ಬೆಂಗಳೂರು: ಈ ಹಿಂದೆ ಬೆಂಗಾಲಿ ಕಿರುತೆರೆಯ ಅನೇಕ ಧಾರವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ನಟಿ ಪಲ್ಲವಿ ಡೇ ಇತ್ತೀಚೆಗೆ ಅನುಮಾನಸ್ಪದವಾಗಿ ಸಾವನಪ್ಪಿದ್ದರು. ಇದೀಗ ಬೆಂಗಾಲಿ ಯುವ ನಟಿ ಬಿದಿಶಾ ಡೇ (Bidisha De) ಮಜುಂದರ್ ಅವರ ಶವ ಬುಧವಾರದಂದು ಕೋಲ್ಕತ್ತಾ ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ಕಿದೆ. 21 ವರ್ಷದ ಮಹತ್ವಾಕಾಂಕ್ಷಿ ನಟಿ ತನ್ನ ಪೋಷಕರೊಂದಿಗೆ ನಾಗರಬಜಾರ್ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಬುಧವಾರ ಸಂಜೆ ನಟಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ಖಚಿತವಾಗಿಲ್ಲ. ಪ್ರಾಥಮಿಕ ತನಿಖೆ ನಡೆಯುತ್ತಿದ್ದು, ಪೊಲೀಸರು ಬಿದಿಶಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಆಕೆಯ ಆಪ್ತರು ಮತ್ತು ಕುಟುಂಬದಿಂದ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದ್ದು, ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ | ನಿಗೂಢ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಮಲಯಾಳಂ ರೂಪದರ್ಶಿ
ಮಾಡೆಲಿಂಗ್ ಉದ್ಯಮದಲ್ಲಿ ಪರಿಚಿತ ಮುಖವಾಗಿರುವ ಬಿದಿಶಾ 2021 ರಲ್ಲಿ ಅನಿರ್ಬೇದ್ ಚಟ್ಟೋಪಾಧ್ಯಾಯ ನಿರ್ದೇಶನದ ‘ಭಾರ್- ದಿ ಕ್ಲೌನ್’ ಎಂಬ ಕಿರುಚಿತ್ರದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು. ಜನಪ್ರಿಯ ನಟ ದೇಬ್ರಾಜ್ ಮುಖರ್ಜಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ ಬಿದಿಶಾ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
ಬಿದಿಶಾ ನಿಧನದ ಬಗ್ಗೆ ಮಾತನಾಡಿರುವ ಬೆಂಗಾಲಿ ನಟ ಸುಮನ್ ʼಇದು ಅಘಾತಕಾರಿ ಸುದ್ದಿ. ನಿಜಕ್ಕೂ ದುಃಖವಾಗಿದೆ. ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ನಮ್ಮ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಮಾತನಾಡುವ ಸಮಯ ಬಂದಿದೆ. ತಾಳ್ಮೆಯಿಂದ ಇರಬೇಕುʼ ಎಂದಿದ್ದಾರೆ.
ಇದನ್ನೂ ಓದಿ | ಮದುವೆ ಮಂಟಪದಲ್ಲಿ ಕಳಚಿ ಬಿದ್ದ ವಿಗ್, ವರನಿಂದ ಖರ್ಚು ವಸೂಲಿ ಮಾಡಿದ ವಧು!