Site icon Vistara News

Niveditha Gowda | ಸೋಲೋ ಟ್ರಿಪ್‌ನಲ್ಲಿ ನಿವೇದಿತಾ ಗೌಡ: ಫೋಟೊ ವೈರಲ್‌!

Niveditha Gowda (Solo trip)

ಬೆಂಗಳೂರು: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ನಿವೇದಿತಾ (Niveditha Gowda) ಗೌಡ ಇಂಡೋನೇಷ್ಯಾದ ಬಾಲಿಯಲ್ಲಿ ಸೋಲೋ ಟ್ರಿಪ್‌ ಎಂಜಾಯ್‌ ಮಾಡುತ್ತ ಇದ್ದಾರೆ. ಇತ್ತೀಚೆಗೆ ತಮ್ಮ ಎಲ್ಲ ಕೆಲಸಕ್ಕೂ ಬ್ರೇಕ್ ಹಾಕಿ, ಬಾಲಿಯಲ್ಲಿ ನಟಿ ಕಾಲ ಕಳೆಯುತ್ತಿದ್ದಾರೆ. ಇದೀಗ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಪತಿ ಚಂದನ್‌ನ ಬಿಟ್ಟು ಸೋಲೋ ಟ್ರಿಪ್‌ ಅನ್ನು ನಿವೇದಿತಾ ಅವರು ಎಂಜಾಯ್ ಮಾಡುತ್ತಿದ್ದು, ಇನ್‌ಸ್ಟಾದಲ್ಲಿ ಅನುಭವ ಹಂಚಿಕೊಂಡಿದ್ದಾರೆ. ʻʻಸೋಲೋ ಟ್ರಿಪ್‌ನಲ್ಲಿ ನಾನು ರಾಜಕುಮಾರಿಯಂತೆ ಭಾಸವಾಯಿತು. ಇದು ನನ್ನ ಪ್ರಯಾಣವನ್ನು ಇನ್ನಷ್ಟು ಖುಷಿಯಾಗಿರಿಸಿದೆ. ಸೋಲೋ ಟ್ರಿಪ್‌ ಮೊದಲ ದಿನ ತುಂಬ ಕಷ್ಟಕರ ಎಂದೆನಿಸಿತು. ಒಬ್ಬಂಟಿಯಾಗಿ ತಿನ್ನುವುದು, ಅಪರಿಚಿತರೊಂದಿಗೆ ಬೆರೆಯುವುದು ಹೇಗೆ ಎಂದು ನನಗೆ ತಿಳಿದಿರಲಿಲ್ಲ. ನಾನು ಮೊದಲ ದಿನ ಅಳುತ್ತಿದ್ದೆ. ಆದರೆ ಈಗ ಈ ಪ್ರಯಾಣ ನೆನಪುಳಿಯುವಂತೆ ಮಾಡಿದೆ. ಈ ಅನುಭವವು ಹೊಸ ಸಂಸ್ಕೃತಿಗಳ ಬಗ್ಗೆ ತಿಳಿದುಕೊಳ್ಳಲು ನನಗೆ ಸಹಾಯ ಮಾಡಿದೆ ಮತ್ತು ಪ್ರತಿ ದಿನವು ಇತರಕ್ಕಿಂತ ಹೆಚ್ಚು ರೋಮಾಂಚನಕಾರಿಯಾಗಿದೆ. ನಾನು ಹಿಂದೆಂದಿಗಿಂತಲೂ ಹೆಚ್ಚು ಜವಾಬ್ದಾರಿಯನ್ನು ಹೊಂದಿದ್ದೇನೆʼʼಎಂದು ಪೋಸ್ಟ್‌ ಮೂಲಕ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Golden Star Ganesh | ಇಂದು ರಾಜ್ಯಾದ್ಯಂತ ಬಿಡುಗಡೆಗೊಂಡ ʻತ್ರಿಬಲ್‌ ರೈಡಿಂಗ್‌ʼ ಸಿನಿಮಾ

ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆ್ಯಕ್ಟಿವ್‌ ಇರುವ ನಿವೇದಿತಾ ಅವರಿಗೆ ಚಂದನ್‌ ಶೆಟ್ಟಿ ಎಲ್ಲಿ ಎಂದು ನೆಟ್ಟಿಗರು ಕಮೆಂಟ್‌ ಮೂಲಕ ವ್ಯಕ್ತಪಡಿಸಿದ್ದಾರೆ. ನಿವೇದಿತಾ ಅವರ ಬಗೆ ಬಗೆಯ ಫೋಟೊ ನೋಡಿ ಅವರ ಅಭಿಮಾನಿಗಳು ಕಮೆಂಟ್‌ ಮೂಲಕ ಎಂಜಾಯ್‌ ಮಾಡಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ | Kannada New Movie | ಪೃಥ್ವಿ ಅಂಬಾರ್‌-ಮಿಲನಾ ಅಭಿನಯದ `For Regn’ ರಿಲೀಸ್‌ ಡೇಟ್‌ ರಿವೀಲ್‌!

Exit mobile version