Site icon Vistara News

Karnataka Film Chamber: ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ಎನ್ ಎಮ್ ಸುರೇಶ್ ನಾಮಪತ್ರ

NM Suresh

ಬೆಂಗಳೂರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Karnataka Film Chamber) ಚುನಾವಣಾ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಸೆಪ್ಟಂಬರ್ 23ರಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯುತ್ತಿದೆ. ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಪ್ರತಿ ಬಾರಿಯೂ ಪೈಪೋಟಿ ಜೋರಾಗಿ ಇರಲಿದೆ. ಈ ಬಾರಿ ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿ ನಿರ್ಮಾಪಕ ಎನ್ ಎಮ್ ಸುರೇಶ್ ಕೂಡ ಇದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ಎನ್ ಎಮ್ ಸುರೇಶ್ ಸ್ಪರ್ಧೆ ಮಾಡುತ್ತಿದ್ದು ಸೆಪ್ಟಂಬರ್ 8ರಂದು ನಾಮಪತ್ರ ಸಲ್ಲಿಸಿದ್ದಾರೆ. ಫಿಲ್ಮ್ ಚೇಂಬರ್‌ಗೆ ಆಗಮಿಸಿದ ಎನ್ ಎಮ್ ಸುರೇಶ್, ಡಾ. ರಾಜ್ ಕುಮಾರ್ ಪ್ರತಿಮೆಗೆ ಹಾರ ಹಾಕಿ ನಮಸ್ಕರಿಸಿ ಫಿಲ್ಮ್ ಚೇಂಬರ್‌ಗೆ ಎಂಟ್ರಿ ಕೊಟ್ಟರು. ಸಾರಾ ಗೋವಿಂದ್ ಬಣ ಸೇರಿದಂತೆ ಆನೇಕ ವಿತರಕರು, ನಿರ್ಮಾಪರು ದೊಡ್ಡ ಮಟ್ಟದಲ್ಲಿ ಸೇರಿ ಎನ್ ಎಮ್ ಸುರೇಶ್ ಅವರಿಗೆ ಸಾಥ್ ನೀಡಿದರು. ಬಳಿಕ ನಾಮಪತ್ರ ಸಲ್ಲಿಸಿ ಮಾತನಾಡಿದ ಎನ್ ಎಮ್ ಸುರೇಶ್, ‘ಸಾರಾ ಗೋವಿಂದ್ ನನ್ನ ಮೇಲಿನ ಪ್ರೀತಿಗಾಗಿ ಬಂದಿದ್ದಾರೆ. ನನಗೆ ಇವತ್ತು ಈ ಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ. ಒಳ್ಳೆಯ ಅಭ್ಯರ್ಥಿಗಳನ್ನು ಗೆಲ್ಲಿಸಿ. ದೊಡ್ಡ ಸಮಸ್ಯೆಗಳಿವೆ ಅವುಗಳನ್ನು ಸರಿಪಡಿಸುವ ಕೆಲಸ ಖಂಡಿತ ಮಾಡುತ್ತೇನೆ. ಅವಕಾಶ ಕೋಡಿ’ ಎಂದು ಕೇಳಿಕೊಂಡರು.

ಸಾರಾ ಗೋವಿಂದ್ ಮಾತನಾಡಿ, ‘ ಈ ಬಾರಿಯ ಚುನಾವಣೆ ಪ್ರಾಮುಖ್ಯತೆ ಪಡೆದು ಕೊಂಡಿದೆ. ಪೈಪೋಟಿಯಲ್ಲಿ ನಡೆಯುತ್ತಿರುವುದು ಖುಷಿ ಆಗುತ್ತಿದೆ. ಎನ್ ಎಮ್ ಕುಮಾರ್ ಎಲ್ಲರ ಪ್ರೀತಿ, ಬೆಂಬಲದಿಂದ ನಾಮಪತ್ರ ಸಲ್ಲಿಸಿದ್ದಾರೆ. ಎನ್ ಎಮ್ ಸುರೇಶ್ ಅವರಿಗೆ ಬೆಂಬಲ ನೀಡುತ್ತಿದ್ದೇನೆ. ಅವರವರ ಯೋಗ್ಯತೆ ನೋಡಿಕೊಂಡು ಗೆಲ್ಲಿಸಿ’ ಎಂದು ಹೇಳಿದರು.

ಇದನ್ನೂ ಓದಿ: KFCC Election: ಚುನಾವಣೆಗೆ ಒತ್ತಾಯಿಸಿ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ

Karnataka Film Chamber

2003ರಲ್ಲಿ ರಿಲೀಸ್ ಆದ ಹಿಟ್ ಎಕ್ಸ್‌ಕ್ಯೂಸ್‌ಮೀ ಸಿನಿಮಾಗೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡ ಎನ್ ಎಮ್ ಸುರೇಶ್ ಬಳಿಕ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಕಳೆದ ಬಾರಿ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಆಗಿದ್ದ ಸುರೇಶ್ ಇದೀಗ ಮೊದಲ ಬಾರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.

ಅಂದಹಾಗೆ ಈ ಬಾರೆಯ ಚುನಾವಣೆ ವಿಳಂಬವಾಗಿದೆ. ಅಂದುಕೊಂಡಂತೆ ಆಗಿದ್ದರೆ ಮೇ ತಿಂಗಳಲ್ಲೆ ಚುನಾವಣೆ ನಡೆದು ಫಲಿತಾಂಶ ಕೂಡ ಹೊರಬೀಳಬೇಕಿತ್ತು. ಆದರೆ ಈ ಬಾರಿ ಸೆಪ್ಟಂಬರ್‌ನಲ್ಲಿ ನಡೆಯುತ್ತಿದೆ.

ಇನ್ನು ಕಳೆದ ಬಾರಿ 2022ರಲ್ಲಿ ನಡೆದ ಚುನಾವಣೆಯಲ್ಲಿ ಭಾ.ಮ. ಹರೀಶ್​ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅವರ ಅಧಿಕಾರದ ಅವಧಿ 2023ರ ಮೇ 28ಕ್ಕೆ ಅಂತ್ಯವಾಗಿದೆ. ಹಾಗಿದ್ದರೂ ಕೂಡ ಚುನಾವಣೆ ನಡೆಸಿರಲಿಲ್ಲ. ಇದೀಗ ಚುನಾವಣೆ ದಿನಾಂಕ ನಿಗಧಿಯಾಗಿದ್ದು ಎಮ್ ಎನ್ ಸುರೇಶ್ ನಾಮಪತ್ರ ಕೂಡ ಸಲ್ಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಎಮ್ ಎನ್ ಸುರೇಶ್ ಗೆಲುವು ದಾಖಲಿಸಿವುದು ಬಹುತೇಕ ಖಚಿತವಾಗಿದೆ.

Exit mobile version