Site icon Vistara News

Bigg Boss OTT 2 House Tour: ಬಿಗ್ ಬಾಸ್ ಒಟಿಟಿ 2ನೇ ಸೀಸನ್‌ಗೆ ಭರ್ಜರಿ ತಯಾರಿ; ಮನೆಯ ಫೋಟೊಗಳು ಇಲ್ಲಿವೆ!

Bigg Boss OTT 2 House Tour

ಬೆಂಗಳೂರು: ಬಹು ನಿರೀಕ್ಷಿತ ರಿಯಾಲಿಟಿ ಶೋ, ಬಿಗ್ ಬಾಸ್ OTT ತನ್ನ ಎರಡನೇ ಸೀಸನ್‌ಗೆ (Bigg Boss OTT 2 House Tour) ಸಜ್ಜಾಗುತ್ತಿದ್ದಂತೆ ಪ್ರೇಕ್ಷಕರಲ್ಲಿ ಉತ್ಸಾಹ ಹೆಚ್ಚುತ್ತಿದೆ. ಕಾರ್ಯಕ್ರಮದ ಪ್ರೀಮಿಯರ್‌ಗೆ ಮುಂಚಿತವಾಗಿ, ತಯಾರಕರು ಬಿಗ್ ಬಾಸ್ ಒಟಿಟಿ ಸೀಸನ್‌ 2ರ ಮನೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಮನೆಯು ಐಷಾರಾಮಿ ಚಿತ್ರಿಣ ಇದೀಗ ರಿವೀಲ್‌ ಆಗಿದೆ.

ಬಿಗ್ ಬಾಸ್ OTT ಸೀಸನ್ 2 ಜೂನ್ 17 ರಂದು ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗಲಿದ್ದು, ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹೋಸ್ಟ್ ಆಗಿದ್ದಾರೆ. ಫರಾ ಖಾನ್ 2015ರಲ್ಲಿ ಬಿಗ್ ಬಾಸ್ʻ ಹಲ್ಲಾ ಬೋಲ್ʼ ಎಂಬ ಶೀರ್ಷಿಕೆಯ ಸ್ಪಿನ್‌ಆಫ್ ಆವೃತ್ತಿಯನ್ನು ಹೋಸ್ಟ್ ಮಾಡಿದರು. ಕರಣ್ ಜೋಹರ್ 2021ರಲ್ಲಿ ಬಿಗ್ ಬಾಸ್ OTT ಸೀಸನ್‌ ಒಂದನ್ನು ಹೋಸ್ಟ್ ಮಾಡಿದರು. ಇದೀಗ ಈ ಬಾರಿ ‘ಬಿಗ್​ ಬಾಸ್​ ಒಟಿಟಿ 2ನೇ ಸೀಸನ್​’ ನಿರೂಪಕರ ಸ್ಥಾನಕ್ಕೆ ಕರಣ್​ ಜೋಹರ್​ ಬದಲಿಗೆ ಸಲ್ಮಾನ್​ ಖಾನ್​ (Salman Khan) ಬಂದಿದ್ದಾರೆ. ಬಿಗ್ ಬಾಸ್ ಅತ್ಯಂತ ಯಶಸ್ವಿ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ ಹಾಗೂ ನಂಬರ್ ಒನ್ ಸ್ಥಾನವನ್ನು ಪಡೆದಿದೆ.

ಬಿಗ್‌ ಬಾಸ್‌ ಒಟಿಟಿ ಸೀಸನ್‌ 2ರ ಮನೆಯ ಫೋಟೊಗಳು

ಕಿರುತೆರೆ ನಟ ಅವಿನಾಶ್ ಸಚ್‌ದೇವ್‌ನಿಂದ ಹಿಡಿದು ಅಭಿಷೇಕ್ ಮಲ್ಹಾನ್ ವರೆಗೆ ಎಲ್ಲಾ ದೊಡ್ಡ ಸೆಲೆಬ್ರಿಟಿಗಳು ಮನೆಗೆ ಪ್ರವೇಶಿಸುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಜಿಯೋ ಸಿನಿಮಾ ಸೋಷಿಯಲ್‌ ಮೀಡಿಯಾದಲ್ಲಿ ಸ್ಪರ್ಧಿಗಳ ವಿಡಿಯೊವನ್ನು ಹಂಚಿಕೊಂಡಿತ್ತು. ಆದರೆ ಅವರ ಮುಖಗಳನ್ನು ಮಾತ್ರ ಪರಿಚಯಿಸಿಲ್ಲ.

ಇದನ್ನೂ ಓದಿ: Chaitra Hallikeri: ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್‌ ಬಾಸ್‌ ಖ್ಯಾತಿಯ ಚೈತ್ರಾ ಹಳ್ಳಿಕೇರಿ

ಆಸ್ಟ್ರೋ ಬೇಬಿ, ಹೀರೋ ನಂ, ಇನ್ಸಾನ್, ಒನ್ ಪೀಸ್, ವುಮಾನಿಯಾ, ಸೂಪರ್‌ಸ್ಟಾರ್, ತೀಖಿ ಪುರಿ ಮತ್ತು ಹೀರೋಯಿನ್ ಎಂಬ ನಿಕ್‌ ನೇಮ್‌ಗಳೊಂದಿಗೆ ಅವರ ಪ್ರಯಾಣವನ್ನು ಅನಾವರಣಗೊಳಿಸಿದೆ. ಆಲಿಯಾ ಸಿದ್ದಿಕಿ, ಸಿಮಾ ತಪರಿಯಾ, ಫಾಲಕ್ ನಾಜ್, ಜಿಯಾ ಶಂಕರ್, ಮನಿಶಾ ರಾಣಿ, ಪುನೀತ್, ಪಾಲಕ್ ಪುರಸ್ವಾನಿ ಮತ್ತು ಪೂಜಾ ಗೋರ್ ಇತರರ ಹೆಸರುಗಳು ಪಟ್ಟಿಯಲ್ಲಿವೆ. ಇನ್ನಷ್ಟೇ ಸ್ಪರ್ಧಿಗಳ ಮಾಹಿತಿ ಬರಬೇಕಿದೆ.

ಈ ಹಿಂದೆ, ರಾಜ್ ಕುಂದ್ರಾ, ಕುನಾಲ್ ಕಮ್ರಾ, ಕೈಲಾಶ್ ಖೇರ್ ಮತ್ತು ದಲೇರ್ ಮೆಹಂದಿ ಅವರನ್ನು ಸಂಪರ್ಕಿಸಲಾಗಿದೆ ಎಂದು ವರದಿಯಾಗಿತ್ತು. ಕಿರುತೆರೆ ನಟ ಫಹಮಾನ್ ಖಾನ್ ಕೂಡ ಬಿಗ್‌ ಬಾಸ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಉರ್ಫಿ ಜಾವೇದ್, ಶಮಿತಾ ಶೆಟ್ಟಿ, ರಾಕೇಶ್ ಬಾಪಟ್, ಜೀಶನ್ ಖಾನ್, ನಿಶಾಂತ್ ಭಟ್ ಮತ್ತು ನೇಹಾ ಭಾಸಿನ್ ಬಿಗ್‌ ಬಾಸ್‌ ಒಟಿಟಿಯ ಮೊದಲ ಸೀಸನ್‌ನಲ್ಲಿ ಸ್ಪರ್ಧಿಗಳಾಗಿದ್ದರು. ಎಂಸಿ ಸ್ಟಾನ್ ಬಿಗ್ ಬಾಸ್ 16ರ ಅಂತಿಮ ವಿಜೇತರಾಗಿದ್ದರು. ಶಿವ ಠಾಕರೆ ಮತ್ತು ಪ್ರಿಯಾಂಕಾ ಚಾಹರ್ ಚೌಧರಿ ರನ್ನರ್ಸ್ ಅಪ್ ಆಗಿ ಬಂದರು. ಟಿವಿಗೆ ಹೋಲಿಸಿದರೆ ಒಟಿಟಿಯಲ್ಲಿ ನಿರ್ಬಂಧಗಳು ಕಡಿಮೆ. ಸೆನ್ಸಾರ್​ನ ಹಂಗಿಲ್ಲದೇ ಕೆಲವು ಟಾಸ್ಕ್​ಗಳನ್ನು ನಡೆಸಬಹುದು. ಹಾಗಾಗಿ ‘ಬಿಗ್​ ಬಾಸ್​ ಒಟಿಟಿ’ ಕಾರ್ಯಕ್ರಮ ಕಳೆದ ವರ್ಷ ಹೈಪ್​ ಪಡೆದುಕೊಂಡಿತ್ತು.

Exit mobile version