ಬೆಂಗಳೂರು: ಆಸ್ಕರ್ 2023 (Oscars 2023) ಘೋಷಣೆಯಾಗಿದೆ. ಬೆಸ್ಟ್ ಒರಿಜಿನಲ್ ಕೆಟಗರಿಯಲ್ಲಿ ಸ್ಪರ್ಧಿಸಿದ್ದ ಭಾರತದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು…(Naatu Naatu…) ಗೀತೆಯು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಕನ್ನಡದ ಹೆಮ್ಮೆಯ ಲಹರಿ ಸಂಸ್ಥೆ ಬಳಿ ನಾಟು ನಾಟು ಹಾಡಿನ ರೈಟ್ಸ್ ಇದೆ. ತಮ್ಮ ಸಂಸ್ಥೆಯ ಹಾಡಿಗೆ ಆಸ್ಕರ್ ಬಂದಿರುವ ಕುರಿತು ಲಹರಿ ಸಂಸ್ಥೆಯ ವೇಲು ವಿಸ್ತಾರದೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ಲಹರಿ ವೇಲು ಮಾತನಾಡಿ ʻʻನಾಟು ನಾಟು ಹಾಡಿಗೆ ಆಸ್ಕರ್ ಬಂದಿರುವುದು ನನಗೆ ತುಂಬ ಹೆಮ್ಮೆಯಾಗುತ್ತಿದೆ. ನಮ್ಮ ಸಂಸ್ಥೆಯ ಹಾಡಿಗೆ ಆಸ್ಕರ್ ಸಿಕ್ಕಿರುವುದು ಖುಷಿಯ ವಿಚಾರ. 48 ವರ್ಷಗಳ ಹಿಂದೆ ಸಂಸ್ಥೆ ಶುರು ಮಾಡಿದಾಗ ಆಸ್ಕರ್ ನಮ್ಮ ಸಂಸ್ಥೆಗೆ ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ದಕ್ಷಿಣ ಭಾರತ ಸಿನಿಮಾಗಳು ನಮ್ಮ ಸಂಸ್ಕ್ರತಿಯನ್ನು ಬಿಂಬಿಸುವ ಕೆಲಸ ಮಾಡುತ್ತಿದೆ. ಮುಂದಿನ ದಿನದಲ್ಲಿ ಕನ್ನಡಕ್ಕೂ ಆಸ್ಕರ್ ಬಂದೇ ಬರುತ್ತದೆ. ಈ ಹಾಡು ಕೇಳಿದಾಗ ಒಂದು ಪಾಸಿಟಿವ್ ವೈಬ್ಸ್ ಇತ್ತು. ಗೋಲ್ಡನ್ ಗ್ಲೋಬ್ ಬಂದಾಗಲೇ ಆಸ್ಕರ್ ಪ್ರಶಸ್ತಿ ಬಂದೇ ಬರುತ್ತದೆ ಎಂದು ಪಕ್ಕಾ ಆಗಿದ್ದೆʼʼಎಂದು ವಿಸ್ತಾರ ನ್ಯೂಸ್‌ಗೆ ಹೇಳಿಕೆ ನೀಡಿದರು.
ಇದನ್ನೂ ಓದಿ; RSS Movie: RSS ಯಶೋಗಾಥೆಯ ಸಿನೆಮಾ: ವಿಜಯೇಂದ್ರ ಪ್ರಸಾದ್ ಬರೆದ ಕಥೆಗೆ ರಾಜಮೌಳಿ ನಿರ್ದೇಶನ?
RSS ಯಶೋಗಾಥೆಯ ಸಿನೆಮಾ
ಕೆಲವು ದಿನಗಳಿಂದ RSS ಯಶೋಗಾಥೆಯ ಸಿನೆಮಾ ವಿಚಾರವಾಗಿ ಲಹರಿ ವೇಲು ಸುದ್ದಿಯಲ್ಲಿದ್ದರು. ಈ ಕುರಿತು ಲಹರಿ ವೇಲು ಮಾತನಾಡಿ ʻʻRSS ಕಥೆ ಬರೆಯಲು ಬರೆಯಲು ನಾನು ಹೇಳಿದ್ದೆ. ಕಥೆ ಈಗಾಗಲೇ ತಯಾರಿದೆ. ಒಳ್ಳೆಯ ನಿರ್ದೇಶಕರಿಗಾಗಿ ಹುಡುಕಾಟ ನಡೆಯುತ್ತಿದೆ. ಆರ್ ಎಸ್ ಎಸ್ ಸಿನಿಮಾ ನನ್ನ ಬ್ಯಾನರ್‌ನಲ್ಲಿಯೇ ಮೂಡಿ ಬರಲಿದೆ. ಈಗಾಗಲೇ ಎಲ್ಲ ಕಡೆ ಟೈಟಲ್ ರಿಜಿಸ್ಟರ್ ಆಗಿದೆʼʼ ಎಂದಿದ್ದರು.
ವಿಜಯೇಂದ್ರ ಪ್ರಸಾದ್ ಬರೆದ ಕಥೆಗೆ ರಾಜಮೌಳಿ ನಿರ್ದೇಶನ?
ರಾಜಮೌಳಿ ಅವರು ಒಪ್ಪಿದರೆ ಚಿತ್ರವನ್ನು ಈ ಕೂಡಲೇ ಮಾಡುವುದಕ್ಕೂ ರೆಡಿ ಇರುವುದಾಗಿ ಲಹರಿ ವೇಲು ಹೇಳಿದ್ದಾರೆ. ಆದರೆ ಸದ್ಯ ರಾಜಮೌಳಿ ಅವರು ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸ್ಪೈ ಚಿತ್ರ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ.