Site icon Vistara News

Oppenheimer Movie : ಮಿಷನ್‌ ಇಂಪಾಸಿಬಲ್‌ 7ರ ದಾಖಲೆ ಮುರಿದ ಓಪನ್ಹೈಮರ್

Oppenheimer Movie

ಮುಂಬೈ: ಟಾಮ್‌ ಕ್ರೂಸ್‌ ಅವರ ಮಿಷನ್‌ ಇಂಪಾಸಿಬಲ್‌ ಸಿನಿಮಾದ ಏಳನೇ ಭಾಗ ಇತ್ತೀಚೆಗೆ ಬಿಡುಗಡೆಯಾಗಿ ಭಾರತದಲ್ಲಿ ಮೊದಲನೇ ದಿನದಂದು 12.5 ಕೋಟಿ ರೂ. ಬಾಚಿಕೊಂಡಿತ್ತು. ಇದೀಗ ಕ್ರಿಸ್ಟೋಫರ್‌ ನೊಲನ್‌ ನಿರ್ದೇಶನದ ಓಪನ್ಹೈಮರ್ ದೇಶದಲ್ಲಿ ಬಿಡುಗಡೆಗೊಂಡಿದ್ದು ಮಿಷನ್‌ ಇಂಪಾಸಿಬಲ್‌ 7ರ ದಾಖಲೆಯನ್ನು ಮುರಿದು ಹಾಕಿದೆ. ಓಪನ್ಹೈಮರ್ ಸಿನಿಮಾ (Oppenheimer Movie) ಭಾರತದಲ್ಲಿ ಬಿಡುಗಡೆಯಾದ ದಿನದಂದೇ 13 ಕೋಟಿ ರೂ.ಗೂ ಅಧಿಕ ಸಂಪಾದನೆಯನ್ನು ಮಾಡಿಕೊಂಡಿದೆ.

Sacnilk.com ಅಲ್ಲಿ ನೀಡಲಾಗಿರುವ ವರದಿಯ ಪ್ರಕಾರ ಓಪನ್ಹೈಮರ್ ಸಿನಿಮಾ ಭಾರತದಲ್ಲಿ ಬಿಡುಗಡೆಯಾದ ದಿನದಂದು ಒಟ್ಟಾರೆಯಾಗಿ 13.50 ಕೋಟಿ ರೂ. ಗಳಿಸಿಕೊಂಡಿದೆಯಂತೆ. ಈ ಸಿನಿಮಾದ ಜತೆ ಹಾಲಿವುಡ್‌ನ ಇನ್ನೂ ಕೆಲವು ಸಿನಿಮಾಗಳು ಬಿಡುಗಡೆಯಾಗಿವೆಯಾದರೂ ಉತ್ತಮ ಗಳಿಕೆ ಕಾಣುವಲ್ಲಿ ಓಪನ್ಹೈಮರ್ ಯಶಸ್ವಿಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Viral Video: ಬಿಜೆಪಿ ‘ಭ್ರಷ್ಟಾಚಾರ’ ಪಟ್ಟಿ ಓದಲು ತಡಕಾಡಿದ ಪ್ರಿಯಾಂಕಾ ವಾದ್ರಾ; ಅಂಕಿ-ಅಂಶ ಹೇಳುವಾಗಲೂ ಎಡವಟ್ಟು

ಓಪನ್ಹೈಮರ್ ಸಿನಿಮಾವು ಪರಮಾಣು ಬಾಂಬ್‌ನ ಪಿತಾಮಹ ಎಂದು ಕರೆಯಲ್ಪಡುವ ಭೌತಶಾಸ್ತ್ರಜ್ಞ ಜೆ ರೆಬಾರ್ಟ್‌ ಓಪನ್ಹೈಮರ್ ಅವರ ಜೀವನ ಚರಿತ್ರೆಯ ಕಥೆಯಾಗಿದೆ. ಓಪನ್ಹೈಮರ್ ಅವರು ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಆವಿಷ್ಕರಿಸಲು ಸಹಾಯ ಮಾಡಿದ್ದರು. ಅವರ ಜೀವನದ ಕುರಿತಾಗಿ ಈಗ ಬಿಡುಗಡೆಯಾಗಿರುವ ಚಿತ್ರದಲ್ಲಿ ತೋರಿಸಲಾಗಿದೆ.

ನಟ ಸಿಲಿಯನ್ ಮರ್ಫಿ ಅವರು ಈ ಸಿನಿಮಾದಲ್ಲಿ ಓಪನ್ಹೈಮರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಹಾಗೆಯೇ ನಟ ಮ್ಯಾಟ್‌ ಡ್ಯಾಮನ್‌ ಅವರು ಮ್ಯಾನ್‌ಹ್ಯಾಟನ್‌ ಪ್ರಾಜೆಕ್ಟ್‌ನ ಮುಖ್ಯಸ್ಥರಾಗಿದ್ದ ಜನರಲ್‌ ಲೆಸ್ಲಿ ಗ್ರೋವ್ಸ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಮಿಲಿ ಬ್ಲಂಟ್‌ ಅವರು ಓಪನ್ಹೈಮರ್ ಅವರ ಪತ್ನಿ ಕ್ಯಾಥರೀನ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಶುಕ್ರವಾರದಂದು ವಿಶ್ವಾದ್ಯಂತ ತೆರೆ ಕಂಡಿದೆ.

Exit mobile version