಭಿಣಿಯರಾದ್ರಾ ನಿತ್ಯಾ ಮೆನನ್​, ಪಾರ್ವತಿ ಮೆನನ್​? – ಏನಿದು ನಟಿಯರ ಇನ್​ಸ್ಟಾ ಪೋಸ್ಟ್​ !

ನಿತ್ಯಾ ಮೆನನ್ ಪೋಸ್ಟ್‌

ಇತ್ತೀಚೆಗಷ್ಟೇ ಪವರ್ ಸ್ಟಾರ್ ಪವನ್ ಕಲ್ಯಾಣ್ ಎದುರು ʻಭೀಮ್ಲಾ ನಾಯಕ್ʼ ಕಾಣಿಸಿಕೊಂಡಿದ್ದರು. ಮಾಲಿವುಡ್, ಕಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ ವೆಬ್ ಸೀರಿಸ್‌ಗಳಲ್ಲೂ ನಟಿಸುತ್ತಿದ್ದಾರೆ. ತಮಿಳು ಚಲನಚಿತ್ರಗಳಲ್ಲಿ ಮುಖ್ಯವಾಗಿ ನಟ ವಿಜಯ್ ಅವರೊಂದಿಗೆ ʻಮೆರ್ಸಲ್‌ʼನಲ್ಲಿ ನಟಿಸಿದ್ದಾರೆ.

Exit mobile version