Site icon Vistara News

Actor Prabhas | ಪ್ರಭಾಸ್‌ ಅಭಿಮಾನಿಗಳ ಪ್ರೀತಿಗೆ ಕ್ರ್ಯಾಶ್‌ ಆಯ್ತು ಆಹಾ ಒಟಿಟಿ!

Actor Prabhas

ಬೆಂಗಳೂರು : ನಂದಮೂರಿ ಬಾಲಕೃಷ್ಣ ನಡೆಸಿಕೊಡುತ್ತಿರುವ ಅನ್‌ಸ್ಪಾಪಬಲ್‌ ಶೋ ಒಟಿಟಿಯಲ್ಲಿ ಡಿಸೆಂಬರ್ 30ರಂದು ನಟ ಪ್ರಭಾಸ್‌ ವಿಶೇಷ ಅತಿಥಿಯಾಗಿ ಬಂದಿದ್ದರು. ಪ್ರೋಮೊ ನೋಡಿ ಪ್ರಭಾಸ್‌ ಅಭಿಮಾನಿಗಳು ಎಪಿಸೋಡ್‌ಗೆ ಭಾರಿ ಕಾತುರದಿಂದ ಕಾದಿದ್ದರು. ನಟ ಪ್ರಭಾಸ್‌ರ (Actor Prabhas) ಅಭಿಮಾನಿಗಳ ಪ್ರೀತಿಗೆ ಆಹಾ ಕ್ರ್ಯಾಶ್ ಆಗಿಬಿಟ್ಟಿದೆ. ಒಮ್ಮೆಲೆ ಪ್ರಭಾಸ್‌ರ ಎಪಿಸೋಡ್‌ ನೋಡಲು ಆಹಾ ಒಟಿಟಿ ತೆರೆದಿದ್ದರಿಂದ ಓವರ್‌ ಲೋಡ್ ಆಗಿ ಒಟಿಟಿ ಕ್ರ್ಯಾಶ್ ಆಗಿದೆ. ಇದನ್ನು ಸ್ವತಃ ಆಹಾ ಒಟಿಟಿ ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಂಡಿದೆ.

ಕೆಲವು ದಿನಗಳಿಂದಲೂ ಕಾಯುತ್ತಲೇ ಇದ್ದ ಅಭಿಮಾನಿಗಳು, ಒಮ್ಮೆಲೆ ಪ್ರಭಾಸ್‌ರ ಎಪಿಸೋಡ್‌ ನೋಡಲು ಆಹಾ ಒಟಿಟಿ ತೆರೆದಿದ್ದರಿಂದ ಓವರ್‌ ಲೋಡ್ ಆಗಿ ಒಟಿಟಿ ಕ್ರ್ಯಾಶ್ ಆಗಿದೆ. ಈ ಬಗ್ಗೆ ಟ್ವೀಟ್ ಸಹ ಮಾಡಿರುವ ಆಹಾ ಒಟಿಟಿ, ” ನಮ್ಮ ಅಪ್ಲಿಕೇಶನ್ ಆಫ್‌ಲೈನ್‌ ಆಗಿದೆ. ನಮಗೆ ಸ್ವಲ್ಪವೇ ಸಮಯ ಕೊಡಿ ನಾವಿದನ್ನು ಸರಿ ಮಾಡುತ್ತೇವೆ” ಎಂದು ಮನವಿ ಮಾಡಿತ್ತು. ಸತತ ಪ್ರಯತ್ನದ ಬಳಿಕ ವೆಬ್‌, ಸ್ಯಾಮ್‌ಸಂಗ್ ಹಾಗೂ ಆಪಲ್ ಟಿವಿಗಳನ್ನು ಆಹಾ ತೆರೆದುಕೊಳ್ಳುವಂತೆ ಮಾಡಲಾಯ್ತು. ಆ ನಂತರ ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಆಹಾ ಒಟಿಟಿ ಓಪನ್ ಆಗಿದೆ.

ಇದನ್ನೂ ಓದಿ | Actor Prabhas | ಬಯಲಾಯ್ತಾ ಪ್ರಭಾಸ್‌ ವಿಗ್‌ ಸೀಕ್ರೆಟ್‌: ವಿಡಿಯೊ ವೈರಲ್‌!

ಬಾಲಯ್ಯ ಜತೆಗಿನ ಪ್ರಭಾಸ್ ಎಪಿಸೋಡ್ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗದಲ್ಲಿ ಬಾಲಯ್ಯ ಅವರು ಪ್ರಭಾಸ್‌ ಅವರ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ.

ವೈರಲ್‌ ಆಗಿತ್ತು ಪ್ರೋಮೊ!
ಪ್ರಭಾಸ್‌ ತಮ್ಮ ಮದುವೆ ಬಗ್ಗೆ ಹೇಳಿಕೆ ಒಂದನ್ನು ನೀಡಿದ್ದು, ಕಾರ್ಯಕ್ರಮದ ಪ್ರೋಮೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ನಂದಮೂರಿ ಬಾಲಕೃಷ್ಣ ಅವರು ಪ್ರಭಾಸ್‌ ಅವರಿಗೆ ಮದುವೆ ಯಾವಾಗ ಎಂದು ಕೇಳಿದ್ದಾರೆ. ಪ್ರತಿಕ್ರಿಯೆ ನೀಡಿದ ಪ್ರಭಾಸ್‌ ʻʻಸಲ್ಮಾನ್‌ ಖಾನ್‌ ಅವರು ಮದುವೆಯಾದ ನಂತರ ಮದುವೆ ಆಗುತ್ತೇನೆʼʼ ಎಂದು ಉತ್ತರ ನೀಡಿದ್ದರು.

ಇದನ್ನೂ ಓದಿ | Actor Prabhas | ʻಸಲಾರ್‌ʼ ಬಗ್ಗೆ ಹೊಸ ಅಪ್‌ಡೇಟ್‌: ನಿಜಾನಾ ಅಂತಿದ್ದಾರೆ ಫ್ಯಾನ್ಸ್‌!

Exit mobile version