ಬೆಂಗಳೂರು: RRR ಸ್ಟಾರ್ (Oscars 2023) ಜ್ಯೂನಿಯರ್ ಎನ್‌ಟಿಆರ್ ಮಾರ್ಚ್ 1 ರಂದು ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಕಪ್ಪು ಬಣ್ಣದ ಸೂಟ್ ಧರಿಸಿದ್ದರು. ಗೌರವ್ ಗುಪ್ತಾ-ವಿನ್ಯಾಸಗೊಳಿಸಿದ ಉಡುಪಿನಲ್ಲಿ ಹುಲಿ ಮೋಟಿಫ್ ಡಿಸೈನ್‌ನಲ್ಲಿ ಕಾಣಿಸಿಕೊಂಡಿದ್ದರು. ಜೂನಿಯರ್ ಎನ್‌ಟಿಆರ್ ಈ ಬಗ್ಗೆ ʻʻನಾನು ಏನು ಧರಿಸಬೇಕೆಂದು ಡಿಸೈನರ್ ಗೌರವ್ ಗುಪ್ತಾ ಮತ್ತು ನಾನು ಚರ್ಚಿಸಿದಾಗ, ನಾವು ನಿರ್ಧಾರ ಮಾಡಿದ್ದೇವು. ರೆಡ್ ಕಾರ್ಪೆಟ್‌ನಲ್ಲಿ ನಡೆಯುವುದು ನಾವಲ್ಲ, ಅದು ಭಾರತ, ಆದ್ದರಿಂದ ನಾವು ಭಾರತೀಯ ಉಡುಗೆಯನ್ನು ಧರಿಸಬೇಕು. ಹಾಗೇ ಹುಲಿ ಭಾರತದ ರಾಷ್ಟ್ರೀಯ ಪ್ರಾಣಿಯಾಗಿದೆ. ಈ ನಿಟ್ಟಿನಲ್ಲಿ ತನ್ನ ಸೂಟ್‌ನಲ್ಲಿ ಹುಲಿಯ ಡಿಸೈನ್ ಮಾಡಲಾಗಿದೆʼʼಎಂದು ಹೇಳಿಕೊಂಡಿದ್ದಾರೆ.
ಇದಕ್ಕೆ ಇನ್ನು ಮುಖ್ಯವಾದ ಕಾರಣವನ್ನು ಹೊಂದಿದ್ದರು. ವಿಶ್ವಾದ್ಯಂತ ಅನೇಕ ಜನರಿಗೆ ತಿಳಿದಿಲ್ಲದ ಸಂಗತಿಯೆಂದರೆ ಜ್ಯೂನಿಯರ್ ಎನ್‌ಟಿಆರ್ ತೆಲುಗು ಚಿತ್ರರಂಗದಲ್ಲಿ ಮತ್ತು ಅಭಿಮಾನಿಗಳಲ್ಲಿ ಯಂಗ್ ಟೈಗರ್ ಎಂದು ಕರೆಯುತ್ತಾರೆ.
ಇದನ್ನೂ ಓದಿ: Oscars 2023: ಆಸ್ಕರ್ ಗೆದ್ದ ಸಿನಿಮಾಗಳನ್ನು ಮನೆಯಲ್ಲೇ ನೋಡಿ! ಇವೆಲ್ಲ ಯಾವುದರಲ್ಲಿ ಲಭ್ಯ? ಇಲ್ಲಿದೆ ಮಾಹಿತಿ
ಜ್ಯೂನಿಯರ್ ಎನ್‌ಟಿಆರ್ ಪ್ರಶಸ್ತಿಯ ಬಗ್ಗೆ ಮಾತನಾಡಿ ʻʻಇದು ಕೇವಲ ಆರ್‌ಆರ್‌ಆರ್‌ಗೆ ಮಾತ್ರವಲ್ಲ, ಒಂದು ದೇಶವಾಗಿ ಭಾರತಕ್ಕೆ ಸಂದ ಗೆಲುವು. ಇದು ಕೇವಲ ಆರಂಭ ಎಂದು ನಾನು ನಂಬುತ್ತೇನೆ. ಭಾರತೀಯ ಚಿತ್ರರಂಗ ಎಷ್ಟು ದೂರ ಹೋಗಬಹುದು ಎಂಬುದನ್ನು ನಮಗೆ ತೋರಿಸುತ್ತಿದೆ. ಕೀರವಾಣಿ ಮತ್ತು ಚಂದ್ರಬೋಸ್‌ಗೆ ಅಭಿನಂದನೆಗಳು. ಖಂಡಿತವಾಗಿಯೂ ರಾಜಮೌಳಿ ಎಂಬ ಮಾಸ್ಟರ್ ಸ್ಟೋರಿ ಟೆಲ್ಲರ್ ಇಲ್ಲದೆ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ. ಭಾರತಕ್ಕೆ ಮತ್ತೊಂದು ಆಸ್ಕರ್ ಪ್ರಶಸ್ತಿಯನ್ನು ತಂದುಕೊಟ್ಟಿರುವ ‘ದಿ ಎಲಿಫೆಂಟ್ ವಿಸ್ಪರರ್ಸ್’ ತಂಡವನ್ನು ನಾನು ಅಭಿನಂದಿಸುತ್ತೇನೆ” ಎಂದು ಹೇಳಿದರು.