Site icon Vistara News

Puneeth Rajkumar: ಅಪ್ಪು ಮಾಲೆ ವಿರುದ್ಧ ಒಳ್ಳೆ ಹುಡುಗ ಪ್ರಥಮ್‌ ಫುಲ್‌ ಗರಂ!

olle huduga pratham about Puneeth Rajkumar Mala

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅಭಿಮಾನಿಗಳಿಂದ ಮಾಲಾಧಾರಣೆ ವ್ರತ ಆರಂಭವಾಗಿದೆ. ಮಾರ್ಚ್ 1 ರಿಂದ ಅಭಿಮಾನಿಗಳು ಮಾಲಾಧಾರಣೆ ಮಾಡಲಿದ್ದಾರೆ. ವಿಜಯನಗರದ ಹೊಸಪೇಟೆ ನಗರದ ಅಪ್ಪು ಪುತ್ಥಳಿ ಬಳಿ ಅಭಿಮಾನಿಗಳು ಮಾಲೆ ಧರಿಸಲಿದ್ದಾರೆ. ನಂತರ ಮಾರ್ಚ್ 18 ಕ್ಕೆ ಅಪ್ಪು ಪುಣ್ಯಭೂಮಿಯ ದರ್ಶನ ಪಡೆಯಲಿದ್ದಾರೆ. ಈ ಬಗ್ಗೆ ಇದೀಗ ಬಿಗ್‌ ಬಾಸ್‌ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದಲ್ಲಿ ವರ್ತಿಸಬೇಡಿ ಎಂದು ಟ್ವೀಟ್‌ ಮೂಲಕ ಹೇಳಿದ್ದಾರೆ.

ಈ ಹಿಂದೆ ಅಪ್ಪು ಮಾಲೆ ಧರಿಸಬೇಕಾದವರು ಹಲವು ವಿಧಾನಗಳನ್ನು ಅನುಸರಿಸಬೇಕೆಂದು ಹೇಳಿದ್ದರು. ವೈರಲ್‌ ಆಗಿರುವ ಪತ್ರದಲ್ಲಿ ಅಪ್ಪು ದೇವರ ಡಾಲರ್ ಇರುವ ಮಾಲೆ, ಕೇಸರಿ ಶಾಲು, ಕೇಸರಿ ಪಂಚೆ, ಕೇಸರಿ ಶರ್ಟ್ ತೊಟ್ಟು ಅಪ್ಪು ದೇವರ ಫೋಟೊವನ್ನು ಇಟ್ಟು ಪೂಜೆ ಮಾಡುವ ವ್ರತ ಪಾಲಿಸಬೇಕು. ಬೆಳಗ್ಗೆ ಸೂರ್ಯ ಹುಟ್ಟುವ ಮೊದಲು ಸ್ನಾನ ಹಾಗೂ ಸಂಜೆ ಸೂರ್ಯ ಮುಳುಗಿದ ನಂತರ ಸ್ನಾನ. ಪ್ರಸಾದ ಬೆಳಗ್ಗೆ ಟಿಫಿನ್, ಮಧ್ಯಾಹ್ನ ಊಟ ಹಾಗೂ ರಾತ್ರಿ ಟಿಫಿನ್ ಮಾಡಬಹುದಾಗಿದೆ ಎಂದು ಮನವಿ ಮಾಡಲಾಗಿತ್ತು. ಇದೀಗ ಈ ಬಗ್ಗೆ ಪ್ರಥಮ್‌ ಧ್ವನಿ ಎತ್ತಿದ್ದಾರೆ.

ʻʻದೇವರ ಮೇಲೆ ಭಕ್ತಿ ಇರಲಿ! ಕಲಾವಿದರ ಮೇಲೆ ಪ್ರೀತಿ,ಅಭಿಮಾನವಿರಲಿ…! ಶಬರಿಮಲೆಗೆ ಹೋಗುವುದು ಅಯ್ಯಪ್ಪನಲ್ಲಿ ಶರಣಾಗುವುದಕ್ಕೆ. ಬಹಳ ಶಿಸ್ತುಗಳನ್ನು ಪಾಲಿಸಿ ಶ್ರದ್ಧಾಭಕ್ತಿಗಳಿಂದ ಮಾಲೆ ಧಾರಣೆ ಮಾಡಬೇಕು. ಕಲಾವಿದರನ್ನು ಕಲಾವಿದರಾಗಿರುವುದಕ್ಕೆ ಬಿಡಿ. ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದ ವರ್ತನೆ ತೋರಬಾರದು. ದೇವರು-ದೇವರೇ…ಕಲಾವಿದರು-ಕಲಾವಿದರೇʼʼಎಂದು ಟ್ವೀಟ್‌ ಮಾಡಿದ್ದಾರೆ ಪ್ರಥಮ್‌.

ಇದನ್ನೂ ಓದಿ: Puneeth Rajkumar: ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ವರ್ಕೌಟ್‌ ವಿಡಿಯೊ ವೈರಲ್‌: ʻಫೀಲ್ ದಿ ಪವರ್ʼ ಅಂದ್ರು ಫ್ಯಾನ್ಸ್‌!

ಒಳ್ಳೆ ಹುಡುಗ ಪ್ರಥಮ್ ಟ್ವೀಟ್‌

ಪ್ರಥಮ್ ಟ್ವೀಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಪ್ಪು ಅಭಿಮಾನಿಗಳು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ ನೆಟ್ಟಿಗರು ಹೆಸರು ಹಾಳು ಮಾಡುತ್ತಿದ್ದೀರಾ ಎನ್ನುತ್ತಿದ್ದಾರೆ.

Exit mobile version