ಬೆಂಗಳೂರು: ಮಲಯಾಳಂ ಹಿರಿಯ ಸಂಗೀತ ನಿರ್ದೇಶಕ ಎನ್ ಪಿ ಪ್ರಭಾಕರನ್ (NP Prabhakaran) ಮಾರ್ಚ್ 10ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಎನ್.ಪಿ. ಪ್ರಭಾಕರನ್ ಅವರು ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು.
ತಿರುವನಂತಪುರಂನಿಂದ ಕೋಯಿಕ್ಕೋಡ್‌ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ರೈಲ್ವೆ ಅಧಿಕಾರಿಗಳು ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: Madhuri Dixit: ನಟಿ ಮಾಧುರಿ ದೀಕ್ಷಿತ್ ತಾಯಿ ಸ್ನೇಹಲತಾ ದೀಕ್ಷಿತ್ ನಿಧನ
ಪ್ರಭಾಕರನ್ ಅವರ ಸಂಯೋಜನೆಗಳನ್ನು ಯೇಸುದಾಸ್, ಪಿ ಜಯಚಂದ್ರನ್, ಉನ್ನಿ ಮೆನನ್ ಮತ್ತು ಸುಜಾತಾ ಸೇರಿದಂತೆ ಅನೇಕ ಜನಪ್ರಿಯ ಗಾಯಕರು ಹಾಡಿದ್ದಾರೆ. ಎನ್ ಪಿ ಪ್ರಭಾಕರನ್ ಅವರು ಗಂಧವ ರಾತ್ರಿ (Gandhava Rathri,), ಅಲಕಾನಂದ (Alakananda) ಮುಂತಾದ ಅನೇಕ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅವರು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಕೆಲವು ಚಿತ್ರಗಳಲ್ಲಿ ಪೂನಿಲವು (Poonilavu), ಅಲಕಾನಂದ (Alakananda), ಅನಪ್ಪರ ಅಚಮ (Anappara Achama), ಇವಾಲ್ ದ್ರೌಪದಿ (Ival Droupadi) ಮತ್ತು ಅನುಯಾತ್ರ (Anuyathra).