ಬೆಂಗಳೂರು: ‘ದಿಯಾ’ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದ ದೀಕ್ಷಿತ್ ಶೆಟ್ಟಿ ʻದಸರಾʼ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸಿನಿ ಪ್ರಪಂಚಕ್ಕೆ ಪರಿಚಿತರಾಗಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ಗೆಳೆಯನಿಗೆ ದಸರಾದಲ್ಲಿ ಬಣ್ಣ ಹಚ್ಚಿ ತೆಲುಗು ಸಿನಿಮಂದಿಯ ಹೃದಯ ಗೆದ್ದಿರುವ ಈ ಹೀರೊ, ಈಗ ಮಲಯಾಳಂ ಇಂಡಸ್ಟ್ರಿಗೂ ಪದಾರ್ಪಣೆ ಮಾಡಿದ್ದಾರೆ.
ಪ್ಯಾರಾ ಸೈಕಲಾಜಿಕಲ್ ಕಥಾಹಂದರ ಹೊಂದಿರುವ ʻಒಪ್ಪೀಸ್ʼ ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚೆಗಷ್ಟೇ ಕೇರಳದಲ್ಲಿ ಸರಳವಾಗಿ ನಡೆದಿದೆ. 10 ವರ್ಷ ವಿದೇಶದಲ್ಲಿದ್ದ ವ್ಯಕ್ತಿ ತಾನು ಹುಟ್ಟಿ ಬೆಳೆದ ಕೇರಳಗೆ ವಾಪಸ್ ಆದಾಗ ಏನಾಗುತ್ತದೆ ಅನ್ನೋದೆ ಕಥೆಯ ತಿರುಳು. ಫೆಬ್ರವರಿಯಿಂದ ಒಪ್ಪೀಸ್ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಸೌಜನ್ ಜೋಸೆಫ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಪ್ರದ್ಯುಮನ್ಹಾ ಕೊಳ್ಳೇಕಾಲ ಬಂಡವಾಳ ಹೂಡಿದ್ದಾರೆ. ಎಂ ಜಯಚಂದ್ರನ್ ಮ್ಯೂಸಿಕ್ ಚಿತ್ರಕ್ಕಿದೆ.
ರಂಗಭೂಮಿಯಿಂದ ಕಿರುತೆರೆ ಹಾಗೂ ಹಿರಿತೆರೆಗೆ ಬಂದು ‘ದಿಯಾ’ ಚಿತ್ರದ ಮೂಲಕ ಪ್ರೇಕ್ಷಕರ ಮನ ಸೆಳೆದಿದ್ದ ಸ್ಪುರದ್ರೂಪಿ ನಟ ದೀಕ್ಷಿತ್ ಶೆಟ್ಟಿ. ಸದ್ಯ ಅವರೀಗ ‘ಬ್ಲಿಂಕ್’ ಎಂಬ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ರವಿಚಂದ್ರ ಎ.ಜೆ ಎಂಬುವರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಶ್ರೀನಿಧಿ ‘ಬೆಂಗಳೂರು ಕಥೆ’ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಾರ್ಚ್ 8ಕ್ಕೆ ಬ್ಲಿಂಕ್ ರಿಲೀಸ್ ಆಗುತ್ತಿದೆ.
ಇದನ್ನೂ ಓದಿ: Dheekshith Shetty: ʻಸಖಿಯೆʼ ಎಂದ ದೀಕ್ಷಿತ್ ಶೆಟ್ಟಿ; ʻಬ್ಲಿಂಕ್ʼ ಅಂಗಳದಿಂದ ಹೊಸ ಹಾಡು!
ಇದರ ಹೊರತಾಗಿ ದೀಕ್ಷಿತ್ ಅಲ್ಲು ಅರವಿಂದ್ ಪ್ರೆಸೆಂಟ್ ಮಾಡುತ್ತಿರುವ ಗರ್ಲ್ ಫ್ರೆಂಡ್ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸರಳವಾಗಿ ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ. ದೀಕ್ಷಿತ್ ಬರ್ತ್ ಡೇ ಸ್ಪೆಷಲ್ ಆಗಿ ಗರ್ಲ್ ಫ್ರೆಂಡ್ ಸಿನಿಮಾದ ಸಣ್ಣ ಗ್ಲಿಂಪ್ಸ್ ರಿಲೀಸ್ ಮಾಡಿ ಚಿತ್ರತಂಡ ಶುಭಾಶಯ ಕೋರಿದೆ. ‘ರಂಗಿತರಂಗ’, ‘ಅವನೇ ಶ್ರೀಮನ್ನಾರಾಯಣ’ ಹಾಗೂ ‘ಸ್ಪೂಕಿ ಕಾಲೇಜು’ ಗಳಂತಹ ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ ಎಚ್.ಕೆ.ಪ್ರಕಾಶ್ ನಿರ್ಮಾಣದ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾದಲ್ಲಿಯೂ ದಿಯಾ ಹೀರೊ ಬಣ್ಣ ಹಚ್ಚಿದ್ದಾರೆ.
ದೀಕ್ಷಿತ್ ನಟನೆಯ ಕೆಟಿಎಂ ಫೆಬ್ರವರಿಯಲ್ಲಿ ಬಿಡುಗಡೆಯಾಗುತ್ತಿದೆ. ಇದರ ಜತೆಗೆ ತಮಿಳು ಸಿನಿಮಾವೊಂದು ತೆರೆಗೆ ಬರಲು ಅಣಿಯಾಗಿದೆ.
ದೀಕ್ಷಿತ್ ಶೆಟ್ಟಿ ಅವರು ಕನ್ನಡದಲ್ಲಿ ‘ಬ್ಲಿಂಕ್’, ‘ಕೆಟಿಎಂ’, ‘ಶೀಘ್ರವೇಮ ಕಲ್ಯಾಣ ಪ್ರಾಪ್ತಿರಸ್ತು’, ‘ಸ್ಟ್ರಾಬೆರಿ’ ಹಾಗೂ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಚಿತ್ರಗಳಲ್ಲಿ ದೀಕ್ಷಿತ್ ನಟಿಸುತ್ತಿದ್ದಾರೆ. 15 ದಿನಗಳ ಹಿಂದೆಯಷ್ಟೆ ‘ದಿ ಗರ್ಲ್‌ಫ್ರೆಂಡ್’ ಸಿನಿಮಾ ಮುಹೂರ್ತ ನೆರವೇರಿತ್ತು. ಇದೀಗ ಸಿನಿಮಾ ಚಿತ್ರೀಕರಣ ಸಹ ಆರಂಭವಾಗಿದೆ. ಮೊದಲ ದಿನ ದೀಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಇಬ್ಬರೂ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.