ಬೆಂಗಳೂರು: ಭಾರತೀಯ ಚಿತ್ರರಂಗಕ್ಕೆ 2023 ಅತ್ಯುತ್ತಮ ವರ್ಷವಾಗಿದೆ. 2024ರ ಆಸ್ಕರ್ (Oscars 2024) ರೇಸ್‌ನಲ್ಲಿ ಹಲವು ಭಾರತೀಯ ಸಿನಿಮಾಗಳು ಇರಲಿವೆ. ಕೆಲವು ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾಗಳ ಬಗ್ಗೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ, ಮುಂದಿನ ವರ್ಷ ಆಸ್ಕರ್ ರೇಸ್‌ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವ ಸಿನಿಮಾಗಳ ಹಸೆರುಗಳು ವೈರಲ್ ಆಗುತ್ತಿವೆ. ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ (Rocky Aur Rani Kii Prem Kahaani), ʻಜ್ವಿಗಾಟೊʼ (Zwigato), ʻದಿ ಕೇರಳ ಸ್ಟೋರಿʼ (The Kerala Story) ಆಸ್ಕರ್ 2024ರ ರೇಸ್‌ನಲ್ಲಿ ಆಯ್ಕೆಯಾಗಲಿವೆ ಎಂದು ಹೇಳಲಾಗುತ್ತಿದೆ.
ಇತ್ತೀಚಿನ ವರದಿಗಳ ಪ್ರಕಾರ, ಇತ್ತೀಚೆಗೆ ಬಿಡುಗಡೆಯಾದ ಕರಣ್ ಜೋಹರ್ ನಿರ್ದೇಶನದ ʼರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ, ಕಪಿಲ್ ಶರ್ಮಾ ಅಭಿನಯದ ಜ್ವಿಗಾಟೊ, ದಿ ಕೇರಳ ಸ್ಟೋರಿ, ರಾಣಿ ಮುಖರ್ಜಿ ಅಭಿನಯದ ಮಿಸೆಸ್ ಚಟರ್ಜಿ ವರ್ಸೆಸ್ ನಾರ್ವೆ, ಅಭಿಷೇಕ್ ಬಚ್ಚನ್ ಅಭಿನಯದ ʼಘೂಮರ್ʼ ಮತ್ತು ʼ12th ಫೇಲ್ʼ ಸಿನಿಮಾಗಳ ಹೆಸರು ಸೇರಿವೆ. ಸನ್ನಿ ಡಿಯೋಲ್ ಅವರ ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ ʼಗದರ್ 2ʼ ಸೇರಿದಂತೆ ಇನ್ನೂ ಕೆಲವು ಚಲನಚಿತ್ರಗಳು ಮುಂಬರುವ ಆಸ್ಕರ್ ರೇಸ್‌ನಲ್ಲಿ ಇರಲಿದೆ ಎಂದು ವರದಿಯಾಗಿದೆ.
ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ನೇತೃತ್ವದಲ್ಲಿ 17 ಸದಸ್ಯರ ಆಯ್ಕೆ ತೀರ್ಪುಗಾರರು ಈಗಾಗಲೇ ಎಲ್ಲೆಡೆಯಿಂದ ಪ್ರಾದೇಶಿಕ ಮತ್ತು ಉತ್ತಮ ಸಿನಿಮಾಗಳ ಆಯ್ಕೆಯನ್ನು ಮಾಡುವ ಅನ್ವೇಷಣೆಯಲ್ಲಿದೆ ಎಂದು ವರದಿಯಾಗಿದೆ. ಆಸ್ಕರ್ ಆಯ್ಕೆಗಾಗಿ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾಕ್ಕೆ ಕಳುಹಿಸಲಾದ ಕೆಲವು ಚಲನಚಿತ್ರಗಳಲ್ಲಿ ಅನಂತ್ ಮಹದೇವನ್ ಅವರ ದಿ ಸ್ಟೋರಿಟೆಲರ್, ಮ್ಯೂಸಿಕ್ ಸ್ಕೂಲ್, ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ, 12th ಫೇಲ್, ವರ್ತಿಮಾರನ್ ಅವರ ವಿದುತಲೈ ಭಾಗ 1, ಮತ್ತು ನಾನಿ ಅಭಿನಯದ ದಸರಾ ಮುಂತಾದ ಸಿನಿಮಾಗಳು ಇವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Actress Nayanthara: ದೀಪಿಕಾ ಹೈಲೈಟ್ ಆಗಿದ್ದಕ್ಕೆ ಬಾಲಿವುಡ್ ಸಿನಿಮಾ ಮಾಡದಿರಲು ನಯನತಾರಾ ನಿರ್ಧಾರ?
ಆಲಿಯಾ ಭಟ್ ಹಾಗೂ ರಣ್‌ವೀರ್ ಸಿಂಗ್ ಜೋಡಿಯ ಸಿನಿಮಾ ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’. ಬಹಳ ದಿನಗಳ ಬಳಿಕ ಕರಣ್ ಜೋಹರ್ ನಿರ್ದೇಶಿಸಿದ ಈ ಸಿನಿಮಾ ಜುಲೈ 28ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಹೀಗಿದ್ದರೂ, ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಸುಮಾರು 340 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿತ್ತು.’ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಸಿನಿಮಾ ಇದೀಗ ಅಮೆಜಾನ್ ಪ್ರೈಂನಲ್ಲಿ ಲಭ್ಯವಿದೆ. ಈ ಸಿನಿಮಾದಲ್ಲಿ ರಣ್‌ವೀರ್ ಸಿಂಗ್ ರಾಕಿ ರಾಂಧವನಾಗಿ ಹಾಗೂ ಆಲಿಯಾ ಭಟ್ ರಾಣಿ ಚಟರ್ಜಿಯಾಗಿ ಕಾಣಿಸಿಕೊಂಡಿದ್ದಾರೆ.