Site icon Vistara News

Once Upon a Time In Jamaligudda | ಅವಳಿ ನಗರಗಳ ಹೆಸರಿನಲ್ಲಿ ಇಬ್ಬರು ಕೈದಿಗಳ ಅನಾವರಣ!

Once Upon a Time In Jamaligudda

ಬೆಂಗಳೂರು : ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳನ್ನು ಮಾಡುತ್ತಾ ಬಂದಿರುವ ಡಾಲಿ ಧನಂಜಯ್‌ ಈ ವರ್ಷದಲ್ಲಿ ಅತೀ ಹೆಚ್ಚು ಸಿನಿಮಾಗಳು ರಿಲೀಸ್‌ ಆದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸರಾಸರಿ ಎರಡು ತಿಂಗಳಿಗೆ ಒಂದರಂತೆ ಅವರ ಅಭಿನಯದ ಸಿನಿಮಾಗಳು ರಿಲೀಸ್‌ ಆಗಲಿವೆ. ಇನ್ನು ಡಾಲಿ ಅಭಿಮಾನಿಗಳಂತೂ ಸಾಲುಸಾಲು ಸಿನಿಮಾ ಡೇಟ್ಸ್ ನೋಡಿ ಇದು ಡಾಲಿ ಫೆಸ್ಟಿವಲ್ ಕಣೋ ಅಂತಿದ್ದಾರೆ. ಇದೀಗ ʻಒನ್ಸ್‌ ಅಪಾನ್‌ ಅ ಟೈಮ್‌ ಇನ್‌ ಜಮಾಲಿಗುಡ್ಡʼ (Once Upon A Time in Jamaligudda) ಸೆಪ್ಟೆಂಬರ್‌ 9ರಂದು ತೆರೆಗೆ ಅಪ್ಪಳಿಸಲಿದೆ.

ಪಾತ್ರಗಳ ಹೆಸರನ್ನು ತಂಡ ಅನಾವರಣಗೊಳಿಸಿದೆ. ‘ಅವಳಿ ನಗರಗಳ ಹೆಸರಿನಲ್ಲಿ ಅವಳಿ ಕೈದಿಗಳ ಅನಾವರಣ’ ಎಂದು ಕ್ಯಾಪ್ಷನ್‌ ನೀಡಿ ಡಾಲಿ ಧನಂಜಯ್‌ ಹಾಗೂ ಯಶ್‌ ಶೆಟ್ಟಿ ಅವರ ಪಾತ್ರದ ಪರಿಚಯವನ್ನು ರಿವೀಲ್‌ ಮಾಡಿದೆ. ಹಿರೋಶಿಮಾ ಪಾತ್ರದ ಮೂಲಕ ಡಾಲಿ ಧನಂಜಯ್‌ ಖಡಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಗಸಾಕಿ ಪಾತ್ರದಲ್ಲಿ ಯಶ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಲುಕ್‌ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಯಶ್‌ ಶೆಟ್ಟಿ ನೋಡಿದಾಗ ʻಅಂತʼ ಚಿತ್ರದ ಅಂಬರೀಶ್‌ ಅವರನ್ನು ನೋಡಿದ ಹಾಗೆ ಕಾಣಿಸುತ್ತಿದೆ ಎಂದು ಕೆಲವರು ಕಮೆಂಟ್‌ ಮೂಲಕ ಹೇಳಿದ್ದಾರೆ.

ಇದನ್ನೂ ಓದಿ | ಡಾಲಿಯ Haysala Movie ಸೆಟ್‌ಗೆ ಭೇಟಿ ನೀಡಿದ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರ್ತಿ

ಈ ಚಿತ್ರವನ್ನು ʻಕನ್ನಡಕ್ಕಾಗಿ ಒಂದನ್ನು ಒತ್ತಿʼ ಸಿನಿಮಾದ ನಿರ್ದೇಶಕ ಕುಶಾಲ್‌ ಗೌಡ ನಿರ್ದೇಶಿಸುತ್ತಿದ್ದಾರೆ. ನಿಹಾರಿಕಾ ಮೂವೀಸ್‌ ಬ್ಯಾನರ್‌ ಅಡಿ ಶ್ರೀಹರಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸುತ್ತಿದ್ದಾರೆ.

ಡಾಲಿ ಧನಂಜಯ್‌ ಸಿನಿಮಾಗಳಲ್ಲಿ ಬುಸಿಯಾಗಿದ್ದು, ಅವರು ನಟಿಸಿರುವ ʻಹೆಡ್‌ ಬುಷ್‌ʼ ಸಿನಿಮಾ ಅಕ್ಟೋಬರ್‌ 21ರಂದು ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಬೆಂಗಳೂರಿನ ಭೂಗತ ದೊರೆ ಜಯರಾಜ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ರವಿಚಂದ್ರನ್‌, ವಸಿಷ್ಠ ಸಿಂಹ, ಶ್ರುತಿ ಹರಿಹರನ್‌ ಸೇರಿದಂತೆ ಹೆಸರಾಂತ ತಾರಾಬಳಗವೇ ಚಿತ್ರಕ್ಕಿದೆ. ಆಗಸ್ಟ್‌ನಲ್ಲಿ ʼಮಾನ್ಸೂನ್‌ ರಾಗʼ (Monsoon Raaga), ಅಕ್ಟೋಬರ್‌ನಲ್ಲಿ ʼಹೆಡ್‌ ಬುಷ್‌ʼ (Head Bush), ನವೆಂಬರ್‌ನಲ್ಲಿ ʼಹೊಯ್ಸಳʼ (Hoysala), ಅಲ್ಲದೇ ಈ ನಡುವೆ ಜಗ್ಗೇಶ್‌ ಜತೆಗಿನ ʼತೋತಾಪುರಿʼ (Totapuri) ಸಿನಿಮಾ ಕೂಡ ರಿಲೀಸ್‌ ಆಗಬಹುದು.

ಇದನ್ನೂ ಓದಿ | ಇದು ಜಾಲಿ ಡೇಸ್‌ ಅಲ್ಲ ಡಾಲಿ ಡೇಸ್‌!

Exit mobile version