ಬೆಂಗಳೂರು: ʻಕುಂಗ್ ಫು ಪಾಂಡ 4ʼ (Kung Fu Panda 4 ) ಎನ್ನುವುದು ಬಹುನಿರೀಕ್ಷಿತ ಸಾಹಸಮಯ ಸಿನಿಮಾ. ಕುಂಗ್ ಫುನ ಹೊಸ ಸಾಹಸಗಳನ್ನು ಕಣ್ತುಂಬಿಕೊಳ್ಳುವ ಸಮಯ ಬಂದಿದೆ. ಜಾಕ್ ಬ್ಲ್ಕ್ಯಾಕ್‌ನ ಪೂ ಪಾತ್ರವು ಹೊಸ ಡ್ರ್ಯಾಗನ್ ಸೈನಿಕನಾಗಿ ಆಗಮಿಸುತ್ತಿದೆ. ಸಾಹಸಮಯ ಹಾಸ್ಯ ಸಿನಿಮಾ ಇದೇ ಜುಲೈ 15ರಿಂದ ಜಿಯೋ ಸಿನೆಮಾ ಪ್ರೀಮಿಯಂ ಒಟಿಟಿಯಲ್ಲಿ ಲಭ್ಯವಿದೆ. ಅದಕ್ಕೂ ಮೊದಲು ನೋಡಬೇಕೆನ್ನುವವರು ರೆಂಟ್ ಹಣ ನೀಡಿ ನೋಡಬಹುದು. ನೀವು ಜಿಯೋ ಸಿನೆಮಾ ಪ್ರೀಮಿಯಂನ ಚಂದಾದಾರರಾಗಿದ್ದರೆ ಈ ಡ್ರಾಗನ್ ವಾರಿಯನ್ ಸಿನಿಮಾವನ್ನು ಕನ್ನಡ ಸೇರಿದಂತೆ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಬೆಂಗಾಳಿ ಭಾಷೆಗಳಲ್ಲಿ ನೋಡಬಹುದು.
ಮೈಕ್ ಮಿಚೆಲ್ ಮತ್ತು ಸ್ಟೆಫನಿ ಸ್ಟೈನ್ ಅವರ ಈ ಅನಿಮೇಟೆಡ್ ಸಿನಿಮಾದಲ್ಲಿ ಜ್ಯಾಕ್ ಬ್ಲ್ಯಾಕ್, ಡಸ್ಟಿನ್ ಹಾಫ್‌ಮನ್ (ಶಿಫು), ಜೇಮ್ಸ್ ಹಾಂಗ್ (ಲಿ ಶಾನ್), ಮತ್ತು ಬ್ರಿಯಾನ್ ಕ್ರಾನ್ಸ್‌ಟನ್ (ಮಿ. ಪಿಂಗ್) ಮುಂತಾದವರು ಸೇರಿದ್ದು, ಪ್ರಖ್ಯಾತ ಕುಂಗ್ ಫೂ ಪಾಂಡಾ ಕಥೆ ಇನ್ನಷ್ಟು ರೋಚಕವಾಗಿರುವ ಸೂಚನೆಯನ್ನು ನೀಡಿದೆ. ಪೂನ ಥ್ರಿಲ್ಲರ್ ಸಾಹಸಗಳು ಈ ಸಿನಿಮಾದಲ್ಲೂ ಮುಂದುವರೆದಿದೆ. ಫಾಕ್ಸ್ ಝೆನ್ ಪಾತ್ರಕ್ಕೆ ಅಕಫಿನಾ ಧ್ವನಿ ನೀಡಿದ್ದಾರೆ.
ಮೈಕ್ ಮಿಷೆಲ್ ಮತ್ತು ಸ್ಟೀಫನಿ ಸ್ಟೈನ್ ನಿರ್ದೇಶನದ ಈ ಅನಿಮೇಟೆಡ್ ಮಾಸ್ಟರ್ ಪೀಸ್ ಜಾಕ್ ಬ್ಲಾಕ್, ಡಸ್ಟಿನ್ ಹಾಫ್ ಮನ್ (ಶಿರ್ಫು), ಜೇಮ್ಸ್ ಹಾಂಗ್ (ಲಿ ಶಾನ್), ಮತ್ತು ಕ್ರೇನ್ಸ್ ಟನ್ (ಮಿ.ಪಿಂಗ್) ಅವರ ಧ್ವನಿಗಳು ಇವೆ.
ಇದನ್ನೂ ಓದಿ: Rashmika Mandanna: ಧನುಷ್ ನಟನೆಯ ʻಕುಬೇರʼ ಸಿನಿಮಾದ ರಶ್ಮಿಕಾ ಫಸ್ಟ್ ಲುಕ್ ಪೋಸ್ಟರ್ ಔಟ್!
ಹೊಸದಾಗಿ ಬಿಡುಗಡೆಯಾದ ಕುಂಗ್ ಫು ಪಾಂಡಾ 4ರೊಂದಿಗೆ ಸಿನಿಮಾ ಪ್ರೀಮಿಯಂ 4ಕೆ ಗುಣಮಟ್ಟದವರೆಗೆ ಜಾಹೀರಾತು ಮುಕ್ತ ಅನುಭವ ನೀಡಲಿದೆ, ಆಫ್ ಲೈನ್ ವೀಕ್ಷಣೆಯ ಆಯ್ಕೆಗಳನ್ನು ನೀಡಿದೆ. 8 ವರ್ಷಗಳ ಬಳಿಕ ಬಿಡುಗಡೆಯಾದ ಕುಂಗ್ ಫು ಪಾಂಡ 4 ಅನ್ನು ಇದೇ ಜುಲೈ 15ರಿಂದ ಮನೆಯಲ್ಲಿಯೇ ಕುಳಿತು ನೋಡಬಹುದಾಗಿದೆ. ಕುಂಗ್ ಫು ಪಾಂಡಾ 4ರಲ್ಲಿ ಜುಲೈ 15ರಿಂದ ಪ್ರಸಾರವಾಗಲಿರುವ ಜಿಯೊಸಿನಿಮಾ ಪ್ರೀಮಿಯಂನಲ್ಲಿ ಮಾತ್ರ ಆನಂದಿಸಿ