Site icon Vistara News

Oscars 2023: ಆಸ್ಕರ್‌ನಲ್ಲಿ ʻನಾಟು ನಾಟುʼ ಗೆಲ್ಲಬೇಕು; ಎ ಆರ್ ರೆಹಮಾನ್

AR Rahman recently shared his opinion on what a win for Naatu Naatu

ಬೆಂಗಳೂರು: ಚಲನಚಿತ್ರಗಳಿಗೆ ಜಾಗತಿಕವಾಗಿ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಆಸ್ಕರ್‌ ಪ್ರಶಸ್ತಿ (Oscars 2023) ಮಾರ್ಚ್‌ 13ರಂದು(ಭಾರತೀಯ ಕಾಲಮಾನ) ಪ್ರಕಟವಾಗಲಿದೆ. ಇದೀಗ 95ನೇ ಅಕಾಡೆಮಿ ಪ್ರಶಸ್ತಿಯ ಬಗ್ಗೆ ಎ ಆರ್ ರೆಹಮಾನ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 2008ರಲ್ಲಿ ಬಿಡುಗಡೆ ಆಗಿದ್ದ ಹಾಲಿವುಡ್ ಸಿನಿಮಾ ‘ಸ್ಲಮ್ ಡಾಗ್ ಮಿಲಿಯನೇರ್’​ಗಾಗಿ ಎ.ಆರ್.ರೆಹಮಾನ್​ ಎರಡು ಆಸ್ಕರ್ ಗೆದ್ದಿದ್ದರು. ಇದೀಗ ಸಂಗೀತ ವಿಭಾಗದಲ್ಲಿಯೇ ಭಾರತದ ಆರ್​ಆರ್​ಆರ್ ಸಿನಿಮಾ ಆಸ್ಕರ್​ಗೆ ನಾಮಿನೇಟ್ ಆಗಿದೆ.

ಎ.ಆರ್. ರೆಹಮಾನ್ ​ ಮಾತನಾಡಿ. “ನನಗೆ ನಾಟು ನಾಟು ಗೆಲ್ಲಬೇಕು. ನಮ್ಮಲ್ಲಿ ಯಾರಿಗಾದರೂ ಯಾವುದೇ ಪ್ರಶಸ್ತಿ ದೊರೆತರೆ ಭಾರತವನ್ನೇ ಎತ್ತಿ ಹಿಡಿದಂತೆ. ಪ್ರಶಸ್ತಿ ಗೆದ್ದರೆ ನಮ್ಮ ಸಂಸ್ಕೃತಿ ಮೇಲೆ ಎಲ್ಲರ ಗಮನ ಬೀಳುತ್ತದೆʼʼಎಂದರು.

ಏಕೈಕ ಗೀತೆ

ಈವರೆಗೆ ಆಸ್ಕರ್‌ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಭಾರತದ ಯಾವೊಂದು ಗೀತೆಯೂ ನಾಮ ನಿರ್ದೇಶನವಾಗಿರಲಿಲ್ಲ. ಇದೇ ಮೊದಲನೇ ಬಾರಿಗೆ ನಮ್ಮ ದೇಶದ ಹಾಡೊಂದು ಆ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಇದು ನಮ್ಮ ದಕ್ಷಿಣ ಭಾರತದ ನಾಟು ನಾಟು ಹಾಡು ಎನ್ನುವ ಹೆಮ್ಮೆ ದಕ್ಷಿಣ ಭಾರತೀಯರದ್ದು. ಈ ಹಾಡನ್ನು ಎಂಎಂ ಕೀರವಾಣಿ ಸಂಯೋಜಿಸಿದ್ದಾರೆ. ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲಭೈರವ ಅವರು ಹಾಡಿಗೆ ಧ್ವನಿ ನೀಡಿದ್ದಾರೆ.

ಈ ಹಾಡು ಅಪ್ಲಾಸ್‌(ಟೆಲ್ ಇಟ್ ಲೈಕ್ ಎ ವುಮನ್), ಹೋಲ್ಡ್ ಮೈ ಹ್ಯಾಂಡ್ (ಟಾಪ್ ಗನ್: ಮೇವರಿಕ್), ಲಿಫ್ಟ್ ಮಿ ಅಪ್ (ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್), ದಿಸ್ ಈಸ್ ಎ ಲೈಫ್ (ಎವೆರಿಥಿಂಗ್ ಎವೆರಿಥಿಂಗ್ ಆಲ್ ಅಟ್ ಒಮ್ಸ್) ಹಾಡುಗಳೊಂದಿಗೆ ಸ್ಪರ್ಧಿಸುತ್ತಿದೆ.

ಇದನ್ನೂ ಓದಿ: Oscars 2023: ಆಸ್ಕರ್‌ ಪ್ರಶಸ್ತಿಗೆ ಕೌಂಟ್‌ ಡೌನ್‌: ಮೂರು ವಿಭಾಗದಲ್ಲಿ ಭಾರತದ ಚಿತ್ರಗಳು

ಆಸ್ಕರ್‌ ವೇದಿಕೆಯಲ್ಲಿ ನಾಟು ನಾಟು

ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿರುವ ನಾಟು ನಾಟು ಹಾಡನ್ನು ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುತ್ತಿದೆ. ಹಾಡಿನ ಮೂಲ ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲಭೈರವ ಅವರು ಹಾಡಿನ ನೇರ ಪ್ರದರ್ಶನ ನೀಡಲಿದ್ದಾರೆ. ಹಾಲಿವುಡ್‌ ನಟಿ ಲಾರೆನ್‌ ಅವರು ನೃತ್ಯ ಮಾಡಲಿದ್ದಾರೆ. ಹಾಡಿನ ಪ್ರದರ್ಶನಕ್ಕೆ ಭಾರೀ ತಯಾರಿ ನಡೆಸಲಾಗುತ್ತಿರುವುದಾಗಿ ಸಂಯೋಜನರಾದ ಕೀರವಾಣಿ ಅವರು ತಿಳಿಸಿದ್ದಾರೆ. ಒಟ್ಟು ಎರಡೂವರೆ ನಿಮಿಷ ಈ ಪ್ರದರ್ಶನವಿರಲಿದೆ. ಭಾರತದಲ್ಲಿ ಮಾರ್ಚ್ 13ರಂದು ಬೆಳಗ್ಗೆ 5.30ರಿಂದ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲಿದೆ ಎನ್ನಲಾಗಿದೆ.

Exit mobile version