ಬೆಂಗಳೂರು: ಇಡೀ ಆರ್‌ಆರ್‌ಆರ್ ಚಿತ್ರತಂಡ ತಮ್ಮ ಕುಟುಂಬದೊಂದಿಗೆ ಆಸ್ಕರ್ ಪ್ರಶಸ್ತಿ (Oscars 2023) ಸಮಾರಂಭದಲ್ಲಿ ಭಾಗಿಯಾಗಿದೆ. RRR ತಂಡವನ್ನು ಪ್ರತಿನಿಧಿಸಲು ರಾಮ್ ಚರಣ್ ಈವೆಂಟ್‌ಗೆ ಹಾಜರಾಗಿದ್ದರು. ಚಿತ್ರದ ಹಾಡು ನಾಟು ನಾಟು ಆಸ್ಕರ್‌ನಲ್ಲಿ ಅತ್ಯುತ್ತಮ ಮೂಲ ಗೀತೆಯನ್ನು ಗೆದ್ದುಕೊಂಡಿತು, ಇದು ವಿಭಾಗದಲ್ಲಿ ಗೆದ್ದ ಮೊದಲ ಭಾರತೀಯ ಗೀತೆಯಾಗಿದೆ. ರಾಮ್‌ಚರಣ್ ಜತೆ ಪತ್ನಿ ಉಪಾಸನಾ (Upasana) ಕೂಡ ಭಾಗಿಯಾಗಿದ್ದು, ಮಗು ನಮಗೆ ತುಂಬ ಅದೃಷ್ಟವನ್ನು ತರುತ್ತಿದೆʼʼಎಂದಿದ್ದಾರೆ.
ಟ್ವಿಟ್ಟರ್‌ನಲ್ಲಿ ಅಭಿಮಾನಿಗಳ ಖಾತೆಯಿಂದ ಹಂಚಿಕೊಂಡ ವಿಡಿಯೊದಲ್ಲಿ, ಉಪಾಸನಾ ಮಾತನಾಡಿ “ನಾನು ರಾಮ್ ಅವರನ್ನು ಬೆಂಬಲಿಸಲು ಇಲ್ಲಿದ್ದೇನೆ. ಆರ್‌ಆರ್‌ಆರ್ ಕುಟುಂಬದ ಭಾಗವಾಗಲು ನಾನು ಇಲ್ಲಿದ್ದೇನೆ. ಸ್ವಲ್ಪ ನರ್ವಸ್ ಆಗಿದ್ದೆʼʼಎಂದು ಹೇಳುತ್ತಿದ್ದಂತೆ ರಾಮ್‌ಚರಣ್ ಮಧ್ಯಪ್ರವೇಶಿಸಿ ಮಾತನಾಡಿ ʻʻಉಪಾಸನಾ ಈಗ ಆರು ತಿಂಗಳ ಗರ್ಭಿಣಿ. ಮಗು ನಮಗೆ ತುಂಬಾ ಅದೃಷ್ಟವನ್ನು ತರುತ್ತಿದೆ. ಗೋಲ್ಡನ್ ಗ್ಲೋಬ್‌ನಿಂದ ಹಿಡಿದು ಇಲ್ಲಿಯವೆರೆಗೆʼʼಎಂದು ಸಂತೋಷ ಹೊರಹಾಕಿದ್ದಾರೆ.
ರಾಮ್ ಚರಣ್ ಕಪ್ಪು ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡರೆ, ಉಪಾಸನಾ ಕ್ರೀಮ್ ಡಿಸೈನರ್ ಸೀರೆಯಲ್ಲಿ ಮಿಂಚಿದ್ದರು. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ, ನಾಟು ನಾಟುವನ್ನು ಲೈವ್ ಆಗಿ ಪ್ರದರ್ಶಿಸಲಾಯಿತು. ಪ್ರದರ್ಶನವು ಪ್ರಶಂಸೆಗೆ ಪಾತ್ರವಾಯಿತು.
ಇದನ್ನೂ ಓದಿ: Oscars 2023 : ಆಸ್ಕರ್ ವಿಜೇತ ʼನಾಟು ನಾಟುʼ ಹಾಡಿನ ರೂವಾರಿ ಇವರು
ಚಿತ್ರದ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್‌ನಲ್ಲಿ,
ʻʻಆರ್‌ಆರ್‌ಆರ್ ಭಾರತದ ಮೊದಲ ಆಸ್ಕರ್ ಪ್ರಶಸ್ತಿಯನ್ನು ಅತ್ಯುತ್ತಮ ಗೀತೆಯ ವಿಭಾಗದಲ್ಲಿ ನಾಟು ನಾಟು ಹಾಡಿನೊಂದಿಗೆ ತಂದ ಮೊದಲ ಚಲನಚಿತ್ರವಾಗಿದೆ. ಈ ಸಂತೋಷದ ಕ್ಷಣಗಳನ್ನು ಹೇಳಲು ಪದಗಳು ಸಾಲುತ್ತಿಲ್ಲ. ಪ್ರಪಂಚದಾದ್ಯಂತ ಇರುವ ನಮ್ಮ ಎಲ್ಲಾ ಅಭಿಮಾನಿಗಳಿಗೆ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ. ಧನ್ಯವಾದ!! ಜೈ ಹಿಂದ್!ʼʼಎಂದು ಬರೆದುಕೊಂಡಿದ್ದಾರೆ.