Site icon Vistara News

OTT Release: ಒಟಿಟಿ ಎಂಟ್ರಿಗೆ ರೆಡಿ ಶಿವಣ್ಣನ ‘ಘೋಸ್ಟ್’; ಯಾವಾಗ, ಎಲ್ಲಿ?

ghost

ghost

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಶ್ರೀನಿ ಜೋಡಿಯ ʼಘೋಸ್ಟ್ʼ (Ghost) ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಅಕ್ಟೋಬರ್ 19ರಂದು ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಈ ಚಿತ್ರ ತೆರೆಕಂಡಿತ್ತು. ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿರುವ ʼಘೋಸ್ಟ್ʼ ಇದೀಗ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ (OTT Release).

ನ. 17ರಿಂದ ಸ್ಟ್ರೀಮಿಂಗ್

ಶಿವರಾಜ್‌ ಕುಮಾರ್ ‘ಘೋಸ್ಟ್’ ಸಿನಿಮಾ ಒಟಿಟಿಗೆ ಲಗ್ಗೆ ಇಡುವುದಕ್ಕೆ ರೆಡಿಯಾಗಿದೆ. ಇದು ಜೀ 5ನಲ್ಲಿ ನವೆಂಬರ್ 17ರಿಂದ ಪ್ರಸಾರ ಆಗಲಿದೆ. ಈ ಸಂಬಂಧ ಸ್ಪೆಷಲ್ ಪ್ರೋವೋ ಬಿಡುಗಡೆ ಮಾಡಲಾಗಿದೆ. ಇಲಿಯೊಂದು ಬಾಯಲ್ಲಿ ಚೀಟಿ ಹಿಡಿದು ಬರುತ್ತದೆ. ಬಳಿಕ ಅದನ್ನು ಶಿವಣ್ಣನ ಕೈಗೆ ಕೊಡುತ್ತದೆ. ಆ ಚೀಟಿಯ ಹಿಂಭಾಗಕ್ಕೆ ಶಿವರಾಜ್ ಕುಮಾರ್ ಬೆಂಕಿ ಹಿಡಿದಿರುವ ಅದರಲ್ಲಿ ಒಂದು ಮೆಸೇಜ್ ಕಂಡು ಬರುತ್ತದೆ. ಅದರಲ್ಲಿ ʼಘೋಸ್ಟ್ʼ ಚಿತ್ರವನ್ನು ಜೀ-5ನಲ್ಲಿ ನವೆಂಬರ್ 17ರಿಂದ ನೋಡಬಹುದು ಎಂಬ ಮೆಸೇಜ್ ಮೂಡುತ್ತದೆ.ಗೆ ಪ್ರೋವೋ ʼʼನನ್ನ ಗ್ಯಾಂಗ್‌ನಲ್ಲಿ ಇರೋ Informer ಒಬ್ಬ್ರು ನಿಮಗೆ ಒಂದು Messages ಕೊಟ್ಟಿದ್ದಾರೆ ಏನು ಅಂತ ಗೊತ್ತಾಯ್ತು ಅಲ್ವಾ?ʼʼ ಎನ್ನುವ ಶೀರ್ಷಿಕೆ ನೀಡಲಾಗಿದ್ದು, ವೈರಲ್ ಆಗಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ

ಸಂದೇಶ್‌ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ‘ಘೋಸ್ಟ್’ ಸಿನಿಮಾ ನಿರ್ಮಾಣಗೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದೆ. ಬಾಲಿವುಡ್‌ ನಟ ಅನುಪಮ್ ಕೇರ್, ಮಾಲಿವುಡ್‌ ಸ್ಟಾರ್‌ ಜಯರಾಂ, ಕೆಜಿಎಫ್‌ ಖ್ಯಾತಿಯ ಅರ್ಚನಾ ಜೋಯಿಸ್‌,  ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇನ್ನು ಚಿತ್ರದಲ್ಲಿ ನಾಯಕಿ ಇಲ್ಲ ಎನ್ನುವುದು ವಿಶೇಷ. ಅಂದಹಾಗೆ ಶ್ರೀನಿ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಯಾಂಗ್ ಸ್ಟರ್‌ ಆಗಿ ಅಬ್ಬರಿಸಿರುವ ಶಿವಣ್ಣನ ʼಘೋಸ್ಟ್ʼ ಸಿನಿಮಾವನ್ನು ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರು ಜೀ5 ಒಟಿಟಿಯಲ್ಲಿ‌ ನೋಡಬಹುದು.

ರಜನಿಕಾಂತ್‌ ಅಭಿನಯದ ʼಜೈಲರ್‌ʼ ಚಿತ್ರದ ಮೂಲಕ ಕಾಲಿವುಡ್‌ ಪ್ರವೇಶಿಸಿ ಗಮನ ಸೆಳೆದ ಶಿವರಾಜ್‌ ಕುಮಾರ್‌ ಇನ್ನೊಂದು ತಮಿಳು ಚಿತ್ರದಲ್ಲಿ ನಟಿಸಿದ್ದಾರೆ. ಧನುಷ್‌ ಜತೆಗೆ ತೆರೆ ಹಂಚಿಕೊಂಡಿರುವ ʼಕ್ಯಾಪ್ಟನ್‌ ಮಿಲ್ಲರ್‌ʼ ತೆರೆಗೆ ಬರಲು ಸಜ್ಜಾಗಿದೆ. ಜತೆಗೆ ಕನ್ನಡದ ʼಕರಟಕ ಧಮನಕʼ, ʼಭೈರತಿ ರಣಗಲ್‌ʼ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಮಲಯಾಳಂ ಚಿತ್ರರಂಗಕ್ಕೂ ಶೀಘ್ರದಲ್ಲೇ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Shiva Rajkumar: ಶಿವರಾಜ್‌ಕುಮಾರ್‌ ಅಭಿನಯದ ಘೋಸ್ಟ್‌ ಸಿನಿಮಾ ಕಲೆಕ್ಷನ್‌ ಎಷ್ಟು?

ಉಪೇಂದ್ರ ಮತ್ತು ಭಾವನಾ ಮೆನನ್‌ ಅಭಿನಯದ ʼಟೋಪಿವಾಲ‌ʼ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುವ ಮೂಲಕ ಶ್ರೀನಿ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದರು. ಬಳಿಕ ‘ಶ್ರೀನಿವಾಸ ಕಲ್ಯಾಣ’ ಸಿನಿಮಾವನ್ನು ನಿರ್ದೇಶಿಸುವ ಜತೆಗೆ ನಾಯಕನಾಗಿಯೂ ನಟಿಸಿದರು. ಬಳಿಕ ‘ಬೀರ್‌ಬಲ್‌’ ಚಿತ್ರದ ನಟನೆ, ನಿರ್ದೇಶನ ಎರಡೂ ವಿಭಾಗಗಳಲ್ಲಿ ಮೆಚ್ಚುಗೆ ಗಳಿಸಿದರು. ʼಓಲ್ಡ್‌ ಮಾಂಕ್‌ʼ ಸಿನಿಮಾದಲ್ಲೂ ನಟನೆ ಜತೆಗೆ ನಿರ್ದೇಶನವನ್ನೂ ನಿರ್ವಹಿಸಿದರು. ಸದ್ಯ ʼಬೀರ್‌ಬಲ್‌ 2ʼ ಚಿತ್ರದ ಕೆಲಸದಲ್ಲಿ ನಿರತರಾಗಿದ್ದಾರೆ. ಜತೆಗೆ ʼಘೋಸ್ಟ್‌ 2ʼ ಕೂಡ ಬರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version