ಬೆಂಗಳೂರು: ನಂದಮೂರಿ ತಾರಕ ರತ್ನ (Nandamuri Taraka Ratna) ಅವರ ನಿಧನದಿಂದಾಗಿ ಎನ್‌ಟಿಆರ್ 30ರ (NTR 30) ಉದ್ಘಾಟನಾ ಸಮಾರಂಭವನ್ನು ಮುಂದೂಡಲಾಗಿದೆ. ಈವೆಂಟ್ ಫೆಬ್ರವರಿ 24 ರಂದು ನಡೆಯಬೇಕಿತ್ತು. ಆದರೆ ಜೂನಿಯರ್ ಎನ್‌ಟಿಆರ್ ಅವರ ಸೋದರ ಸಂಬಂಧಿ ನಂದಮೂರಿ ತಾರಕರತ್ನ ಅವರ ನಿಧನದಿಂದಾಗಿ ಚಲನಚಿತ್ರದ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ತೆಲುಗಿನ ಖ್ಯಾತ ನಟ ಎನ್.ಟಿ.ರಾಮರಾವ್ ಅವರ ಮೊಮ್ಮಗ, ಜೂನಿಯರ್ ಎನ್‌ಟಿಆರ್ ಅಣ್ಣ ನಂದಮೂರಿ ತಾರಕರತ್ನ. ನಂದಮೂರಿ ತಾರಕರತ್ನ ಅವರು ತೆಲುಗು ಚಿತ್ರರಂಗದ ೨೨ ಸಿನಿಮಾಗಳಲ್ಲಿ ನಟಿಸಿದರೂ, ಅವರು ವಿಭಿನ್ನ ಪಾತ್ರಗಳ ಮೂಲಕ ಜನರ ಮನ ಸೆಳೆದಿದ್ದರು. ಅಲ್ಲದೆ, ಅಜ್ಜನಂತೆ ನಂದಮೂರಿ ತಾರಕರತ್ನ ಅವರೂ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರು. ಟಿಡಿಪಿ ಪರ ಅವರು ಪ್ರಚಾರ ಮಾಡುವ ವೇಳೆಯೇ ಅವರಿಗೆ ಹೃದಯಾಘಾತವುಂಟಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ದುರಂತವೇ ಸರಿ.
ಇದನ್ನೂ ಓದಿ: Janhvi Kapoor: ಜ್ಯೂ. ಎನ್‌ಟಿಆರ್ 30 ಸಿನಿಮಾದಲ್ಲಿ ಜಾಹ್ನವಿ ಕಪೂರ್?
ತೆಲುಗು ಪ್ರಚಾರಕ ವಂಶಿ ಕಾಕಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ, ” ಫೆಬ್ರವರಿ 24 ರಂದು ನಡೆಯಬೇಕಿದ್ದ ಎನ್‌ಟಿಆರ್ 30 ಉದ್ಘಾಟನಾ ಸಮಾರಂಭವನ್ನು ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.”ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Taraka Ratna: ತಾರಕ ರತ್ನಗೆ ಮುಂದುವರಿದ ಚಿಕಿತ್ಸೆ; ಆರೋಗ್ಯದ ಬಗ್ಗೆ ಮಾಹಿತಿ ಬಿಟ್ಟು ಕೊಡದ ಆಸ್ಪತ್ರೆ ಆಡಳಿತ ಮಂಡಳಿ
ಕೊರಟಾಲ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜನತಾ ಗ್ಯಾರೇಜ್ ನಂತರ ಎಎನ್‌ಟಿಆರ್ ಈ ಸಿನಿಮಾ ಮೂಲಕ ಕೊರಟಾಲ ಶಿವ ಅವರೊಂದಿಗೆ ಕೈ ಜೋಡಿಸುತ್ತಿದ್ದಾರೆ.