ಬೆಂಗಳೂರು: ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್ (Ira Khan Nupur Wedding) ಅವರು ತಮ್ಮ ಬಹುಕಾಲದ ಗೆಳೆಯ, ಫಿಟ್ನೆಸ್ ತರಬೇತುದಾರ ನೂಪುರ್ ಶಿಖರೆ ಅವರನ್ನು ಜನವರಿ 3ರಂದು ವಿವಾಹವಾದರು. ಈ ಯುವಜೋಡಿ ರಿಜಿಸ್ಟರ್ ಮದುವೆಯಾಗಿದೆ. ಜನವರಿ 8ರಂದು ಉದಯ್‌ಪುರದಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನಡೆಯಲಿದೆ. ಇದರ ಜತೆಗೆ ಇದೀಗ ಇರಾ ಖಾನ್ ಹಾಗೂ ನೂಪುರ್ ಶಿಖರೆ ಮತ್ತು ತಮ್ಮ ಸ್ನೇಹಿತರ ಜತೆ ವರ್ಕೌಟ್ ಮಾಡುತ್ತಿರುವ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ʻವರ್ಕೌಟ್‌ಗಳಿಲ್ಲದೆಯೇ ಮದುವೆಯಾ? ವಾರ್ಮ್ ಅಪ್, ಪುಷ್-ಅಪ್‌ಗಳು. ವರ್ಕೌಟ್, ಹ್ಯಾಂಡ್‌ಸ್ಟ್ಯಾಂಡ್‌ಗಳು + ಚಿತ್ರಗಳು!!ʼʼಎಂದು ವರ್ಕೌಟ್ ಮಾಡುತ್ತಿರುವ ಫೋಟೊ ಜತೆ ಈ ಕ್ಯಾಪ್ಷನ್ ನೀಡಿದ್ದಾರೆ. ಇದಾದ ಬಳಿಕ ಇರಾ ಖಾನ್ ಅವರು ತಮ್ಮ ಪ್ರಿ ವೆಡ್ಡಿಂಗ್ ವಧುವಿನ ಉಡುಪಿನಲ್ಲಿ ಇರುವ ಫೋಟೊವನ್ನು ಸಹ ಹಂಚಿಕೊಂಡಿದ್ದಾರೆ.
ಜನವರಿ 13 ರಂದು, ಬಿಕೆಸಿ ಜಿಯೋ ಸೆಂಟರ್‌ನಲ್ಲಿ ಅದ್ಧೂರಿ ಆರತಕ್ಷತೆಯನ್ನು ಆಯೋಜಿಸಿದ್ದಾರೆ ಎನ್ನಲಾಗಿದೆ. ಅನೇಕ ಗಣ್ಯರನ್ನು ಇನ್ವೈಟ್ ಮಾಡಿದ್ದಾರೆ ಎನ್ನಲಾಗಿದೆ. ಸಲ್ಮಾನ್ ಖಾನ್, ಶಾರುಖ್ ಖಾನ್, ಅಜಯ್ ದೇವಗನ್, ಅಮಿತಾಭ್ ಬಚ್ಚನ್, ಕರಣ್ ಜೋಹರ್, ಅಕ್ಷಯ್ ಕುಮಾರ್, ಕರೀನಾ ಕಪೂರ್ ಖಾನ್, ರಾಜ್ ಕುಮಾರ್ ಹಿರಾನಿ, ಅಶುತೋಷ್ ಗೋವಾರಿಕರ್, ಜೂಹಿ ಚಾವ್ಲಾ, ರಾಕೇಶ್ ಓಂಪ್ರಕಾಶ್ ಮೆಹ್ರಾ ಸೇರಿ ಹಲವರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಆಮಿರ್ ಅಂಬಾನಿ ಕುಟುಂಬಕ್ಕೂ ಆಹ್ವಾನ ನೀಡಿದ್ದಾರೆ. ಜನವರಿ 3 ರಂದು ನಡೆದ ಆರತಕ್ಷತೆಯಲ್ಲಿ ಅಂಬಾನಿ ಕುಟುಂಬ ಉಪಸ್ಥಿತಿ ಇತ್ತು. ಇದರೊಂದಿಗೆ ಮುಂಬೈನಲ್ಲಿ ನಡೆದ ಅದ್ಧೂರಿ ಆರತಕ್ಷತೆಗೆ ದಕ್ಷಿಣ ಚಿತ್ರರಂಗದ ಸೆಲೆಬ್ರಿಟಿಗಳಿಗೂ ಆಹ್ವಾನ ನೀಡಲಾಗಿದೆ.
ಇದನ್ನೂ ಓದಿ: Ira Khan Nupur Reception: ಜನವರಿ 13 ರಂದು ಆಮೀರ್ ಮಗಳ ಅದ್ಧೂರಿ ರಿಸೆಪ್ಶನ್; ಯಾರೆಲ್ಲ ಭಾಗಿ?
ಇನ್ನು ವಿವಾಹದ ಸಂದರ್ಭದಲ್ಲಿ ನೂಪುರ್ ತಮ್ಮ ವಿಚಿತ್ರ ವರ್ತನೆಯಿಂದಾಗಿ ಗಮನ ಸೆಳೆದಿದ್ದಾರೆ. ಮದುಮಗ ಸಾಮಾನ್ಯವಾಗಿ ಸುಂದರ ಬಟ್ಟೆಗಳನ್ನು ಧರಿಸಿಕೊಂಡು ಮಿಂಚುತ್ತಾನೆ. ಆದರೆ, ನೂಪುರ್ ಶಿಖರೆ ಅವರು, ಜಾಗಿಂಗ್ ಬಟ್ಟೆಯಲ್ಲಿ ಮದುವೆ ಮನೆಯ ತನಕ ಓಡಿಕೊಂಡು ಬಂದಿದ್ದರು. ವಿಶೇಷ ಎಂದರೆ, ಮದುವೆ ನೋಂದಣಿ ಸಮಯದಲ್ಲೂ ಅದೇ ಡ್ರೆಸ್‌ನಲ್ಲಿ ಅಂದರೆ ಜಾಗಿಂಗ್ ಉಡುಪಿನಲ್ಲಿ ಅವರಿದ್ದರು. ಈ ಕಾರಣಕ್ಕಾಗಿ ಮದುವೆ ವಿಶೇಷ ಗಮನ ಸೆಳೆದಿತ್ತು.
ಇರಾ ಖಾನ್ ಮತ್ತು ನೂಪರ್ ಅವರ ವಿವಾಹ ನಿಶ್ಚಿತಾರ್ಥ ಕಳೆದ ವರ್ಷ ನೆರವೇರಿತ್ತು. ಖಾಸಗಿಯಾಗಿ ನಡೆದ ಈ ಸಮಾರಂಭದ ಬಳಿಕ ಇಬ್ಬರೂ ಮುಂಬೈಯಲ್ಲಿ ಪಾರ್ಟಿ ಆಯೋಜಿಸಿದ್ದರು.