Site icon Vistara News

Odisha Train Accident : ಒಡಿಶಾ ಭೀಕರ ರೈಲು ದುರಂತ, ಸಂತಾಪ ಸೂಚಿಸಿದ ಸೆಲೆಬ್ರಿಟಿಗಳು ಯಾರ‍್ಯಾರು?

Odisha Train Accident Indian film celebrities to mourn

ಒಡಿಶಾದ ಬಾಲಾಸೋರ್​​ನಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ (Odisha Train Accident) ಮೃತಪಟ್ಟವರ ಸಂಖ್ಯೆ 238ಕ್ಕೆ ಏರಿಕೆಯಾಗಿದೆ. 900ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮೂರು ರೈಲುಗಳ ಮಧ್ಯೆಯ ಡಿಕ್ಕಿಯಿಂದ ಇಷ್ಟು ದೊಡ್ಡಮಟ್ಟದ ಅವಘಡ ಆಗಿದ್ದು, ಇತ್ತೀಚಿನ ವರ್ಷಗಳಲ್ಲೇ ಇದು ಭೀಕರ ರೈಲು ಅಪಘಾತವಾಗಿದೆ. ಇದೀಗ ಅಪಘಾತಕಕ್ಕೀಡಾದವರಿಗೆ ಭಾರತೀಯ ಚಿತ್ರರಂಗದ ಸೆಲೆಬ್ರಿಟಿಗಳು ಸೋಷಿಯಲ್‌ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ.

ನಟರಾದ ಸಲ್ಮಾನ್ ಖಾನ್, ಸೋನು ಸೂದ್, ಜ್ಯೂನಿಯರ್‌ ಎನ್‌ಟಿಆರ್, ಮನೋಜ್ ಬಾಜಪೇಯಿ, ಚಿರಂಜೀವಿ ಸೇರಿದಂತೆ ಹಲವರು ಟ್ವೀಟ್‌ ಮಾಡಿದ್ದಾರೆ.

ತೆಲುಗು ಸೂಪರ್‌ಸ್ಟಾರ್ ಚಿರಂಜೀವಿ ಅವರು, ಅಪಘಾತ ಸುದ್ದಿ ಕೇಳಿ ತಾವು ಸಂಪೂರ್ಣವಾಗಿ ಆಘಾತಕ್ಕೊಳಗಾಗಿರುವುದಾಗಿ ಸಂದೇಶ ಹಂಚಿಕೊಂಡಿದ್ದಾರೆ. ರಕ್ತದಾನ ಮಾಡಲು ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ʻʻರಕ್ತದ ಘಟಕಗಳಿಗೆ ತುರ್ತು ಬೇಡಿಕೆಯಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ರಕ್ತದಾನ ಮಾಡಲು ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ನಮ್ಮ ಎಲ್ಲಾ ಅಭಿಮಾನಿಗಳಲ್ಲಿ ಮನವಿʼʼ ಎಂದು ಅವರು ಬರೆದುಕೊಂಡಿದ್ದಾರೆ.

ʻʻರೈಲು ಅಪಘಾತದಿಂದ ಹಾನಿಗೊಳಗಾದ ಕುಟುಂಬಗಳಿಗೆ ಮತ್ತು ಅವರ ಪ್ರೀತಿಪಾತ್ರರಿಗೆ ನನ್ನ ಸಂತಾಪ. ಈ ಕಷ್ಟದ ಸಮಯದಲ್ಲಿ ನನ್ನ ಬೆಂಬಲ ಸದಾ ಇರಲಿದೆʼʼಎಂದು ಜ್ಯೂನಿಯರ್‌ ಎನ್‌ಟಿಆರ್‌ ಬರೆದುಕೊಂಡಿದ್ದಾರೆ. ನಟಿ ಹಾಗೂ ಸಂಸದೆ ಕಿರಣ್ ಖೇರ್ ತಮ್ಮ ಟ್ವೀಟ್‌ನಲ್ಲಿ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: ‘ಎಂಜಿನ್ ಬದಲಾಗಿದ್ದರಿಂದ ನಾವು ಉಳಿದೆವು’; ಒಡಿಶಾ ರೈಲು ದುರಂತದ ಕ್ಷಣ ವಿವರಿಸಿದ ಕನ್ನಡದ ನಟ ಪ್ರೀತಮ್​

ʻʻಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದ ಬಗ್ಗೆ ಕೇಳಿ ದುಃಖವಾಯಿತು. ನನ್ನ ಪ್ರಾರ್ಥನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆʼ ಎಂದು ಬರೆದುಕೊಂಡಿದ್ದಾರೆ.

ನಟ ಸಲ್ಮಾನ್‌ ಖಾನ್‌ ʻʻಈ ಅಪಘಾತದ ಘಟನೆಯನ್ನು ಕೇಳಲು ನಿಜವಾಗಿಯೂ ದುಃಖವಾಗಿದೆ, ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ, ಈ ದುರದೃಷ್ಟಕರ ಅಪಘಾತದಿಂದ ಗಾಯಗೊಂಡ ಕುಟುಂಬಗಳಿಗೆ ರಕ್ಷಣೆ ಮತ್ತು ಶಕ್ತಿಯನ್ನು ನೀಡಲಿʼʼ ಎಂದು ಬರೆದುಕೊಂಡಿದ್ದಾರೆ.

ಶಾಲಿಮಾರ್​-ಚೆನ್ನೈ ಸೆಂಟ್ರಲ್​ ಕೋರಮಂಡಲ ಎಕ್ಸ್​​ಪ್ರೆಸ್​​ ರೈಲು ಮತ್ತು ಒಂದು ಗೂಡ್ಸ್​ ರೈಲಿನ ಮಧ್ಯೆ ಬಾಲಾಸೋರ್​​ ಬಳಿ ಮೊದಲು ಡಿಕ್ಕಿಯಾಯಿತು. ಈ ಡಿಕ್ಕಿಯ ರಭಸಕ್ಕೆ ಕೋರಮಂಡಲ ರೈಲಿನ 10-12 ಬೋಗಿಗಳು ಕಳಚಿ ಅಕ್ಕ-ಪಕ್ಕದ ಹಳಿಗಳ ಮೇಲೆ ಉರುಳಿಬಿದ್ದವು. ಆದರೆ ಈ ಅಪಘಾತದ ಬಗ್ಗೆ ಗೊತ್ತಿಲ್ಲದೆ, ಪಕ್ಕದ ಹಳಿಯ ಮೇಲೆ ಬಂದ ಬೆಂಗಳೂರು-ಹೌರಾ ಸೂಪರ್​ಫಾಸ್ಟ್​ ರೈಲಿಗೂ ಅಪಾಯ ಕಾದಿತ್ತು. ಅದಾಗಲೇ ಹಳಿಯ ಮೇಲೆ ಬಿದ್ದಿದ್ದ ಕೋರಮಂಡಲ​ ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದು, ಈ ರೈಲು ಕೂಡ ಅಪಘಾತಕ್ಕೀಡಾಗಿದೆ.

.

Exit mobile version