ಬೆಂಗಳೂರು: ದೀಪಿಕಾ ಪಡುಕೋಣೆ ಆಸ್ಕರ್ 2023ರಲ್ಲಿ (Oscars 2023) ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 95ನೇ ಆಸ್ಕರ್ ಪ್ರಶಸ್ತಿ ಭಾನುವಾರ, ಮಾರ್ಚ್ 12, 2023ರಂದು ಎಬಿಸಿಯಲ್ಲಿ ನೇರ ಪ್ರಸಾರವಾಗಲಿದೆ. ಇದರ ಬೆನ್ನಲ್ಲೇ ದೀಪಿಕಾ ಅವರು 2017ರಲ್ಲಿ, ವ್ಯಾನಿಟಿ ಫೇರ್ 2017 ಆಸ್ಕರ್‌ನಲ್ಲಿ ಭಾಗವಹಿಸಿದ್ದರು. ಆಗ ಅವರು ಬೋಲ್ಡ್ ಟು ಟೋನ್ ಮೋನಿಕ್ ಲುಯಿಲಿಯರ್ ಡ್ರೆಸ್ ಮೂಲಕ ಗಮನ ಸೆಳಿದಿದ್ದಾರೆ.
2017ರ ವ್ಯಾನಿಟಿ ಫೇರ್ ಆಸ್ಕರ್ ಪಾರ್ಟಿಯಲ್ಲಿ, ದೀಪಿಕಾ ಪಡುಕೋಣೆ ಮೊನಿಕ್ ಲುಯಿಲಿಯರ್ ಅವರ ಗೌನ್ ಧರಿಸಿದ್ದರು. ಬಂಗಾರ ಬಣ್ಣದ ಸ್ಕರ್ಟ್, ಕಪ್ಪು ಕಾರ್ಸೆಟ್-ಶೈಲಿಯ ರವಿಕೆ, ಸ್ಟ್ರಾಪ್‌ಲೆಸ್ ಸ್ಕ್ವೇರ್ ನೆಕ್‌ಲೈನ್‌ನೊಂದಿಗೆ ಮಿಂಚಿದ್ದರು. ಈ ಬಾರಿ ದೀಪಿಕಾ ಅವರು ಯಾವ ರೀತಿಯ ಉಡುಗೆ ತೊಡಬಹುದೆಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಹಳೆಯ ಫೋಟೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: Oscars 2023: ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಲಿರುವ ದೀಪಿಕಾ ಪಡುಕೋಣೆ
ಇದನ್ನೂ ಓದಿ: MM Keeravaani: ‘ಆಸ್ಕರ್ ಗೆದ್ದೇ ಗೆಲ್ಲುತ್ತೇವೆ’, ನಾಟು ನಾಟು ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ವಿಶ್ವಾಸ
ಕಾನ್ 2022ರಲ್ಲಿ ತೀರ್ಪುಗಾರರಾಗಿ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು. ಇದೀಗ ಆಸ್ಕರ್ 2023ರಲ್ಲಿ ನಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 95ನೇ ಅಕಾಡೆಮಿ ಪ್ರಶಸ್ತಿಗಳು (Oscars 2023) ಮಾರ್ಚ್ 12ರಂದು ಲಾಸ್ ಏಂಜಲೀಸ್‌ನಲ್ಲಿ (ಭಾರತದಲ್ಲಿ ಮಾರ್ಚ್ 13) ನಡೆಯಲಿದೆ. ದೀಪಿಕಾ ಪಡುಕೋಣೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿರುವ ಲಿಸ್ಟ್ ಹಂಚಿಕೊಂಡಿದ್ದಾರೆ. ಎಮಿಲಿ ಬ್ಲಂಟ್, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಡ್ವೇನ್ ಜಾನ್ಸನ್, ಮೈಕೆಲ್ ಬಿ ಜೋರ್ಡಾನ್, ಜಾನೆಲ್ಲೆ ಮೋನೆ, ಜೊ ಸಲ್ಡಾನಾ, ಜೆನ್ನಿಫರ್ ಕೊನ್ನೆಲ್ಲಿ, ರಿಜ್ ಅಹ್ಮದ್ ಮತ್ತು ಮೆಲಿಸ್ಸಾ ಮೆಕಾರ್ಥಿ ಅವರಂತಹವರ ಜತೆಗೆ ಇವರ ಹೆಸರು ಸೇರಿದೆ.