ಬಹು ನಿರೀಕ್ಷಿತ ಚಿತ್ರ ‘ಆಪನ್ ಹೈಮರ್’ ಸಿನಿಮಾ (Oppenheimer Film) ಕೊನೆಗೂ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದೆ. ಕ್ರಿಸ್ಟೋಫರ್ ನೋಲನ್ (Christopher Nolan) ನಿರ್ದೇಶನದ ಈ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಅಮೆರಿಕದ ಅಣು ಬಾಂಬ್ ಪ್ರಾಜೆಕ್ಟ್‌ನ ಜೆ. ರಾಬರ್ಟ್ ಆಪನ್‌ಹೈಮರ್ ಅವರ ಜೀವನವನ್ನು ಆಧರಿಸಿದ ಚಿತ್ರವಿದು. ಈ ಸಿನಿಮಾದಲ್ಲಿ ಭಗವದ್ಗೀತೆಯನ್ನು ಉಲ್ಲೇಖಿಸಲಾಗಿದೆ. ಲೇಖಕ ದೇವದತ್ ಪಟ್ನಾಯಕ್ ಅವರು, ಸಿನಿಮಾದಲ್ಲಿನ ಭಗವದ್ಗೀತೆಯ ತಪ್ಪು ವಾಖ್ಯಾನದ ಬಗ್ಗೆ ಗಮನ ಸೆಳೆದಿದ್ದಾರೆ. ಅಲ್ಲದೇ ಸೋಷಿಯಲ್ ಮೀಡಿಯಾಗಳಲ್ಲೂ, ಭಗವದ್ಗೀತೆಯನ್ನು ತಪ್ಪು ವ್ಯಾಖ್ಯಾನಿಸುವ ಮೂಲಕ ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ.
ಸಿನಿಮಾದಲ್ಲಿ ʻʻಸಾವಿರ ಸೂರ್ಯ ಆಕಾಶದಲ್ಲಿ ಸಿಡಿದರೆ, ಅದು ಪರಾಕ್ರಮಶಾಲಿಯ ವೈಭವದಂತಿರುತ್ತದೆ. ನಾನೇ ಮೃತ್ಯು ಮತ್ತು ಪ್ರಪಂಚದ ವಿಧ್ವಂಸಕನಾಗಿದ್ದೇನೆ” ಎಂದು ಆಪನ್‌ಹೈಮರ್ ಸಿನಿಮಾದಲ್ಲಿ ಮುಖ್ಯ ಪಾತ್ರದಿಂದ ಹೇಳಿಸಲಾಗಿದೆ. ಆದರೆ, ಪಟ್ನಾಯಕ್ ಈ ಬಗ್ಗೆ ಮಾತನಾಡಿ ʻ”ನಾನು ಆಪನ್ ಹೈಮರ್’ನಲ್ಲಿ ಚಿತ್ರ ಗಮನಿಸಿದ್ದೇನೆ. ಅದರಲ್ಲಿ ಭಗವದ್ಗೀತೆಯ ಅಧ್ಯಾಯ 11ರ ಶ್ಲೋಕ 32 ರ ಆಯ್ದ ಭಾಗವು ‘ಕಾಲ-ಅಸ್ಮಿ’ ಎಂದು ಹೇಳುತ್ತದೆ, ಅಂದರೆ ‘ನಾನು ಕಾಲ, ಪ್ರಪಂಚದ ವಿನಾಶಕ’ ಎಂದು ತಿಳಿಸಲಾಗಿದೆ. ಆದರೆ, ಸಿನಿಮಾದಲ್ಲಿ ತಪ್ಪಾಗಿ ಬಿಂಬಿಸಲಾಗಿದೆ. ಚಿತ್ರದಲ್ಲಿ ಬಳಸಲಾದ ಅನುವಾದವು ತಪ್ಪಾಗಿದೆ ಎಂದು ಪ್ರತಿಪಾದಿಸಿದ್ದಾರೆ. ‘ಮೃತ್ಯು’ ಬದಲಿಗೆ ‘ಕಾಲ ಎಂದಾಗಬೇಕು ಎಂದು ಪಟ್ನಾಯಕ್ ಅವರು ಹೇಳಿದ್ದಾರೆ.
"You are the man who gave them the power to destroy themselves"#Oppenheimer pic.twitter.com/IMRmduPken
— 𝖬𝗈𝗁𝖺𝗆𝗆𝖾𝖽 𝖠𝗅𝖥𝗈𝗎𝗓𝖺𝗇 (@malfouzan95) July 21, 2023
ಜುಲೈ 11ರಂದು ಪ್ಯಾರಿಸ್ನಲ್ಲಿ, ಜುಲೈ 13ರಂದು ಲಂಡನ್ನಲ್ಲಿ, ಜುಲೈ 17ರಂದು ನ್ಯೂಯಾರ್ಕ್ನಲ್ಲಿ ಪ್ರೀಮಿಯರ್ ಆಗಿತ್ತು. ಜುಲೈ 21ರಂದು ಬಹುತೇಕ ರಾಷ್ಟ್ರಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ರಾಬರ್ಟ್ ಜೂನಿಯರ್, ಕಿಲಿಯನ್ ಮರ್ಫಿ, ಮ್ಯಾಟ್ ಡೇಮನ್ ಸಿನಿಮಾದ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಜೆ. ರಾಬರ್ಟ್ ಆಪನ್‌ಹೈಮರ್ ಪಾತ್ರಕ್ಕೆ ಕಿಲಿಯನ್ ಮರ್ಫಿ ಬಣ್ಣ ಹಚ್ಚಿದ್ದಾರೆ. ಈ ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ನಡೆಸಿದ್ದಾರೆ.