Site icon Vistara News

Oscars 2023: ಆಸ್ಕರ್‌ ಪ್ರಶಸ್ತಿಯ ಟ್ರೋಫಿ ಬೆಲೆ ಕೇವಲ 82 ರೂ! ಏಕಿಷ್ಟು ಕಡಿಮೆ?

#image_title

ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಆಸ್ಕರ್‌ ಪ್ರಶಸ್ತಿ ಬಾಚಿಕೊಂಡಿದೆ. ಆಸ್ಕರ್‌ ಪ್ರಶಸ್ತಿ (Oscars 2023) ಪಡೆದ ಕಲಾವಿದರು ಆಸ್ಕರ್‌ ಟ್ರೋಫಿ ಹಿಡಿದಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳ ತುಂಬೆಲ್ಲ ರಾರಾಜಿಸುತ್ತಿವೆ. ಅಷ್ಟಕ್ಕೂ ಈ ಟ್ರೋಫಿ ಬೆಲೆ ಎಷ್ಟು ಗೊತ್ತೇ? ಕೇವಲ ಒಂದು ಡಾಲರ್‌. ಅಂದರೆ 82 ರೂಪಾಯಿ! ಹೌದು. ಚಿನ್ನ ಲೇಪಿತ ಟ್ರೋಫಿಯ ಬೆಲೆ ಇಷ್ಟೊಂದು ಕಡಿಮೆ ಏಕು ಎನ್ನುವುದಕ್ಕೆ ಇಲ್ಲಿದೆ ಕಾರಣ.

ಇದನ್ನೂ ಓದಿ: Oscars 2023: ಆಸ್ಕರ್‌ ಗೆದ್ದ ಸಿನಿಮಾಗಳನ್ನು ಮನೆಯಲ್ಲೇ ನೋಡಿ! ಇವೆಲ್ಲ ಯಾವುದರಲ್ಲಿ ಲಭ್ಯ? ಇಲ್ಲಿದೆ ಮಾಹಿತಿ
ಆಸ್ಕರ್‌ ಪ್ರಶಸ್ತಿಯನ್ನು ಕಂಚಿನಿಂದ ಮಾಡಿ ಅದಕ್ಕೆ ಚಿನ್ನದ ಲೇಪನ ನೀಡಲಾಗಿರುತ್ತದೆ. ಆಸ್ಕರ್‌ ಪ್ರಶಸ್ತಿ ಕೊಡುವ ಅಕಾಡೆಮಿ ಆಫ್‌ ಮೋಷನ್‌ ಪಿಕ್ಚರ್ಸ್‌ ಆರ್ಟ್ಸ್‌ ಅಂಡ್‌ ಸೈನ್ಸಸ್‌ ಈ ಪ್ರಶಸ್ತಿಗೆ ಹಲವಾರು ನಿಯಮಗಳನ್ನು ಮಾಡಿಕೊಂಡಿದೆ. ಪ್ರಶಸ್ತಿ ಪಡೆಯುವ ಪ್ರತಿ ಕಲಾವಿದನಿಗೂ ಈ ನಿಯಮಗಳನ್ನು ಅನುಸರಿಸಬೇಕೆಂದು ಹೇಳಲಾಗುತ್ತದೆ. ಆ ನಿಯಮಗಳ ಪ್ರಕಾರ ಆಸ್ಕರ್‌ ಟ್ರೋಫಿಯನ್ನು ಮಾರಾಟ ಮಾಡುವುದಾಗಲೀ ಅಥವಾ ಇತರರಿಗೆ ಹಸ್ತಾಂತರ ಮಾಡುವಂತಿಲ್ಲ. ಒಂದು ವೇಳೆ ನಿಮಗೆ ಆ ಟ್ರೋಫಿ ಬೇಡವಾದಲ್ಲಿ ಅದನ್ನು ಅಕಾಡೆಮಿಗೇ ನೀಡಬೇಕು. ಅದಕ್ಕೆ ಅವರು ಒಂದು ಡಾಲರ್‌ ನೀಡುತ್ತಾರೆ.!

ಈ ಬಗ್ಗೆ 2015ರಲ್ಲಿಯೇ ಅಧಿಕೃತವಾಗಿ ನಿಯಮಾವಳಿಗಳನ್ನು ರೂಪಿಸಲಾಗಿದೆ. ಕ್ಯಾಲಿಫೋರ್ನಿಯಾದ ನ್ಯಾಯಾಧೀಶರು ಆಸ್ಕರ್‌ ಟ್ರೋಫಿ ಮಾರಾಟಕ್ಕೆ ನಿಷೇಧ ಹೇರಿದ್ದಾರೆ. ಆ ಕಾರಣದಿಂದಾಗಿ 400 ಡಾಲರ್‌ ವೆಚ್ಚದಲ್ಲಿ ತಯಾರಾಗುವ ಈ ಟ್ರೋಫಿಯನ್ನು ನೀವು ಮಾರಾಟ ಮಾಡಬೇಕೆಂದರೆ ನಿಮಗೆ ಸಿಗುವುದು ಕೇವಲ ಒಂದು ಡಾಲರ್.‌

ಇದನ್ನೂ ಓದಿ: Oscars 2023: ಆಸ್ಕರ್‌ ಪಾರ್ಟಿಯ ಬಳಿಕ ಶಾರ್ಟ್‌ ಪಿಂಕ್‌ ಡ್ರೆಸ್‌ನಲ್ಲಿ ಮಿಂಚಿದ ದೀಪಿಕಾ ಪಡುಕೋಣೆ
ಆಸ್ಕರ್‌ ಟ್ರೋಫಿಯನ್ನು 1927ರಲ್ಲಿ ರಚಿಸಲಾಯಿತು ಹಾಗೆಯೇ 1928ರಲ್ಲಿ ಮೊದಲನೆಯದಾಗಿ ಕೆತ್ತನೆ ಮಾಡಲಾಯಿತು. ಈ ಟ್ರೋಫಿ ಮೆಕ್ಸಿಕನ್‌ ನಟ ಎಮಿಲಿಯೊ ಫರ್ನಾಂಡಿಸ್‌ ಅವರನ್ನು ಹೋಲುತ್ತದೆ. ಅವರ ರೇಖಾಚಿತ್ರಗಳನ್ನು ಬಳಸಿಕೊಂಡು ಬಳಸಿಕೊಂಡು ಲಾಸ್‌ ಏಂಜಲೀಸ್‌ನ ಶಿಲ್ಪಿ ಜಾರ್ಜ್‌ ಸ್ಟಾನ್ಲಿ ಅವರು ಈ ಟ್ರೋಫಿಯನ್ನು ನಿರ್ಮಿಸಿದರು. ಆಸ್ಕರ್‌ ಟ್ರೋಫಿಯು ಕೈನಲ್ಲಿ ಕೋಲು(knight) ಹಿಡಿದಿದೆ.‌

ಆಸ್ಕರ್‌ ಟ್ರೋಫಿಗಳನ್ನು ಕಂಚಿನಲ್ಲಿ ತಯಾರಿಸಲಾಗುತ್ತದೆ ಮತ್ತು 24 ಕ್ಯಾರೆಟ್‌ ಚಿನ್ನದ ಲೇಪನ ಮಾಡಲಾಗುತ್ತದೆ. 2016ರಿಂದ ನ್ಯೂಯಾರ್ಕ್‌ನ ಪೋಲಿಚ್‌ ಟ್ಯಾಲಿಕ್ಸ್‌ ಅವರು ಈ ಟ್ರೋಫಿಗಳನ್ನು ಮಾಡಿಕೊಡುತ್ತಿದ್ದಾರೆ. ಮೊದಲು 3D ಪ್ರಿಂಟರ್‌ ಬಳಸಿಕೊಂಡು ಡಿಜಿಟಲ್‌ ಆಸ್ಕರ್‌ ಟ್ರೋಫಿ ತಯಾರಿಸಲಾಗುತ್ತದೆ. ಅದನ್ನು ಮೇಣದಲ್ಲಿ ತಯಾರಿಸಲಾಗುತ್ತದೆ. ನಂತರ ಅದಕ್ಕೆ ಸೆರಾಮಿಕ್‌ ಶೆಲ್‌ ಲೇಪಿಸಿ, 1600 ಡಿಗ್ರಿ ಫ್ಯಾರಡೀಸ್‌ನಲ್ಲಿ ಕಾಯಿಸಲಾಗುವುದು. ಆಗ ಮೇಣ ಸಂಪೂರ್ಣವಾಗಿ ಕರಗಿ ಟೊಳ್ಳಾಗಿರುವ ಸೆರಾಮಿಲ್‌ ಶೆಲ್‌ ಸಿಗುತ್ತದೆ. ಅದಕ್ಕೆ ಕಂಚಿನ ಎರಕಹೊಯ್ದು ಬ್ರೂಕ್ಲಿನ್‌ಗೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಎಪ್ನರ್‌ ಟೆಕ್ನಾಲಜೀಸ್‌ ಸಂಸ್ಥೆಯು 24 ಕ್ಯಾರೆಟ್‌ ಚಿನ್ನದ ಲೇಪನ ಮಾಡುತ್ತದೆ.

Exit mobile version