Site icon Vistara News

Rashmika Mandanna | ದಕ್ಷಿಣದ ರೊಮ್ಯಾಂಟಿಕ್‌ ಹಾಡುಗಳನ್ನು ಕಡೆಗಣಿಸುವಷ್ಟು ಮೂರ್ಖಳಲ್ಲ : ರಶ್ಮಿಕಾ ಮಂದಣ್ಣ

Rashmika Mandanna

ಬೆಂಗಳೂರು : ನಟಿ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಹೇಳಿಕೆಗಳಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಬಾರಿ ಟ್ರೋಲಿಗೆ ಒಳಗಾಗುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾವು ಎದುರಿಸಿದ ಸಮಸ್ಯೆಗಳು, ಅವರ ಮುಂಬರುವ ಚಲನಚಿತ್ರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಾವು ವಿವಾದಕ್ಕೆ ಸಿಲುಕುತ್ತಿರುವಕ್ಕೆ ಮುಖ್ಯ ಕಾರಣ, ನನಗೆ ಸರಿಯಾಗಿ ಸಂಹವನ ಮಾಡಲು ಅಥವಾ ತಾನು ಅಂದುಕೊಂಡಿದ್ದನ್ನು ಸರಿಯಾದ ರೀತಿಯಲ್ಲಿ ಹೇಳಲು ಬರದೇ ಇರುವುದೇ ಕಾರಣ ಎಂದಿದ್ದಾರೆ. 

ಈ ಹಿಂದೆ ಬಾಲಿವುಡ್ ಹಾಡುಗಳು ತುಂಬಾನೇ ರೊಮ್ಯಾಂಟಿಕ್ ಆಗಿರುತ್ತದೆ. ಅದೇ ದಕ್ಷಿಣ ಭಾರತದ ಸಿನಿಮಾ ಹಾಡುಗಳು ಮಸಾಲಾ ಹಾಗೂ ಐಟಂ ಸಾಂಗ್‌ಗಳಾಗಿರುತ್ತದೆ ” ಎಂದು ಹೇಳಿದ್ದರು. ಈ ಹೇಳಿಕೆ ದಕ್ಷಿಣ ಭಾರತದ ಸಿನಿಪ್ರಿಯರನ್ನು ಕೆರಳಿತ್ತು. ಈ ಬಗ್ಗೆ ನಟಿ ಮಾತನಾಡಿ ʻʻತೆಲುಗು ಮತ್ತು ತಮಿಳು ಚಿತ್ರಗಳ ಹಾಡುಗಳನ್ನು ಕಡೆಗಣಿಸುವಷ್ಟು ಮೂರ್ಖಳು ನಾನಲ್ಲ. ನಾನು ಆಡಿದ ಮಾತುಗಳನ್ನು ಸದಾ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ ಅಥವಾ ತಪ್ಪಾಗಿ ಜನರಿಗೆ ತಲುಪುತ್ತಿದೆ. ಇದಕ್ಕೆ ಕಾರಣ ನನ್ನ ಕಳಪೆ ಸಂಹವನ. ದಕ್ಷಿಣದ ಅದ್ಭುತ ರೊಮ್ಯಾಂಟಿಕ್ ಹಾಡುಗಳನ್ನು ಮರೆತಿಲ್ಲ. ಆದರೆ ಅದನ್ನು ಬ್ಯಾಲೆನ್ಸಿಂಗ್ ಆಗಿ ಹೇಳಲು ನನಗೆ ಬರಲಿಲ್ಲʼʼ ಎಂದು ರಶ್ಮಿಕಾ ಈ ವೇಳೆ ಮಾತನಾಡಿದ್ದಾರೆ.ʼʼ ಎಂದು ಒಪ್ಪಿಕೊಂಡಿದ್ದಾರೆ ರಶ್ಮಿಕಾ.

ಇದನ್ನೂ ಓದಿ | Rashmika Mandanna | ಸವಾಲಿನ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ, ʻಮಿಷನ್‌ ಮಜ್ನು’ ತಯಾರಿ ಬಗ್ಗೆ ಬಾಯ್ಬಿಟ್ಟ ನಟಿ!

ಏನಿದು ವಿವಾದ?
ತಮ್ಮ ಎರಡನೇ ಬಾಲಿವುಡ್‌ ಸಿನಿಮಾ ʻಮಿಷನ್‌ ಮಜ್ನುʼ ಸಿನಿಮಾ ಹಾಡುಗಳನ್ನು ರಿಲೀಸ್ ಮಾಡುವ ವೇಳೆ ರಶ್ಮಿಕಾ ಮಂದಣ್ಣ, ತಮ್ಮ ಮೇಲೆ ಬಾಲಿವುಡ್ ಹಾಡುಗಳು ಹೇಗೆ ಪ್ರಭಾವ ಬೀರಿವೆ ಎಂಬುದನ್ನು ಹೇಳಿದ್ದಾರೆ. ಈ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ನಟಿ ರಶ್ಮಿಕಾ. ವಿಡಿಯೊ ವೈರಲ್‌ ಆಗುತ್ತದಂತೆ ಕಮೆಂಟ್‌ ಮೂಲಕ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ʻʻರಶ್ಮಿಕಾ ನಿಮಗೆ ಎ ಆರ್ ರೆಹಮಾನ್ ಹಾಡುಗಳು, ಇಳಯರಾಜ ಹಾಡುಗಳು ಗೊತ್ತಿಲ್ಲವೇ? ತೆಲುಗು ಹಾಡುಗಳು ಮಾಸ್ ಹಾಗೂ ಐಟಂ ಸಾಂಗ್‌ಗಳಿರುತ್ತದೆ. ಬಾಲಿವುಡ್‌ ಐಟಂ ಸಾಂಗ್‌ಗಳಲ್ಲಿ ಹೆಚ್ಚು ವಿಕೃತವಿರುತ್ತದೆ ಎನ್ನುವುದನ್ನು ಹೇಳಬೇಕಿತ್ತು.” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ | Rashmika Mandanna | ‘ಕೂರ್ಗ್ ವರ್ಷದ ವ್ಯಕ್ತಿ 2022’ ಆಗಿ ಹೊರಹೊಮ್ಮಿದ ರಶ್ಮಿಕಾ ಮಂದಣ್ಣ

Exit mobile version