Site icon Vistara News

Kabzaa Movie: ಕಬ್ಜ ರಿಲೀಸ್‌ಗೆ ಒಂದು ದಿನ ಬಾಕಿ: ತಿರುಪತಿಯತ್ತ ಚಿತ್ರತಂಡ ಪಯಣ

One day left for the release of Kabzaa Movie The film team to Tirupati

ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಬಹುನಿರೀಕ್ಷಿತ ಚಿತ್ರವಾದ ಕಬ್ಜ ಸಿನಿಮಾ (Kabzaa Movie) ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ.

ವಿಶ್ವದಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಐದು ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ.

ಸದ್ಯ ತಂಡ ತಿರುಪತಿಗೆ ತೆರಳಿದೆ. ಕೆ.ಪಿ. ಶ್ರೀಕಾಂತ್, ಆರ್. ಚಂದ್ರು, ಉಪೇಂದ್ರ ಹಾಗೂ ಮೊದಲಾದವರು ಪ್ರೈವೇಟ್​​ ಜೆಟ್​ನಲ್ಲಿ ತಿರುಪತಿಗೆ ತೆರಳಿದ್ದಾರೆ.

ಸಿನಿಮಾದ ಫಸ್ಟ್ ಪ್ರಿಂಟ್‌ಗೆ ಪೂಜೆ ಸಲ್ಲಿಸಲು ತಂಡ ತಿರುಪತಿಗೆ ತೆರಳಿದೆ. ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನವಾದ ಮಾರ್ಚ್‌ 17ರಂದೇ ತೆರೆ ಕಾಣಲಿದೆ.

ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆ ಕಾಣಲಿದೆ.

ಕಬ್ಜ ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

ಚಿತ್ರದಲ್ಲಿ ಉಪೇಂದ್ರ, ಸುದೀಪ್​, ಶಿವರಾಜ್​ಕುಮಾರ್​, ಶ್ರೀಯಾ ಶರಣ್​, ಕಬೀರ್ ದುಹಾನ್​ ಸಿಂಗ್​, ಪ್ರಮೋದ್​ ಶೆಟ್ಟಿ, ನವಾಬ್​ ಷಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ಕೆಜಿಎಫ್’ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಕೆಲಸ ಮಾಡಿದ್ದರೆ, ‘ಕೆಜಿಎಫ್’ ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.

Exit mobile version