Site icon Vistara News

Niveditha Gowda: ಸೃಜನ್‌, ಸಂಬರಗಿ, ಜೀವನಾಂಶ, ಮಗು; ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟ ಚಂದನ್‌-ನಿವೇದಿತಾ!

Niveditha Gowda Chandan Shetty Divorce Case

ಬೆಂಗಳೂರು: ಚಂದನ್‌ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ಡಿವೋರ್ಸ್‌ ಪಡೆದುಕೊಂಡಿರುವುದು ಗೊತ್ತೇ ಇದೆ. ಇನ್‌ಸ್ಟಾದಲ್ಲಿ ಪೋಸ್ಟ್‌ ಮೂಲಕ ಜೋಡಿ ಈ ಬಗ್ಗೆ ಅಧಿಕೃತ ಮಾಹಿತಿ ಕೂಡ ಹಂಚಿಕೊಂಡಿದೆ. ಈಗ ಇಬ್ಬರೂ ಒಟ್ಟಾಗಿ ಸುದ್ದಿಗೋಷ್ಠಿ ಕರೆದಿದ್ದಾರೆ. ಸುದ್ದಿಗೋಷ್ಠಿಗೆ ಇಬ್ಬರೂ ಪ್ರತ್ಯೇಕವಾಗಿ ಬಂದರು. ಡಿವೋರ್ಸ್‌ ವಿಚಾರ ಬಹಿರಂಗವಾದ ಬಳಿಕ ಕೆಲವು ವದಂತಿಗಳು ಹಬ್ಬಿದ್ದವು. ಈ ಬಗ್ಗೆ ಚಂದನ್‌ ಹಾಗೂ ನಿವೇದಿತಾ ಸ್ಪಷ್ಟನೆ ಕೊಟ್ಟಿದ್ದಾರೆ.

ಚಂದನ್‌ ಈ ಬಗ್ಗೆ ಮಾತನಾಡಿ ʻʻಮಾಧ್ಯಮದ ಮೇಲೆ ಇರುವ ಗೌರವ, ಸರಿಯಾದ ವಿಷಯವನ್ನು ಜನೆತೆಗೆ ತಲುಪಿಸುವ ಪ್ರಯತ್ನಕ್ಕೆ ನಾವು ಈಗ ನಿಮ್ಮ ಮುಂದೆ ಬಂದಿದ್ದೇನೆ. ಇದೇ 6ನೇ ತಾರಿಖು ಅರ್ಜಿ ಸಲ್ಲಿಸಿದ್ದೀವಿ. ನಮ್ಮಿಬ್ಬರಿಗೂ ನ್ಯಾಯಾಲಯ ಕಾನೂನಾತ್ಮಕವಾಗಿ ವಿಚ್ಛೇದನ ಕೊಟ್ಟಿದೆ. ತುಂಬ ಚೆನ್ನಾಗಿಯೇ ಇದ್ದರು, ಈಗ ಯಾಕೆ ದೂರ ಆದರು ಎಂದು ಹಲವರು ಪ್ರಶ್ನೆ ಕೇಳುತ್ತಲೇ ಇದ್ದರು. ಈ ಬಗ್ಗೆ ಈಗಾಗಲೇ ನಾವು ಸೋಷಿಯಲ್‌ ಮೀಡಿಯಾ ಮೂಲಕ ಪೋಸ್ಟ್‌ ಮಾಡಿದ್ದೇವೆ. ನಮ್ಮಿಬ್ಬರ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬುತ್ತಿವೆʼʼಎಂದರು.

ನಮ್ಮಿಬ್ಬರ ಆಲೋಚನೆ, ಜೀವನಶೈಲಿ ಬೇರೆ

ʻʻಮೊದಲಿಗೆ ನಾವಿಬ್ಬರೂ ದೂರ ಆಗಲು ಕಾರಣ, ನಮ್ಮಿಬ್ಬರ ಆಲೋಚನೆಗಳು ಬೇರೆ ಬೇರೆ. ನಿವೇದಿತಾ ಜೀವನಶೈಲಿ ಇನ್ನೊಂದು ಆಯಾಮ ಇತ್ತು. ನಾವಿಬ್ಬರು ಕೂಡ ಹಲವು ವರ್ಷಗಳಿಂದ ಅರ್ಥ ಮಾಡಿಕೊಂಡು ಸಾಗಬೇಕು ಎಂದು ಪ್ರಯತ್ನ ಪಟ್ಟಿದ್ದೇವು. ಆದರೆ ಇಬ್ಬರ ಜೀವನ ಶೈಲಿ ಬೇರೆಯಾಗಿತ್ತು. ಯಾರಿಗೂ ಯಾರ ಮೇಲೂ ಫೋರ್ಸ್‌ ಮಾಡಿಕೊಂಡು ಬದುಕಬಾರದು. ಹೀಗಾಗಿ ನಾವಿಬ್ಬರು ಒಮ್ಮತದಿಂದ ಒಟ್ಟಿಗೆ ನಿರ್ಧಾರ ಮಾಡಿಕೊಂಡು, ಖುಷಿಯಾಗಿ ಇರಬೇಕು ಎಂದು ಈ ನಿರ್ಧಾರಕ್ಕೆ ಬಂದಿದ್ದೇವೆ. ನಮ್ಮಿಬ್ಬರ ಮಧ್ಯೆ ಯಾವುದೇ ವೈಮನಸ್ಸು ಇಲ್ಲ. ಇಬ್ಬರ ಮಧ್ಯೆಯೂ ಗೌರವ ಇದೆ. ನಮಗೆ ಸ್ನೇಹಿತರು ಹಾಗೇ ನಮ್ಮ ಇನ್‌ಸ್ಟಾ ಫಾಲೋವರ್ಸ್‌ ಸಪೋರ್ಟ್‌ ಮಾಡಿದ್ದೀರಾ ತುಂಬ ಧನ್ಯವಾದʼʼಎಂದರು ಚಂದನ್‌.

ಇದನ್ನೂ ಓದಿ: Chandan Shetty: ಚಂದನ್-ನಿವೇದಿತಾ ಸಂಬಂಧ ಸರಿ ಮಾಡ್ತಾರಾ ಧ್ರುವ ಸರ್ಜಾ? ಪ್ರಥಮ್ ಕೊಟ್ಟಿದ್ದಾರೆ ಕ್ಲೂ!

ಮಕ್ಕಳ ವಿಚಾರಕ್ಕೆ ದೂರ ಆದ್ರಾ?

ʻʻನಮ್ಮಿಬ್ಬರ ವೈಯಕ್ತಿಕ ವಿಚಾರವನ್ನು ಈಗ ಬೇರೆ ರೀತಿಯಲ್ಲಿ ಸೃಷ್ಟಿ ಮಾಡುತ್ತಿರುವ ಕಾರಣ ಇಲ್ಲಿಗೆ ಬಂದಿದ್ದೇವೆ. . ನಿವೇದಿತಾ ಅವರು ಜೀವನಾಂಶ ಪಡೆದಿಲ್ಲ. ಅವರಿಗೆ ನಾನು ಕೊಟ್ಟಿಲ್ಲ ʼʼಎಂದರು ಚಂದನ್‌. ʻʻಮಕ್ಕಳು ವಿಚಾರಕ್ಕೆ ನಾವಿಬ್ಬರೂ ದೂರ ಆಗಿದ್ದೇವೆ ಎಂಬುದು ಸುಳ್ಳು. ನಿವೇದಿತಾ ಅವರಿಗೆ ಸಿನಿಮಾದಲ್ಲಿ ಒಳ್ಳೆಯ ಕರಿಯರ್‌ ಇದೆ. ನನಗೂ ತುಂಬ ಪ್ಲ್ಯಾನ್ಸ್‌ ಇದೆ. ಈ ಎಲ್ಲ ವದಂತಿ ಸುಳ್ಳು. ಅವರು ಯಾರ ಮೇಲೆ ಡಿಪೆಂಡ್‌ ಆಗಿಲ್ಲ ಕೂಡ. ಮೂರನೇ ವ್ಯಕ್ತಿಯನ್ನು ಸಂಬಂಧಿಸಿ ಸಂಬಂಧ ಕೂಡ ಕಲ್ಪಿಸುತ್ತಿದ್ದಾರೆ. ಆದರೆ ಅವರು ನಮಗೆ ಫ್ಯಾಮಿಲಿ ತರ. ಆ ವ್ಯಕ್ತಿ ಜತೆ ಹೆಸರು ಸೇರಿಸಿದ್ದು ಸರಿಯಲ್ಲ. ಇದು ಕನ್ನಡಿಗರಿಗಾ ನಮಗೆ ಶೋಭೆ ಅಲ್ಲʼʼ ಎಂದರು.

ನಾನು ಯಾರಿಗೂ ಸ್ನೇಹಿತ ಅಲ್ಲ, ಆ ಸಂದರ್ಶನ ಸುಳ್ಳು!

ಬೇರೆ ಕಡೆ ನಾನು ಸಂದರ್ಶನ ಒಬ್ಬರು ಕೊಟ್ಟಿರುವುದು ನೋಡಿದೆ. ನಾನು ಯಾರಿಗೂ ಫ್ರೆಂಡ್‌ ಅಂದಿಲ್ಲ, ಆ ವ್ಯಕ್ತಿ ಜತೆ ನಾನು ಏನೂ ಆ ತರ ಮಾತನಾಡಿಲ್ಲ. ಈ ರೀತಿ ಅವರು ಮಾತನಾಡಿದ್ದು ಸುಳ್ಲು. ಸುಳ್ಳು ಹೇಳಿಕೆ ಕೊಟ್ಟಿದ್ದಾರೆ. ಬೇರೆ ಅವರ ವೈಯಕ್ತಿಕ ಜೀವನ ಬಗ್ಗೆ ಯಾಕೆ ಹೀಗೆ ಮಾತನಾಡುತ್ತಿದ್ದೀರಾ ಗೊತ್ತಿಲ್ಲ. ನಾವು ಪೋಷಕರು ಜತೆ ಮಾತನಾಡಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಮ್ಮಿಬ್ಬರ ಮಧ್ಯೆ ಇಲ್ಲದೇ ಇರುವ ಉಹಾ ಪೋಹಾ ಬೀಜ ಬಿತ್ತಬೇಡಿ. ಇಲ್ಲಿಗೆ ಈ ವಿಚಾರ ನಿಲ್ಲಿಸಿ. ವದಂತಿಗಳಿಗೆ ಕಿವಿ ಕೊಡಬೇಡಿ. ಆದರೆ ನಾವು ಬ್ಯಾಲೆನ್ಸ್‌ ಮಾಡೋಕೆ ನೋಡಿದ್ವಿ ಆದರೆ ಆಗಿಲ್ಲʼʼಅಷ್ಟೇ ಅಂದರು.

ಬೆಂಬಲ ಇರಲಿ

ʻʻಕೊನೆದಾಗಿ ನಮಗೆ ಸಪೋರ್ಟ್‌ ಮಾಡಿದ ಫ್ಯಾನ್ಸ್‌ ಮಾಧ್ಯಮಕ್ಕೆ ಧನ್ಯವಾದ. ಇನ್ನೊಂದು ನನ್ನ ಬಗ್ಗೆ ವಿಡಿಯೊವೊಂದು ಹರಿದಾಡುತ್ತಿತ್ತು. ನಾನು ಡಿಪ್ರೆಶನ್‌ಗೆ ಹೋಗಿದ್ದೆ ಎಂದು. ಅದು 2023ರಲ್ಲಿ ಮಾಡಿದ ವಿಡಿಯೊ. ಆ ವಿಡಿಯೊ ನಾನು ಸಿನಿಮಾ ಬಗ್ಗೆ ಮಾತನಾಡಿದ್ದೆ. ಆದರೆ ಸೋಷಿಯಲ್‌ ಮೀಡಿಯಾದಲ್ಲಿ ಕೊನೆಯಲ್ಲಿ ನಾನು ಮಾತನಾಡಿದ ಮಾತುಗಳನ್ನು ಕಟ್‌ ಮಾಡಿ, ಈ ಬೇರೆ ವಿಚಾರಕ್ಕೆ ಲಿಂಕ್‌ ಮಾಡಿದ್ದಾರೆ. ಕೆಟ್ಟ ಸುದ್ದಿ ಬೇಗ ಹರಡುತ್ತೆ. ಈ ರೀತಿ ಅಪ್ರಪಚಾರ ಮಾಡಬೇಡಿ. ಸ್ವಲ್ಪ ಸಮಯ ಕೂಡ ನಾನು ತೆಗೆದುಕೊಳ್ಳುತ್ತಿದ್ದೇನೆ. ನನ್ನ ಸಿನಿಮಾಗಳು ಬರುತ್ತಿವೆ. ಹೊಸ ಸಾಂಗ್‌ಗಳು ಬರುತ್ತಿವೆ. ನಿವೇದಿತಾ ಅವರು ಕೂಡ ಹಲವು ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ಮೇಲೆ ಸಹಕಾರ ಇರಲಿʼʼಎಂದರು.

ಇನ್ನು ನಿವೇದಿತಾ ಕೂಡ ʻʻವದಂತಿಗಳು ಕೇಳಿ ಬೇಜಾರಾಯ್ತು. ಫ್ಯಾಮಿಲಿ ಎಲ್ಲರಿಗೂ ಇರತ್ತೆ, ಬೇರೆಯವರ ಇಮೋಷನ್‌ ಹರ್ಟ್‌ ಮಾಡಬೇಡಿ. ಬೇಸ್‌ಲೆಸ್‌ ಆಗಿ ಏನೇನೊ ಹೇಳಬಾರದು. ನಾವಿಬ್ಬರೂ ಒಮ್ಮತದಿಂದ ನಿರ್ಧಾರ ಮಾಡಿಯೇ ಡಿವೋರ್ಸ್‌ ಪಡೆದುಕೊಂಡಿದ್ದೇವೆ. ನಾವು ಸೆಲೆಬ್ರಿಟಿಯಾಗಿ ನಮ್ಮ ಫಾಲ್ಲೋವರ್ಸ್ ಯಾರಿಗೂ ಡಿವೋರ್ಸ್ ಕೊಡಿ ಎಂದು ಪ್ರಚೋದನೆ ಕೊಡುತ್ತಿಲ್ಲ ʼʼಎಂದರು.

ಕೊನೆಯದಾಗಿ ಚಂದನ್‌ ಮಾತನಾಡಿ ʻʻನಾನು ಮಾರ್ನಿಂಗ್ ಪರ್ಸನ್, ನಿವೇದಿತಾ ನೈಟ್ ಪರ್ಸನ್ ಇಲ್ಲಿಂದಲೇ ಸಮಸ್ಯೆ ಶುರುವಾಗಿತ್ತು. ನಾನು ಬೆಳಗ್ಗೆ ಬೇಗ ಎದ್ದೇಳ್ತಿನಿ, ನಿವೇದಿತಾ ಲೇಟ್ ಆಗಿ ಎದೆಳ್ತಾಳೆ. ಇಬ್ರಿಗೂ ಟೈಮ್ ಕೊಡೋಕೆ ಆಗುತ್ತಿರಲಿಲ್ಲ. 1 ವರ್ಷದಿಂದ ದೂರ ಆಗುವ ಬಗ್ಗೆ ಮಾತುಕಥೆ ಇತ್ತು. ಕ್ಯಾಂಡಿ ಕ್ರಶ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೇವೆ. ಒಂದು ದಿನದ ಶೂಟಿಂಗ್‌ ಬಾಕಿ ಇದೆ. ಇಬ್ಬರೂ ಭಾಗಿ ಆಗ್ತೇವೆ. ವೈಯಕ್ತಿಯ ಸಮಸ್ಯೆಯನ್ನು ಪ್ರೊಫೆಷನಲ್‌ಗೆ ತರೋದಿಲ್ಲʼʼಎಂದರು ಚಂದನ್‌.

Exit mobile version