Site icon Vistara News

Manoj Bajpayee: ಹೊಸ ದಾಖಲೆ ಬರೆದ ಮನೋಜ್​ ಬಾಜಪೇಯಿ ಸಿನಿಮಾ!

Manoj Bajpayee starrer Sirf Ek Bandaa Kaafi

ಬೆಂಗಳೂರು: ‘ದಿ ಫ್ಯಾಮಿಲಿ ಮ್ಯಾನ್​’ ಮತ್ತು ‘ದಿ ಫ್ಯಾಮಿಲಿ ಮ್ಯಾನ್​ 2’ ಸೀರಿಸ್​ನಿಂದ ಖ್ಯಾತಿ ಪಡೆದ ಮನೋಜ್​ ಬಾಜಪೇಯಿ (Manoj Bajpayee) ಸಾಕಷ್ಟು ಫ್ಯಾನ್ಸ್‌ ಹೊಂದಿದ್ದಾರೆ. ಇದೀಗ ಮತ್ತೆ ನಟ ಸುದ್ದಿಯಲ್ಲಿದ್ದಾರೆ. ಹೊಸ ಸಿನಿಮಾ ‘ಸಿರ್ಫ್​ ಏಕ್​ ಬಂದಾ ಕಾಫಿ ಹೈ’ (Sirf Ek Bandaa Kaafi Hai) ಬಿಡುಗಡೆ ಆಗಿ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಒಟಿಟಿಯಲ್ಲಿ 200 ಮಿಲಿಯನ್ (20 ಕೋಟಿ)​ ನಿಮಿಷಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಾಣುವ ಮೂಲಕ ಈ ಸಿನಿಮಾ ದಾಖಲೆ ಬರೆದಿದೆ.

ಅಪೂರ್ವ್​ ಸಿಂಗ್​ ಕಾರ್ಕಿ ಅವರು ‘ಸಿರ್ಫ್​ ಏಕ್​ ಬಂದಾ ಕಾಫಿ ಹೈ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ವಿನೋದ್​ ಭಾನುಶಾಲಿ ಅವರು ನಿರ್ಮಾಣ ಮಾಡಿದ್ದಾರೆ. ಅಂದ್ರಿಜಾ, ಸೂರ್ಯ ಮೋಹನ್​, ನಿಖಿಲ್​ ಪಾಂಡೆ, ಜೈಹಿಂದ್​ ಕುಮಾರ್​, ದುರ್ಗಾ ಶರ್ಮಾ ಮುಂತಾದವರು ಕೂಡ ಮನೋಜ್​ ಬಾಜಪೇಯಿ ಜತೆ ನಟಿಸಿದ್ದಾರೆ.

ಏನಿದು ಕಥೆ

ದೇವ ಮಾನವ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬನಿಂದ ಅಪ್ರಾಪ್ತೆ ಮೇಲೆ ಲೈಂಗಿಕ ಕಿರುಕುಳ ಆಗುತ್ತದೆ. ಆಕೆಗೆ ನ್ಯಾಯ ಕೊಡಿಸಲು ಹೋರಾಡುವ ವಕೀಲನ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಮನೋಜ್​ ಬಾಜಪೇಯಿ ಅವರ ನಟನೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ ಮನೋಜ್ ಬಾಜಪೇಯಿ, “ಒಂದೆರಡು ವರ್ಷಗಳ ಕಠಿಣ ಪರಿಶ್ರಮ, ನಿರಂತರ ಅಭ್ಯಾಸ, ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ನಂತರ ಚಿತ್ರತಂಡ, ಸುಪರ್ಣ್ ಎಸ್ ವರ್ಮ, ವಿನೋದ್ ಸೇರಿದಂತೆ ಹಲವಾರು ಜನರ ಕೊಡುಗೆ ಅದ್ಭುತವಾಗಿದೆ. ಭಾನುಶಾಲಿ, ನಿರ್ದೇಶಕ ಅಪೂರ್ವ್ ಸಿಂಗ್ ಕರ್ಕಿ ಮತ್ತು ನಟರಾದ ಸೂರ್ಯ ಮೋಹನ್ ಕುಲಶ್ರೇಷ್ಠ ಮತ್ತು ಅದ್ರಿಜಾ ಸಿನ್ಹಾ ಅವರಂತಹ ನಟರಿಂದ ಚಿತ್ರವು ಸಂಭ್ರಮಾಚರಣೆ ಮಾಡುತ್ತಿದೆ”ಎಂದರು.

ಇದನ್ನೂ ಓದಿ: Raghav Chadha : ಬಾಲಿವುಡ್‌ಗೂ ಎಂಟ್ರಿ ಕೊಡ್ತಾರಾ ಆಪ್‌ ಎಂಪಿ ರಾಘವ್‌ ಛಡ್ಡಾ? ಫೋಟೊ ವೈರಲ್‌

ನಿರ್ಮಾಪಕ ವಿನೋದ್ ಭಾನುಶಾಲಿ ಮಾತನಾಡಿ ʻʻಚಿತ್ರವು ಪಡೆದ ರೀತಿಯ ವೀಕ್ಷಣೆಗಳು, ವರ್ಷದ ದಾಖಲೆಗಳನ್ನು ಮುರಿಯಲಿದೆ. ಇಂದಿನ ಸಮಯದಲ್ಲಿ ನಮ್ಮ ಪ್ರೇಕ್ಷಕರು ಯಾವುದೇ ಭಾಷೆಯಲ್ಲಿದ್ದರೂ ಉತ್ತಮ ಕಥೆ ಇದ್ದರೆ ಆದ್ಯತೆ ನೀಡುತ್ತಾರೆʼʼಎಂದರು.

ಮನೋಜ್​ ಬಾಜಪೇಯಿ ‘ಬ್ಯಾಂಡಿಟ್​ ಕ್ವೀನ್​’, ‘ಸತ್ಯ’, ‘ಪ್ರೇಮ ಕಥಾ’, ‘ದಿಲ್​ ಪೇ ಮತ್​ ಲೇ ಯಾರ್​’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕಿರುಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ. ನಿರ್ಮಾಪಕನಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ.

Exit mobile version