Site icon Vistara News

OTT releases:‌ ಈ ವಾರ ಒಟಿಟಿಗೆ ಬರಲಿದೆ ʼಗದರ್‌ 2ʼ, ʼಓ ಮೈ ಗಾಡ್‌ 2ʼ

ott new

ott new

ನವ ದೆಹಲಿ: ಕೋವಿಡ್‌ ಸಮಯದಲ್ಲಿ ದೇಶದಲ್ಲಿ ಒಟಿಟಿ ಫ್ಲಾಟ್‌ಫಾರ್ಮ್‌ಗಳು ಅತ್ಯಂತ ಜನಪ್ರಿಯವಾಗಿದ್ದವು. ಮನೆಯೊಳಗೇ ಬಂಧಿಯಾಗಿದ್ದ ಜನರನ್ನು ಇದು ಮನರಂಜಿಸಿತ್ತು. ಈಗಲೂ ಒಟಿಟಿಯನ್ನೇ ನೆಚ್ಚಿಕೊಂಡಿರುವ ಹಲವು ಪ್ರೇಕ್ಷಕರಿದ್ದಾರೆ. ಅದಕ್ಕೆ ತಕ್ಕಂತೆ ವಿವಿಧ ಒಟಿಟಿ ಫ್ಲಾಟ್‌ಫಾರ್ಮ್‌ಗಳು ಹೊಸ ಹೊಸ ಸಿನಿಮಾ, ವೆಬ್‌ ಸೀರಿಸ್‌ ಬಿಡುಗಡೆ ಮಾಡಿ ನೋಡುಗರ ಮನ ತಣಿಸುತ್ತದೆ. ಈ ವಾರ ವಿವಿಧ ಒಟಿಟಿ ಫ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗುವ ಸಿನಿಮಾ/ ಶೋಗಳ (OTT releases) ಪರಿಚಯ ಇಲ್ಲಿದೆ.

ಬೆಕ್ಹ್ಯಾಮ್ (Beckham)-ನೆಟ್‌ಫ್ಲಿಕ್ಸ್‌

ಅಕ್ಟೋಬರ್‌ 4ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿರುವ 4 ಎಪಿಸೋಡ್‌ಗಳ ಸೀರಿಸ್‌ ಬೆಕ್ಹ್ಯಾಮ್. ಇದು ಫುಟ್‌ಬಾಲ್‌ ಆಟಗಾರ ಡೇವಿಡ್‌ ಬೆಕ್ಹ್ಯಾಮ್ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಅವರ ವೈಯಕ್ತಿಕ ಜೀವನ ಮತ್ತು ಮೂದಾನದಲ್ಲಿ ಅವರು ತೋರಿದ ಸಾಧನೆಗಳ ವಿವಿಧ ಹಂತಗಳನ್ನು ಇದು ವಿವರಿಸುತ್ತದೆ.

ಹಾಂಟೆಡ್ ಮ್ಯಾನ್ಷನ್ (Haunted Mansion)-ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌

ಅಮೇರಿಕಾದ ಹಾರರ್‌ ಕಾಮೆಡಿ ಹಾಂಟೆಡ್ ಮ್ಯಾನ್ಷನ್ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಅಕ್ಟೋಬರ್‌ 4ರಂದು ಬಿಡುಗಡೆಯಾಗಿದೆ. ಈ ಹಾರರ್‌ ಕಾಮಿಡಿ ಚಿತ್ರವನ್ನು ಜಸ್ಟಿನ್ ಸಿಮಿಯನ್ ನಿರ್ದೇಶಿಸಿದ್ದಾರೆ. ಲಾಕೀತ್ ಸ್ಟಾನ್ಫೀಲ್ಡ್, ಟಿಫಾನಿ ಹ್ಯಾಡಿಶ್, ಓವನ್ ವಿಲ್ಸನ್, ಡ್ಯಾನಿ ಡೆವಿಟೊ, ರೊಸಾರಿಯೊ ಡಾಸನ್, ಡಾನ್ ಲೆವಿ, ಜೇಮಿ ಲೀ ಕರ್ಟಿಸ್, ಜೇರೆಡ್ ಲೆಟೊ ಮತ್ತಿತರರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಖುಫಿಯ (Khufiya)-ನೆಟ್‌ಫ್ಲಿಕ್ಸ್‌

ಬಾಲಿವುಡ್‌ ಟಾಪ್‌ ನಟಿಯರಲ್ಲಿ ಒಬ್ಬರಾದ ಟಬು ಅಭಿನಯದ ಖುಫಿಯ ಚಿತ್ರ ಅಕ್ಟೋಬರ್‌ 5ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯ. ವಿಶಾಲ್ ಭಾರದ್ವಾಜ್ ಈ ಥ್ರಿಲ್ಲರ್ ಚಲನಚಿತ್ರವನ್ನು ಬರೆದು, ನಿರ್ಮಿಸಿ, ನಿರ್ದೇಶಿಸಿದ್ದಾರೆ. ಅಮರ್ ಭೂಷಣ್ ಅವರ ʼಎಸ್ಕೇಪ್ ಟು ನೋವೇರ್ʼ ಈ ಚಿತ್ರಕ್ಕೆ ಸ್ಫೂರ್ತಿ. ಅಲಿ ಫಜಲ್,ವಾಮಿಕಾ ಗಬ್ಬಿ ಮತ್ತಿತರರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಿಸ್‌ ಶೆಟ್ಟಿ ಮಿ.ಪೊಲಿಶೆಟ್ಟಿ (Miss Shetty Mr. Polishetty)-ನೆಟ್‌ಫ್ಲಿಕ್ಸ್‌

ಕೆಲವು ವರ್ಷಗಳ ಬ್ರೇಕ್‌ ಬಳಿಕ ಟಾಲಿವುಡ್‌ ಸೂಪರ್‌ ಸ್ಟಾರ್‌ ಅನುಷ್ಕಾ ಶೆಟ್ಟಿ ಅಭಿನಯಿಸಿರುವ ಈ ಚಿತ್ರ ಥಿಯೇಟರ್‌ಗಳಲ್ಲಿ ತೆರೆಕಂಡು ಯಶಸ್ವಿಯಾಗಿತ್ತು. ಅಕ್ಟೋಬರ್‌ 5ರಿಂದ ಕನ್ನಡತಿಯ ಈ ತೆಲುಗು ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು. ಮಹೇಶ್‌ ಶೆಟ್ಟಿ ಪಚಿಗೊಲ್ಲ ನಿರ್ದೇಶನದ ಈ ಚಿತ್ರದಲ್ಲಿ ನಾಯಕನಾಗಿ ನವೀನ್‌ ಪೊಲಿಶೆಟ್ಟಿ ಗಮನ ಸೆಳೆದಿದ್ದಾರೆ.

ಲುಪಿನ್‌ ಸೀಸನ್‌ 3 (Lupin Season 3)-ನೆಟ್‌ಫ್ಲಿಕ್ಸ್‌

ಅಕ್ಟೋಬರ್‌ 5ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಮತ್ತೊಂದು ಬಹು ನಿರೀಕ್ಷಿತ ಫ್ರೆಂಚ್‌ ಆ್ಯಕ್ಷನ್‌ ಅಡ್ವೆಂಚರ್‌ ಮಿಸ್ಟರಿ ಸೀರಿಸ್‌ ಇದು. ಕಳ್ಳ ಅಸ್ಸೇನ್ ಡಿಯೋಪ್‌ ಪಲಾಯನವನ್ನು ಈ ಎಪಿಸೋಡ್‌ ವಿವರಿಸುತ್ತದೆ.

ಇದನ್ನೂ ಓದಿ: BBK Season 10: ʻಬಿಗ್‌ ಬಾಸ್‌ʼ ಲಾಂಚ್‌ ಆಗುವ ದಿನವೇ ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌-7ʼ ಗ್ರ್ಯಾಂಡ್‌ ಫಿನಾಲೆ!

ಗದರ್‌ 2 (Gadar 2)-ಝೀ 5

ಭಾರತದಲ್ಲಿ ಅತೀ ಹೆಚ್ಚು ಗಳಿಸಿದ ಹಿಂದಿ ಚಿತ್ರಗಲ ಪೈಕಿ ಗದರ್‌ 2 ಕೂಡ ಒಂದು. ಇತ್ತೀಚೆಗೆ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಈ ಬಾಲಿವುಡ್‌ ಚಿತ್ರ ಅಕ್ಟೋಬರ್‌ 6ರಂದು ಝೀ 5ನಲ್ಲಿ ಬಿಡುಗಡೆಯಾಗಿದೆ. 2001ರ ಗದರ್‌ ಚಿತ್ರದ ಮುಂದುವರಿದ ಭಾಗವಾಗಿರುವ ಈ ಚಿತ್ರದಲ್ಲಿ ಸನ್ನಿ ಡಿಯೋಲ್‌, ಅಮೀಶಾ ಪಟೇಲ್‌, ಉತ್ಕರ್ಷ್‌ ಶರ್ಮ ಮತ್ತಿತರರು ನಟಿಸಿದ್ದಾರೆ.

ಮುಂಬೈ ಡೈರೀಸ್‌ ಸೀಸನ್‌ 2 (Mumbai Diaries Season 2)-ಪ್ರೈಮ್‌ ವಿಡಿಯೊ

ಅಕ್ಟೋಬರ್‌ 6ರಂದು ಪ್ರೈಮ್‌ ವಿಡಿಯೊದಲ್ಲಿ ಈ ಸೀರಿಸ್‌ ಪ್ರಸಾರವಾಗುತ್ತಿದೆ. ಬಾಲಿವುಡ್‌ ತಾರೆಗಳಾದ ಮೋಹಿತ್‌ ರೈನಾ, ಕೊಂಕಣ್‌ ಸೇನ್‌ ಶರ್ಮ ಮತ್ತಿತರರು ಅಭಿನಯಿಸಿರುವ ಈ ಸೀರಿಸ್‌ ಮುಂಬೈಯಲ್ಲಿ ಕಾಣಿಸಿಕೊಂಡ ಪ್ರವಾಹದ ಕಥೆಯನ್ನೊಳಗೊಂಡಿದೆ.

ಲೋಕಿ: ಸೀಸನ್‌ 2 (Loki: Season 2)-ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌

ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ನಲ್ಲಿ ಈ ಬಹು ನಿರೀಕ್ಷಿತ ಅಮೇರಿಕನ್‌ ಟಿವಿ ಸೀರಿಸ್‌ ಅಕ್ಟೋಬರ್‌ 6ರಿಂದ ಪ್ರಸಾರವಾಗುತ್ತಿದೆ. ಅದೇ ಹೆಸರಿನ ಮಾರ್ವೆಲ್ ಕಾಮಿಕ್ಸ್ ಪಾತ್ರವನ್ನು ಆಧರಿಸಿ ಈ ಸೀಸನ್‌ ತಯಾರಾಗಿದೆ.

ಇನ್ಸಿಡಿಯಸ್:‌ ದಿ ರೆಡ್‌ ಡೋರ್‌ (Insidious: The Red Door)-ನೆಟ್‌ಫ್ಲಿಕ್ಸ್‌

ನೆಟ್‌ಫ್ಲಿಕ್ಸ್‌ನಲ್ಲಿ ಅಕ್ಟೋಬರ್‌ 6ರಿಂದ ಈ ಅಮೇರಿಕನ್‌ ಹಾರರ್‌ ಚಿತ್ರ ಪ್ರಸಾರವಾಗುತ್ತಿದೆ. ಪ್ಯಾಟ್ರಿಕ್ ವಿಲ್ಸನ್ ಚೊಚ್ಚಲ ನಿರ್ದೇಶನದ ಚಿತ್ರ ಇದು. ಇನ್ಸಿಡಿಯಸ್:‌ ಚಾಪ್ಟರ್‌ 2 ಮುಂದುವರಿದ ಭಾಗ.

ಓ ಮೈ ಗಾಡ್‌ 2 (Oh My God! 2)-ನೆಟ್‌ಫ್ಲಿಕ್ಸ್‌

ಬಾಲಿವುಡ್ ಸೂಪರ್‌ ಸ್ಟಾರ್‌ ಅಕ್ಷಯ್‌ ಕುಮಾರ್‌ ಮತ್ತು ಯಾಮಿ ಗೌತಮ್‌ ಅಭಿನಯದ ಈ ಹಿಂದಿ ಚಿತ್ರ ಥಿಯೇಟರ್‌ನಲ್ಲಿ ತೆರೆಕಂಡು ಯಶಸ್ವಿಯಾಗಿತ್ತು. ಇದೀಗ ಅಕ್ಟೋಬರ್‌ 8ರಂದು ನೆಟ್‌ಫ್ಲಿಕ್ಸ್‌ ಮೂಲಕ ಬಿಡುಗಡೆಯಾಗಲಿದೆ.

Exit mobile version