ಬೆಂಗಳೂರು : ಬಾಲಿವುಡ್ ನಟ ಸಲ್ಮಾನ್ ಖಾನ್ ಒಂದರ ಹಿಂದೊರಂತೆ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಘೋಷಿಸಲ್ಪಟ್ಟ ಹೊಸ ಚಿತ್ರ ‘ನೋ ಎಂಟ್ರಿ ಮೆ ಎಂಟ್ರಿ’ (No Entry Mein Entry) ತೀವ್ರ ಕುತೂಹಲ ಮೂಡಿಸಿದ್ದು, ಈ ಚಿತ್ರದಲ್ಲಿ ಯಾರೆಲ್ಲಾ ಅಭಿನಯಿಸಲಿದ್ದಾರೆ ಎಂಬುದು ಸಲ್ಲು ಅಭಿಮಾನಗಳ ನಡುವೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಹೊಸ ಚಿತ್ರ ʼನೋ ಎಂಟ್ರಿ ಮೆ ಎಂಟ್ರಿʼ 2005 ರಲ್ಲಿ ತೆರೆ ಕಂಡಿದ್ದ No Entry ಯ ಮುಂದುವರಿದ ಭಾಗ ಎನ್ನಲಾಗಿದ್ದು, ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರ ತಂಡ ನೀಡಿಲ್ಲ. ಆದರೆ ಈ ಚಿತ್ರದಲ್ಲಿ 10 ಮಂದಿ ನಟಿಯರು ಅಭಿನಯಿಸಲಿದ್ದಾರೆ ಎಂಬುದನ್ನು ಚಿತ್ರದ ನಿರ್ದೇಶಕ ಅನೀಸ್ ಬಾಜ್ಮಿ ಈಗ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈ ಬಗ್ಗೆ ಬಾಲಿವುಡ್ನಲ್ಲಿ ಸಾಕಷ್ಟು ವದಂತಿ ಹರಡಿತ್ತು.
“ಹೌದು, ಈ ಸಿನಿಮಾಕ್ಕೆ ೧೦ ಹುಡುಗಿಯರು ಬೇಕಾಗಿದ್ದಾರೆ. ಈ ಸಿನಿಮಾದಲ್ಲಿ ೧೦ ಮಂದಿ ನಟಿಯರಿರಲಿದ್ದಾರೆʼʼ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈಗಾಗಲೇ ಅನೀಸ್ ಬಾಜ್ಮಿ ಸಲ್ಲುವನ್ನು ಮೂರ್ನಾಲ್ಕು ಬಾರಿ ಭೇಟಿಯಾಗಿ ಈ ಚಿತ್ರದ ಕುರಿತು ಚರ್ಚಿಸಿದ್ದಾರಂತೆ. ಸದ್ಯಕ್ಕೆ ಸಲ್ಮಾನ್ ಖಾನ್ ʼಕಭಿ ಈದ್ ಕಭಿ ದಿವಾಲಿʼ (Kabhi Eid Kabhi Diwali) ಚಿತ್ರದ ಶೂಟಿಂಗ್ನಲ್ಲಿ ಬ್ಯೂಸಿಯಾಗಿದ್ದಾರೆ. ಇದರ ನಡುವೆಯೇ ನೋ ಎಂಟ್ರಿ ಮೇ ಎಂಟ್ರಿ ಚಿತ್ರಕ್ಕಾಗಿ ಸಿದ್ಧತೆ ನಡೆಯುತ್ತಿದೆ.
ಈ ಚಿತ್ರದಲ್ಲಿ ಶಾರುಖ್ ಖಾನ್, ಅನಿಲ್ ಕಪೂರ್, ಫರ್ದಿನ್ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ. ಹತ್ತು ಮಂದಿ ನಟಿಯರು ಯಾರ್ಯಾರು ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಈಗಾಗಲೇ ಚಿತ್ರ ನಿರ್ಮಾಪಕರು ʼಪುಷ್ಪ’ ಬ್ಯೂಟಿ ಸಮಂತಾ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದ್ದು, ಈ ಚಿತ್ರದಲ್ಲಿ ದಕ್ಷಿಣ ಭಾರತದ ಈ ಇಬ್ಬರು ಖ್ಯಾತ ನಟಿಯರು ಕಾಣಿಸಿಕೊಳ್ಳಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಈ ಚಿತ್ರದ ಮೊದಲ ಭಾಗದಲ್ಲಿ ನಟಿಸಿದ್ದ ನಾಯಕಿಯರಾದ ಲಾರಾ ದತ್ತಾ, ಬಿಪಾಶಾ ಬಸು, ಇಶಾ ಡಿಯೋಲ್ ಎರಡನೇ ಭಾಗದಲ್ಲಿಯೂ ನಟಿಸುವುದು ಅನುಮಾನ ಎನ್ನಲಾಗುತ್ತಿದೆ.
ಇದನ್ನೂ ಓದಿ | Vikrant Rona Film: ಹಿಂದಿಯಲ್ಲಿ ವಿತರಣೆ ಮಾಡಲಿದ್ದಾರೆ ನಟ ಸಲ್ಮಾನ್ ಖಾನ್