ಬೆಂಗಳೂರು: 96ನೇ ಸಾಲಿನ ಅಕಾಡೆಮಿ ಪ್ರಶಸ್ತಿ (96th Academy Awards) ಪ್ರದಾನ ಮಾರ್ಚ್ 10ರಂದು ಲಾಸ್ ಏಂಜಲೀಸ್‌ನಲ್ಲಿರುವ (Oscars 2024) ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದಿತ್ತು. ಜಾಗತಿಕವಾಗಿ ಖ್ಯಾತಿ ಗಳಿಸಿರುವ ಓಪನ್‌ಹೈಮರ್ (Oppenheimer) ಸಿನಿಮಾ ನಿರ್ದೇಶಕ ಕ್ರಿಸ್ಟೋಫರ್ ನೋಲನ್ (Christopher Nolan) ಅವರಿಗೆ 2024ನೇ ಸಾಲಿನ ಆಸ್ಕರ್ (Oscars 2024) ಪ್ರಶಸ್ತಿ ದೊರೆತಿತ್ತು. ಇದೀಗ 97ನೇ ಸಾಲಿನ ಅಕಾಡೆಮಿ ಪ್ರಶಸ್ತಿ (96th Academy Awards) ಯಾವಾಗ ನಡೆಯಲಿದೆ ಎಂದು ಡೇಟ್ ಫಿಕ್ಸ್ ಆಗಿದೆ. 97ನೇ ಆಸ್ಕರ್ 2025ರ ಮಾರ್ಚ್ 2ರಂದು (ಭಾರತದಲ್ಲಿ ಮಾರ್ಚ್ 3) ನಡೆಯಲಿದೆ. ಈ ಬಗ್ಗೆ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಮತ್ತು ABC ಘೋಷಿಸಿದೆ.
ಇದೀಗ ಅಕಾಡೆಮಿಯ ಅಧಿಕೃತ ಪೇಜ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. 97ನೇ ಸಾಲಿನ ಅಕಾಡೆಮಿ ಪ್ರಶಸ್ತಿ 2025ರ ಮಾರ್ಚ್ 2 ರಂದು (ಭಾರತದಲ್ಲಿ ಮಾರ್ಚ್ 3) ನಡೆಯಲಿದೆ. 2025ರ ಜನವರಿ 17ರಂದು ನಾಮನಿರ್ದೇಶನಗಳನ್ನು ಪ್ರಕಟಿಸಲಾಗುವುದು ಎಂದು ಬರೆದುಕೊಂಡಿದ್ದಾರೆ. ABC ಪ್ರಶಸ್ತಿ ಕಾರ್ಯಕ್ರಮವನ್ನು ಲೈವ್ ಸ್ಟ್ರೀಮ್ ಮಾಡಲಿದೆ.
ಇದನ್ನೂ ಓದಿ: Oscars 2024: ಆಸ್ಕರ್ ರೆಡ್ ಕಾರ್ಪೆಟ್ ಫ್ಯಾಷನ್‌ನಲ್ಲಿ ವೈವಿಧ್ಯಮಯ ಗೌನ್‌ಗಳದ್ದೇ ಹವಾ!
96ನೇ ಸಾಲಿನ ಅಕಾಡೆಮಿ ಪ್ರಶಸ್ತಿ
96ನೇ ಸಾಲಿನ ಅಕಾಡೆಮಿ ಪ್ರಶಸ್ತಿ (96th Academy Awards) ಪ್ರದಾನ ಮಾರ್ಚ್ 10ರಂದು ನಡೆದಿತ್ತು. 2024ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಮಾರ್ಚ್ 10ರಂದು ಲಾಸ್ ಏಂಜಲೀಸ್‌ನಲ್ಲಿರುವ (Oscars 2024) ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದಿದ್ದು, ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಮಾರ್ಚ್ 11ರಂದು ಭಾರತದಲ್ಲಿ ಪ್ರಸಾರ ಕಂಡಿತ್ತು. ಪೂರ್ ಥಿಂಗ್ಸ್ (Poor Things) ಸಿನಿಮಾದ ಅಭಿನಯಕ್ಕಾಗಿ ಎಮ್ಮಾ ಸ್ಟೋನ್ (Emma Stone) ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದರು.
ಜಾಗತಿಕವಾಗಿ ಖ್ಯಾತಿ ಗಳಿಸಿರುವ ಓಪನ್‌ಹೈಮರ್ (Oppenheimer) ಸಿನಿಮಾ ನಿರ್ದೇಶಕ ಕ್ರಿಸ್ಟೋಫರ್ ನೋಲನ್ (Christopher Nolan) ಅವರಿಗೆ 2024ನೇ ಸಾಲಿನ ಆಸ್ಕರ್ (Oscars 2024) ಪ್ರಶಸ್ತಿ ದೊರೆತಿತ್ತು. ಲಾಸ್ ಏಂಜಲೀಸ್‌ನಲ್ಲಿ (Los Angeles) ನಡೆದ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ಡಂಕಿರ್ಕ್ (Dunkirk) ಸಿನಿಮಾ ನಿರ್ದೇಶನಕ್ಕಾಗಿ 2018ರಲ್ಲಿ ಕ್ರಿಸ್ಟೋಫರ್ ನೋಲನ್ ಹೆಸರು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಆದರೆ, ಅವರಿಗೆ ಪ್ರಶಸ್ತಿ ಲಭಿಸಿರಲಿಲ್ಲ. ಆದರೆ, ಕ್ರಿಸ್ಟೋಫರ್ ನೋಲನ್ ಅವರು ಆಸ್ಕರ್ ಪ್ರಶಸ್ತಿ ಪಡೆದುಕೊಂಡರು.