Site icon Vistara News

Oscars 2023: ಲಾಸ್ ಏಂಜಲೀಸ್‌ನಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿದ ರಾಮ್ ಚರಣ್

Ram Charan meets fans in Los Angeles

ಬೆಂಗಳೂರು: 95ನೇ ಅಕಾಡೆಮಿ ಪ್ರಶಸ್ತಿ (Oscars 2023) ಪ್ರದಾನ ಸಮಾರಂಭವು ಭಾರತೀಯ ಕಾಲಮಾನ ಮಾರ್ಚ್‌ 13ರಂದು ಮುಂಜಾನೆ 5.30ರಿಂದ ಆರಂಭವಾಗಲಿದೆ. ಈ ಕಾರ್ಯಕ್ರಮ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ಅದಕ್ಕೂ ಮುನ್ನ, ಅಮೆರಿಕಾದಲ್ಲಿ ರಾಮ್ ಚರಣ್ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಅವರನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದು ತಮ್ಮ ಮೆಚ್ಚಿನ ನಟನ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಲಾಸ್ ಏಂಜಲೀಸ್‌ನಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿದ ರಾಮ್ ಚರಣ್

ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್‌ಗೆ ನಾಮನಿರ್ದೇಶನವನ್ನು ಪಡೆದಿದೆ. ಪ್ರಶಸ್ತಿಗೆ ಕೇವಲ ಒಂದು ದಿನ ಬಾಕಿ ಇರುವಾಗ, ರಾಮ್ ಚರಣ್ ಲಾಸ್ ಏಂಜಲೀಸ್‌ನಲ್ಲಿ (Los Angeles) ತಮ್ಮ ಅಭಿಮಾನಿಗಳನ್ನು ಭೇಟಿಯಾದರು. ನೂರಾರು ಅಭಿಮಾನಿಗಳು ಅವರನ್ನು ನೋಡಲು ಸ್ಥಳಕ್ಕೆ ಬಂದಿದ್ದರು. ನಾಟು ನಾಟು ಸಂಯೋಜಕ ಎಂಎಂ ಕೀರವಾಣಿ ಮತ್ತು ಗಾಯಕರಾದ ರಾಹುಲ್ ಸಿಪ್ಲಿಗುಂಜ್-ಕಾಲಾ ಭೈರವ ಅವರು ಅಕಾಡೆಮಿ ವೇದಿಕೆಯಲ್ಲಿ ಪ್ರದರ್ಶನ ನೀಡಲಿದ್ದಾರೆ.

ಇದನ್ನೂ ಓದಿ:Oscars 2023: ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸೋಲಿನ ಬಳಿಕ ಪಾಪ್ ಸಿಂಗರ್ ರಿಹನ್ನಾ RRR ತಂಡಕ್ಕೆ ಹೇಳಿದ್ದೇನು?

ಪ್ರಶಸ್ತಿ ಪ್ರದಾನ ಮಾಡಲಿರುವ ದೀಪಿಕಾ ಪಡುಕೋಣೆ

ಸಮಾರಂಭದಲ್ಲಿ ನೇರ ಪ್ರದರ್ಶನಗಳ ಜತೆಗೆ, ನಟಿ ದೀಪಿಕಾ ಪಡುಕೋಣೆ ಪ್ರಶಸ್ತಿಯನ್ನು ನೀಡಲಿದ್ದಾರೆ. ಮಾರ್ಚ್ 12ರಂದು ಲಾಸ್ ಏಂಜಲೀಸ್ ನಲ್ಲಿ ಅಕಾಡೆಮಿ ಅವಾರ್ಡ್ ಸಮಾರಂಭ ನಡೆಯಲಿದೆ. ಇಡೀ ವಿಶ್ವವೇ ಎದುರು ನೋಡುತ್ತಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಈ ವರ್ಷ ಭಾರತೀಯರಿಗೂ ವಿಶೇಷವಾಗಿದೆ. ದೀಪಿಕಾ ಪಡುಕೋಣೆ ಸೋಷಿಯಲ್‌ ಮೀಡಿಯಾದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿರುವ ಲಿಸ್ಟ್‌ ಹಂಚಿಕೊಂಡಿದ್ದಾರೆ. ಎಮಿಲಿ ಬ್ಲಂಟ್, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಡ್ವೇನ್ ಜಾನ್ಸನ್, ಮೈಕೆಲ್ ಬಿ ಜೋರ್ಡಾನ್, ಜಾನೆಲ್ಲೆ ಮೋನೆ, ಜೊ ಸಲ್ಡಾನಾ, ಜೆನ್ನಿಫರ್ ಕೊನ್ನೆಲ್ಲಿ, ರಿಜ್ ಅಹ್ಮದ್ ಮತ್ತು ಮೆಲಿಸ್ಸಾ ಮೆಕಾರ್ಥಿ ಅವರಂತಹವರ ಜತೆಗೆ ಇವರ ಹೆಸರು ಸೇರಿದೆ.

Exit mobile version