Site icon Vistara News

Ranveer Singh: ರಣವೀರ್‌ ಸಿಂಗ್‌ ಬೆತ್ತಲೆ ಫೋಟೊ ಇದೀಗ ಅಮೆರಿಕನ್ ಖ್ಯಾತ ಗಾಯಕನ ಆಲ್ಬಂ ಸಾಂಗ್‌ನಲ್ಲಿ!

Ranveer Singh used in Sufjan Stevens new album

ಅಮೆರಿಕನ್ ಗಾಯಕ-ಗೀತರಚನೆಕಾರ ಸುಫ್ಜಾನ್ ಸ್ಟೀವನ್ಸ್ (Sufjan Steven) ಅವರ ಹೊಸ ಬ್ರೇಕಪ್‌ ಆಲ್ಬಂ ಜಾವೆಲಿನ್ ಅ.7ರಂದು ಔಟ್‌ ಆಗಿದೆ. ಆದರೆ ಭಾರತೀಯ ಅಭಿಮಾನಿಗಳಿಗೆ ಗಮನ ಸೆಳೆಯುತ್ತಿರುವುದು ಯೂಟ್ಯೂಬ್‌ನಲ್ಲಿರುವ ಆಲ್ಬಂ ಕವರ್ ಫೋಟೊ. ಕಳೆದ ವರ್ಷ ಪೇಪರ್ ಮ್ಯಾಗಜೀನ್‌ಗಾಗಿ ರಣವೀರ್ ಸಿಂಗ್‌ (Ranveer Singh) ಫೋಟೋಶೂಟ್‌ ಮಾಡಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದರು. ಆದರೀಗ ಈ ಬ್ರೇಕಪ್‌ ಆಲ್ಬಂನಲ್ಲಿ ರಣವೀರ್ ಸಿಂಗ್‌ ಅವರ ನಗ್ನ ಫೋಟೊವನ್ನು ಬಳಸಿಕೊಂಡಿದೆ.

ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಅವರು ಮ್ಯಾಗಜಿನ್‌ ಒಂದಕ್ಕೆ ತಮ್ಮ ಬೆತ್ತಲೆ ಚಿತ್ರಗಳನ್ನು ಫೋಟೊಶೂಟ್‌ ಮಾಡಿಸಿದ್ದರು. ಇದು ಭಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಈ ವಿವಾದದ ಚಿತ್ರಗಳನ್ನು ಖಂಡಿಸಿ ರಣವೀರ್‌ ಸಿಂಗ್‌ ಮೇಲೆ ಎಫ್‌ಐಆರ್‌ ಕೂಡ ದಾಖಲಾಗಿತ್ತು. ಆದರೀಗ ಸುಫ್ಜಾನ್ ಸ್ಟೀವನ್ಸ್ ಅವರ ಹೊಸ ಆಲ್ಬಂನ್‌ನಲ್ಲಿ ರಣವೀರ್‌ ಅವರ ಈ ನಗ್ನ ಫೋಟೊ ಮತ್ತೆ ಕಾಣಿಸಿಕೊಂಡಿದೆ. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ʻʻಸುಫ್ಜಾನ್ ಎಂದಿಗೂ ನನ್ನ ನೆಚ್ಚಿನ ಗಾಯಕರಲ್ಲಿ ಒಬ್ಬರು. ಈ ಆಲ್ಬಮ್‌ ಪರಿಪೂರ್ಣವಾಗಿದೆ. ರಣವೀರ್‌ ಫೋಟೋ ಕಂಡೊಡನೆ ನನಗೆ ಆಘಾತವಾಯಿತು. ಗಾಯಕ ಹಾಗೂ ನಟನನ್ನು ನಾನು ಪ್ರೀತಿಸುತ್ತೇನೆʼʼ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻರಣವೀರ್‌ ತುಂಬ ಪ್ರತಿಭೆಯನ್ನು ಹೊಂದಿದ್ದಾರೆ. ಅವರಿಗೆ ಹಾಲಿವುಡ್‌ನಲ್ಲಿ ಅಭಿನಯಿಸುವ ಎಲ್ಲ ಲಕ್ಷಣವಿದೆʼʼ ಎಂದು ಕಮೆಂಟ್‌ ಮಾಡಿದ್ದಾರೆ.

ಮ್ಯಾಗಜಿನ್‌ವೊಂದಕ್ಕಾಗಿ ನಟ ರಣವೀರ್‌ ಸಿಂಗ್‌ ಫೋಟೊಶೂಟ್‌ನಲ್ಲಿ ಭಾಗಿಯಾಗಿದ್ದರು. ಅದರಲ್ಲಿ ಹಲವು ಬಗೆಯ ಬೆತ್ತಲೆ ಭಂಗಿಯಲ್ಲಿ ಫೋಟೊಗೆ ಪೋಸ್‌ ಕೊಟ್ಟಿದ್ದರು. ಆ ಫೋಟೊಗಳು ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. ಮೊದಲು ಮ್ಯಾಗಜಿನ್‌ ತಂಡವು ನಟನ ಫೋಟೊಗಳನ್ನು ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿತ್ತು. ಇದಾದ ಬಳಿಕ ರಣವೀರ್‌ ಸಿಂಗ್‌ ಅವರೂ ಪೋಸ್ಟ್‌ ಮಾಡಿಕೊಂಡಿದ್ದರು. ಮಹಿಳೆಯರಿಗೆ ಧಕ್ಕೆ ತರುವ ರೀತಿಯಲ್ಲಿ ರಣವೀರ್ ಸಿಂಗ್ ನಡೆದುಕೊಂಡಿದ್ದಾರೆ ಎಂದು ಕಾರಣ ಕೊಟ್ಟು ಎನ್‌ಜಿಒ ಸಂಸ್ಥೆಯೊಂದು ಮುಂಬೈನ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. 

ಇದನ್ನೂ ಓದಿ: Ranveer Singh: ʻನನ್ನ ಮಹಿʼಎಂದು ಧೋನಿ ಕೆನ್ನೆಗೆ ಮುತ್ತಿಟ್ಟ ರಣವೀರ್ ಸಿಂಗ್!

ರಣವೀರ್​ ಸಿಂಗ್​ ಅವರಿಗೆ ನೋಟಿಸ್​ ನೀಡಲಾಗಿತ್ತು. ಅಧಿಕಾರಿಯೊಬ್ಬರ ಹೇಳಿಕೆ ಪ್ರಕಾರ ʻʻರಣವೀರ್‌ ತಮ್ಮ ಹೇಳಿಕೆಯಲ್ಲಿ, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಏಳು ಫೋಟೊಗಳಲ್ಲಿ ಯಾವುದೂ ಅಶ್ಲೀಲವಾಗಿಲ್ಲ. ಅವರು ಒಳ ಉಡುಪು ಧರಿಸಿದ್ದರು ಎಂದು ಹೇಳಿದ್ದಾರೆ. ಅವರ ಖಾಸಗಿ ಭಾಗಗಳು ಗೋಚರಿಸುತ್ತಿವೆ ಎಂದು ದೂರುದಾರರು ಆರೋಪಿಸಿರುವ ಫೋಟೊವನ್ನು ಮಾರ್ಫ್ ಮಾಡಲಾಗಿದೆಯೇ ಹೊರತು ಫೋಟೊಶೂಟ್‌ನ ಭಾಗವಲ್ಲ ಎಂದು ಹೇಳಿಕೆ ನೀಡಿದ್ದರು. ಫೋಟೊಶೂಟ್ ಸಮಯದಲ್ಲಿ ತೆಗೆದ ಎಲ್ಲ ಫೋಟೊಗಳನ್ನು ಅವರು ನಮಗೆ ಒದಗಿಸಿದ್ದಾರೆ. ಪೊಲೀಸ್ ತಂಡವು ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಸಹ ಪರಿಶೀಲಿಸಿದ್ದು, ಅದರಲ್ಲಿ ದೂರುದಾರರು ನೀಡಿದ ಫೋಟೊ ಇಲ್ಲ” ಎಂದು ಹೇಳಿದ್ದರು.

Exit mobile version