ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ (Kannada New Movie) ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದ ʻಓ ನನ್ನ ಚೇತನʼ, ಇದೇ ಡಿ. 15ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಡಾ. ಬಿ. ಜಿ ಮಲ್ಲಿಕಾರ್ಜುನ ಸ್ವಾಮಿ ಈ ಚಿತ್ರವನ್ನು ಮೂನಿಪ್ಲಿಕ್ಸ್ ಸ್ಟುಡಿಯೋಸ್ ಕೆ.ಎ ಸುರೇಶ್ ಅವರ ಮೂಲಕ ರಿಲೀಸ್ ಮಾಡುತ್ತಿದ್ದಾರೆ.
ʼಓ ನನ್ನ ಚೇತನʼ ಸಿನಿಮಾವನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ರಿಲೀಸ್ ಮಾಡಿದ್ದಾರೆ. ಓ ನನ್ನ ಚೇತನ ಟ್ರೈಲರ್ ಲಾಂಚ್ ವೇಳೆ ಪ್ರೇಮಲೋಕ, ಶಾಂತಿಕ್ರಾಂತಿಯ ಅದ್ಭುತ ಸನ್ನಿವೇಶಗಳನ್ನು ನೆನೆದರು. ʻಶಾಂತಿ ಕ್ರಾಂತಿ’ ಸಿನಿಮಾದ ಸೆಟ್ನಲ್ಲಿ ಮೂರು ಸಾವಿರ ಮಕ್ಕಳು ಇರುತ್ತಿದ್ದರು ಎಂದ ರವಿಚಂದ್ರನ್ ಅವರನ್ನೆಲ್ಲ ಹೇಗೆ ಸಂಭಾಳಿಸಿದ್ದರು ಎಂಬ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡರು. ಕೊನೆಗೆ ಮೊಬೈಲ್ ನೋಡುವ ಮಕ್ಕಳು, ಮಕ್ಕಳ ಮೊಬೈಲ್ ಹಾವಳಿಗೆ ತತ್ತರಿಸೋ ಪೋಷಕರು ನೋಡಲೇ ಬೇಕಾದಂತಹ ಸಿನಿಮಾ ಓ ನನ್ನ ಚೇತನ. ಓ ನನ್ನ ಚೇತನ ಇಂದಿನ ಪೀಳಿಗೆಯನ್ನ ಎಚ್ಚರಿಸೋ ಸಿನಿಮಾ ಎಂದರು.
ಓ ನನ್ನ ಚೇತನ ಅಪೂರ್ವ ಖ್ಯಾತಿಯ ನಟಿ ಅಪೂರ್ವ ಗೌಡ (ಆಶಾದೇವಿ) ನಿರ್ದೇಶನದ ಚೊಚ್ಚಲ ಚಿತ್ರ. ಅಲೆಮಾರಿ ಖ್ಯಾತಿಯ ಹರಿ ಸಂತು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಪ್ರದೀಪ್ ವರ್ಮಾ ಸಂಗೀತ ಸಂಯೋಜಿಸಿದ್ದಾರೆ. ಗುರುಪ್ರಶಾಂತ್ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲ ಚಿತ್ರಕ್ಕಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ಮಾಸ್ಟರ್ ಪ್ರತೀಕ್, ಮಾಸ್ಟರ್ ಪ್ರೀತಮ್,ಬೇಬಿ ದಾನೇಶ್ವರಿ, ಬೇಬಿ ಡಿಂಪನಾ, ಬೇಬಿ ಮೋನಿಕಾ ನಟಿಸಿದ್ದಾರೆ.
ಇದನ್ನೂ ಓದಿ: Kannada New Movie: ಟೀಸರ್ ಮೂಲಕ ಕೌತುಕದ ಕಿಡಿ ಹೊತ್ತಿಸಿದ `ಕೆಂಡ’!
ದೊಡ್ಡ ತಾರಾಬಳಗವಿಲ್ಲ ಆದರೆ ಆದರೆ ದೊಡ್ಡ ತಂತ್ರಜ್ಞರೇ ಕೈ ಜೋಡಿಸಿ ಮಾಡಿರುವ ಅಪ್ಪಟ ರಂಜನೆಯ ಮತ್ತು ಸಂದೇಶವಿರುವ ಸಿನಿಮಾ ಎಂದಿದೆ ಚಿತ್ರತಂಡ. ಚಿತ್ರದ ಟೈಟಲ್ ಹಾಡು ಕೂಡ ರಿಲೀಸ್ ಆಗಿದ್ದು, ಸಿನಿರಸಿಕರಿಗೆ ಈ ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. ದೀಪಕ್ ವಿ. ಎಸ್ ಮಹೇಶ್, ವಿ. ಪ್ರಶಾಂತ್,ಹರೀಶ್ ಕುಮಾರ್, ಸಾಯಿ ಅಶೋಕ್ ಕುಮಾರ್, ಡಾ. ನಾರಾಯಣ್ ಹೊಸ್ಮನೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.