ಭಯಾನಕ, ಹಾಸ್ಯ, ಥ್ರಿಲ್ಲರ್, ಆಕ್ಷನ್.. ಹೀಗೆ ಈ ವಾರದಲ್ಲಿ ಸಾಕಷ್ಟು ನಿರೀಕ್ಷೆಯ ಹಲವಾರು ಸಿನಿಮಾಗಳು ಒಟಿಟಿಯ ತೆರೆ (OTT releases) ಮೇಲೆ ಬರಲಿವೆ. ಹಳೆಯ ಶೋಗಳ ಹೊಸ ಸೀಸನ್‌ಗಳಿಂದ ಹಿಡಿದು ಹೊಚ್ಚಹೊಸ ಚಿತ್ರಗಳು ಪ್ರೇಕ್ಷಕರನ್ನು ರಂಜಿಸಲಿವೆ. ಡಿಸ್ನಿಪ್ಲಸ್ ಹಾಟ್‌ಸ್ಟಾರ್ (disney plus hotstar), ಜಿಯೋ ಸಿನಿಮಾ (jio cinema) , ಝೀ 5 (zee 5), ನೆಟ್ ಫ್ಲಿಕ್ಸ್ ನಲ್ಲಿ (netflix) ತೆರೆ ಕಾಣುವ ಚಿತ್ರಗಳ ಸಂಪೂರ್ಣ ವಿವರ ಇಲ್ಲಿದೆ.
ಶೋ ಟೈಮ್- ಭಾಗ 2
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ತೆರೆ ಕಂಡಿರುವ ಈ ಸರಣಿಯಲ್ಲಿ ಇಮ್ರಾನ್ ಹಶ್ಮಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಘು ಖನ್ನಾ ಪಾತ್ರಧಾರಿ ಇಮ್ರಾನ್ ಹಶ್ಮಿ ಅವರ ಮನೆ ಮೇಲೆ ನಡೆಯುವ ದಾಳಿಯಿಂದ ಅವರು ತೀವ್ರ ಹಿನ್ನಡೆಯನ್ನು ಎದುರಿಸಬೇಕಾಗುತ್ತದೆ. ಭವಿಷ್ಯದ ಅವರ ಯೋಜನೆಗಳು ಅಪಾಯಕ್ಕೆ ಸಿಲುಕಿಸುತ್ತದೆ. ಮೌನಿ ರಾಯ್, ಶ್ರಿಯಾ ಸರನ್ , ರಾಜೀವ್ ಖಂಡೇಲ್ವಾಲ್ ಅವರ ಸಂಬಂಧವು ಸವಾಲುಗಳನ್ನು ಎದುರಿಸುವ ಕಥಾ ಹಂದರವನ್ನು ಇದು ಒಳಗೊಂಡಿದೆ.
ಪಿಲ್
ಜಿಯೋ ಸಿನಿಮಾದಲ್ಲಿ ತೆರೆ ಕಂಡಿರುವ ʼಪಿಲ್ʼನಲ್ಲಿ ರಿತೇಶ್ ದೇಶ್‌ಮುಖ್ ಅವರು ಡಾ ಪ್ರಕಾಶ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇದು ಫಾರ್ಮಾ ಕಂಪನಿಗಳು, ಮಧ್ಯವರ್ತಿಗಳು ಮತ್ತು ವೈದ್ಯರನ್ನು ಒಳಗೊಂಡಿರುವ ಭ್ರಷ್ಟ ಸಂಬಂಧವನ್ನು ಬಹಿರಂಗಪಡಿಸುತ್ತದೆ. ಸಾಮಾನ್ಯ ವ್ಯಕ್ತಿಯೇ ಇದನ್ನು ತಡೆಯುವ ಭಾರವನ್ನು ಹೊರುತ್ತಾನೆ ಮತ್ತು ಇದರಿಂದ ಅಸಾಧಾರಣ ಸವಾಲುಗಳನ್ನು ಎದುರಿಸುವ ಕಥೆ ಇದಾಗಿದೆ.
ಕಾಕುಡ
ಝೀ 5ನಲ್ಲಿ ಬಿಡುಗಡೆಯಾದ ʼಕಾಕುಡʼ ಉತ್ತರ ಪ್ರದೇಶದ ರಾಥೋಡಿಯಲ್ಲಿ ಚಿತ್ರೀಕರಣಗೊಂಡಿದೆ. ʼಮುಂಜ್ಯಾʼ ಅನಂತರ ಆದಿತ್ಯ ಸರ್ಪೋತದಾರ್ ನಟಿಸಿರುವ ಮತ್ತೊಂದು ಹಾರರ್ ಕಾಮಿಡಿ ಚಿತ್ರ ಇದಾಗಿದೆ. ಕಾಕುಡನ ಕೋಪದಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರು ಪ್ರತಿ ದಿನ ಸಂಜೆ 7.15 ಕ್ಕೆ ಮನೆಯ ಹಿಂಬಾಗಿಲನ್ನು ತೆರೆಯಬೇಕು ಎಂದು ನಿರ್ದೇಶಿಸುವ ವಿಶಿಷ್ಟ ಆಚರಣೆಯನ್ನು ಚಿತ್ರವು ಪರಿಶೋಧಿಸುತ್ತದೆ. ಸೋನಾಕ್ಷಿ ಸಿನ್ಹಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಿತೇಶ್ ದೇಶಮುಖ್ ಅವರ ವಿಕ್ಟರ್ ಪ್ರೇತ ಬೇಟೆಗಾರ ಪಾತ್ರ ಹಾಸ್ಯದ ಪದರವನ್ನು ಚಿತ್ರದಲ್ಲಿ ಸೇರಿಸಿದೆ.
ಇದನ್ನೂ ಓದಿ: Kung Fu Panda 4 OTT: ಪುಟಾಣಿಗಳ ಫೇವರಿಟ್ ʻಕುಂಗ್ ಫು ಪಾಂಡಾ 4 ಸಿನಿಮಾʼ ಒಟಿಟಿಗೆ; ಕನ್ನಡ ಭಾಷೆಯಲ್ಲೂ ಲಭ್ಯ!
ವೈಕಿಂಗ್ಸ್: ವಲ್ಹಲ್ಲಾ ಸರಣಿ- 3
ನೆಟ್‌ಫ್ಲಿಕ್ಸ್‌ನಲ್ಲಿ ತೆರೆ ಕಂಡಿರುವ ಈ ಸರಣಿ ಏಳು ವರ್ಷಗಳ ಅನಂತರ ಬಂದಿದೆ. ಹೊಸ ಸವಾಲುಗಳು ಸಂಕಲ್ಪ ಮತ್ತು ಸ್ನೇಹವನ್ನು ಪರೀಕ್ಷಿಸುವ ಕಥೆಯನ್ನು ಇದು ಹೊಂದಿದೆ. ಫ್ರೆಡಿಸ್ ಎರಿಕ್ಸ್‌ಡೋಟರ್ ಪಾತ್ರದಲ್ಲಿ ನಾಯಕ ಪೇಗನ್ ಜೋಮ್ಸ್‌ಬೋರ್ಗ್, ಬ್ರಾಡ್ಲಿ ಫ್ರೀಗಾರ್ಡ್ ಕಿಂಗ್ ಕ್ಯಾನೂಟ್ ಆಗಿ, ಲಾರಾ ಬರ್ಲಿನ್ ರಾಣಿ ಎಮ್ಮಾ ಆಗಿ ಮತ್ತು ಡೇವಿಡ್ ಓಕ್ಸ್ ಅರ್ಲ್ ಗಾಡ್ವಿನ್ ಆಗಿ ಕಾಣಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ನಾಲ್ಕು ಬಹು ನಿರೀಕ್ಷಿತ ಚಿತ್ರ ಮತ್ತು ಸರಣಿಗಳು ಈ ವಾರ ಒಟಿಟಿಯಲ್ಲಿ ಭರ್ಜರಿ ಮನೋರಂಜನೆ ಒದಗಿಸಲಿವೆ.