ಬೆಂಗಳೂರು: ಪ್ರಸ್ತುತ ಒಟಿಟಿ ಜನಪ್ರಿಯವಾಗುತ್ತದೆ. ಒಟಿಟಿಯಲ್ಲಿ ಪ್ರಸಾರವಾಗುವ ಚಲನಚಿತ್ರಗಳು, ವೆಬ್ ಸಿರೀಸ್, ಡಾಕ್ಯುಮೆಂಟರಿ ವೀಕ್ಷಣೆಗೆ ಅದರದ್ದೇ ಆದ ವೀಕ್ಷಕ ವರ್ಗವಿದೆ. ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಮ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮುಂತಾದ ಫ್ಲಾಟ್‌ಫಾರ್ಮ್ ಪ್ರತಿ ವಾರ ವೈವಿಧ್ಯಮಯ ಶೋಗಳನ್ನು ಪ್ರಸಾರ ಮಾಡುತ್ತವೆ. ಹಾಗಾದರೆ ಈ ವಾರ ಒಟ್ಟಿಯಲ್ಲಿ ತೆರೆ ಕಾಣಲಿರುವ ಜನಪ್ರಿಯ ಶೋಗಳು ಯಾವುವು ಎನ್ನುವ ವಿವರ ಇಲ್ಲಿದೆ (OTT Releases).
ರಿದಮ್ ಪ್ಲಸ್ ಫ್ಲೋ ಇಟಲಿ (ರಿಯಾಲಿಟಿ ಸರಣಿ)
ಇದು ನೆಟ್‌ಫ್ಲಿಕ್ಸ್‌ನಲ್ಲಿ ಫೆಬ್ರವರಿ 20ರಿಂದ ಪ್ರಸಾರವಾಗುತ್ತಿದೆ. ಈ ಸಂಗೀತ ಸ್ಪರ್ಧೆಯಲ್ಲಿ, ಫ್ಯಾಬ್ರಿ ಫಿಬ್ರಾ, ಜಿಯೋಲಿಯರ್ ಮತ್ತು ರೋಸ್ ವಿಲನ್ ಭಾಗವಹಿಸಿದ್ದಾರೆ. ಇವರು ರೋಮ್, ನೇಪಲ್ಸ್ ಮತ್ತು ಮಿಲನ್ ಬೀದಿಗಳಲ್ಲಿ ಪ್ರದರ್ಶನ ನೀಡುವ ಮೂಲಕ ವೀಕ್ಷಕರಲ್ಲಿ ಕುತೂಹಲ ಮೂಡಿಸಿದ್ದಾರೆ.
ಮೈಕ್ ಎಪ್ಸ್: ರೆಡಿ ಟು ಸೆಲ್ ಔಟ್ (ಕಾಮಿಡಿ ವೆಬ್ ಸರಣಿ)
ಅಮೇರಿಕನ್ ಸ್ಟ್ಯಾಂಡ್ ಅಪ್ ಹಾಸ್ಯನಟ ಮತ್ತು ನಟ ಮೈಕ್ ಎಪ್ಸ್ ತಮ್ಮ ಕಾಮಿಕ್ ಸ್ಟ್ಯಾಂಡಪ್ ಪ್ರದರ್ಶನದಿಂದ ಪ್ರೇಕ್ಷಕರನ್ನು ರಂಜಿಸುವ ಈ ಶೋ ನೆಟ್‌ಫ್ಲಿಕ್ಸ್‌ನಲ್ಲಿ ಫಬ್ರವರಿ 21ರಿಂದ ಸ್ಟ್ರೀಮಿಂಗ್ ಆಗಲಿದೆ.
ವಿಲ್ ಟ್ರೆಂಟ್ ಸೀಸನ್ 2 (ಸ್ಪೈ ಥ್ರಿಲ್ಲರ್ ವೆಬ್ ಸಿರೀಸ್)
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ವಿಲ್ ಟ್ರೆಂಟ್ ಸೀಸನ್ 2 ಫೆಬ್ರವರಿ 22ರಿಂದ ಪ್ರಸಾರವಾಗಲಿದೆ. ಜಾರ್ಜಿಯಾ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ನ ನುರಿತ ವಿಶೇಷ ಏಜೆಂಟ್ ವಿಲ್ ಟ್ರೆಂಟ್ ಅವರ ಸಾಹಸದೊಂದಿಗೆ ಹೊಸ ಸೀಸಸ್ ಪ್ರಸಾರವಾಗುತ್ತಿದೆ. ಸಂಕೀರ್ಣ ಪ್ರಕರಣಗಳನ್ನು ಬಗೆಹರಿಸುವುದನ್ನು ಇದರಲ್ಲಿ ಚಿತ್ರಿಸಲಾಗಿದೆ.
ಅವತಾರ್ ಆ್ಯಂಡ್ ಲಾಸ್ಟ್ ಏರ್ಬೆಂಡರ್ (ವೆಬ್ ಸರಣಿ)
ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿರುವ ಇನ್ನೊಂದು ವೆಬ್ ಸರಣಿ ಇದು. ಅವತಾರ್ ಆ್ಯಂಡ್ ಲಾಸ್ಟ್ ಏರ್ಬೆಂಡರ್ ಫೆಬ್ರವರಿ 23ರಿಂದ ಲಭ್ಯವಾಗಲಿದೆ. ಇದು ಅದೇ ಹೆಸರಿನ ಅನಿಮೇಟೆಡ್ ದೂರದರ್ಶನ ಸರಣಿಯ ರೂಪಾಂತರವಾಗಿದ್ದು, ಜಗತ್ತನ್ನು ಉಳಿಸಲು ನಾಲ್ಕು ಮೂಲಭೂತ ಶಕ್ತಿಗಳನ್ನು (ಗಾಳಿ, ನೀರು, ಭೂಮಿ ಮತ್ತು ಬೆಂಕಿ) ಆವಾಹ್ಸಿಕೊಳ ಮಾಡ‍್ಕೊಳುವ ಚಿಕ್ಕ ಹುಡುಗನನ್ನು ಕಥೆ ಹೇಳುತ್ತದೆ.
ಮಿ ಕಲ್ಪಾ (ಚಲನಚಿತ್ರ)
ನೆಟ್‌ಫ್ಲಿಕ್ಸ್‌ನಲ್ಲಿ ಫೆಬ್ರವರಿ 23ರಿಂದ ಪ್ರಸಾರವಾಗಲಿರುವ ಥ್ರಿಲ್ಲರ್ ಚಿತ್ರ. ಈ ಲೀಗಲ್ ಥ್ರಿಲ್ಲರ್ ತನ್ನ ಗೆಳತಿಯನ್ನು ಕೊಂದ ಆರೋಪ ಹೊತ್ತಿರುವ ಕಲಾವಿದನನ್ನು ರಕ್ಷಿಸಲು ವಕೀಲ ನಡೆಸುವ ಪ್ರಯತ್ನದ ಕಥೆಯನ್ನು ಹೇಳುತ್ತದೆ. ಲೀಗಲ್ ಥ್ರಿಲ್ಲರ್ ಇಷ್ಟಪಟುವವರು ನೋಡಲೇಬೇಕಾದ ಸಿನಿಮಾ ಇದು.
ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ದಿ ಬರೀಡ್ ಟ್ರುತ್ (ಸಾಕ್ಷ್ಯಚಿತ್ರ ಸರಣಿ)
ನೆಟ್‌ಫ್ಲಿಕ್ಸ್‌ನಲ್ಲಿ ಫೆಬ್ರವರಿ 23ರಿಂದ ಪ್ರಸಾರವಾಗಲಿರುವ ಇನ್ನೊಂದು ಆಸಕ್ತಿದಾಯಕ ಸಾಕ್ಷ್ಯಚಿತ್ರ ಸರಣಿ ಇದು. 2012ರಲ್ಲಿ ಶೀನಾ ಬೋರಾ ಅವರನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ಇಂದ್ರಾಣಿ ಮುಖರ್ಜಿ ಅವರ ಜೀವನದತ್ತ ಈ ಸರಣಿ ಬೆಳಕು ಚೆಲ್ಲುತ್ತದೆ.
ಪೋಚರ್ (ವೆಬ್ ಸಿರೀಸ್)
ಬಾಲಿವುಡ್ ನಟಿ ಆಲಿಯಾ ಭಟ್ ನಿರ್ಮಾಣದ ಕ್ರೈಂ ವೆಬ್ ಸಿರೀಸ್ ಇದು. ಅಮೇಜಾನ್ ಪ್ರೈಂ ವಿಡಿಯೊದಲ್ಲಿ ಇದು ಫೆಬ್ರವರಿ 23ರಿಂದ ಸ್ಟ್ರೀಮಿಂಗ್ ಆಗಲಿದೆ. ದೇಶದಲ್ಲಿನ ಆನೆ ದಂತ ಬೇಟೆಗಾರರನ್ನು ಪತ್ತೆಹಚ್ಚಲು ತಮ್ಮ ಪ್ರಾಣವನ್ನು ಪಣಕ್ಕಿಡುವ ಅರಣ್ಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಎನ್‌ಜಿಒ ಕಾರ್ಯಕರ್ತರ ಕಥೆಯನ್ನು ಇದರಲ್ಲಿ ವಿವರಿಸಲಾಗಿದೆ. ಈ ಸಿರೀಸ್ ಹಿಂದಿ, ಮಲಯಾಳಂ, ತೆಲುಗು, ಕನ್ನಡ ಮತ್ತು ತಮಿಳಿನಲ್ಲಿ ಲಭ್ಯ.
ಮಲೈಕೊಟ್ಟೈ ವಲಿಬನ್ (ಮಲಯಾಳಂ ಚಲನಚಿತ್ರ)
ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಅಭಿನಯದ ಈ ವರ್ಷದ ಬಹು ನಿರೀಕ್ಷಿತ ಮಲಯಾಳಂ ಚಿತ್ರ ಮಲೈಕೊಟ್ಟೈ ವಲಿಬನ್. ಜನವರಿ 25ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಗೊಂಡು ಯಶಸ್ಸು ಗಳಿಸಿದ ಈ ಚಿತ್ರ ಫೆಬ್ರವರಿ 23ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ತೆರೆ ಕಾಣಲಿದೆ.
ಅಪಾರ್ಟ್‌ಮೆಂಟ್ 404 (ಕೊರಿಯನ್ ವೆಬ್ ಸರಣಿ)
ಕೊರಿಯನ್ ವೆಬ್‌ಸರಣಿ ಇಷ್ಟಪಡುವವರಿಗಾಗಿ ಫೆಬ್ರವರಿ 23ರಿಂದ ಅಮೇಜಾನ್ ಪ್ರೈಂ ವಿಡಿಯೊದಲ್ಲಿ ಅಪಾರ್ಟ್‌ಮೆಂಟ್ 404 ಪ್ರಸಾರವಾಗಲಿದೆ. ಈ ಥ್ರಿಲ್ಲರ್ ಆರು ಮಂದಿಯನ್ನು ಒಳಗೊಂಡ ಗುಂಪಿನ ಸುತ್ತ ಸುತ್ತುತ್ತದೆ. ಇದು ನಿಜ ಘಟನೆಗಳಿಂದ ಸ್ಫೂರ್ತಿ ಪಡೆದಿದೆ.
ಇದನ್ನೂ ಓದಿ: Actor Dhanush: ಧನುಷ್ ಎರಡನೇ ನಿರ್ದೇಶನದ ಸಿನಿಮಾಗೆ ಟೈಟಲ್ ಫಿಕ್ಸ್; ಫಸ್ಟ್ ಲುಕ್ ಔಟ್!