Site icon Vistara News

OTT Releases This Week: ಈ ವಾರ ಒಟಿಟಿಗೆ ಹಲವು ಸಿನಿಮಾಗಳು, ಸಿರೀಸ್‌ಗಳು; ಇಲ್ಲಿದೆ ಡಿಟೇಲ್ಸ್‌!

OTT Releases This Week

ಬೆಂಗಳೂರು: ಈ ವಾರ ಜೂನ್‌ 2ರಿಂದ 15ಕ್ಕೂ ಅಧಿಕ ಸಿನಿಮಾ, ವೆಬ್‌ ಸೀರಿಸ್‌ಗಳು (OTT Releases This Week) ಒಟಿಟಿಗೆ ಲಗ್ಗೆ ಇಟ್ಟಿವೆ. ಪ್ಯಾನ್ ಇಂಡಿಯಾ ಸಿನಿಮಾ ‘ಪೊನ್ನಿಯನ್ ಸೆಲ್ವನ್- 2’ ಚಂದಾದಾರರಿಗೆ ಉಚಿತವಾಗಿ ನೋಡಲು ಲಭ್ಯವಾಗುತ್ತಿದೆ. 5 ದಿನಗಳ ಹಿಂದೆಯೇ ಮಣಿರತ್ನಂ ನಿರ್ದೇಶನದ ಈ ಸಿನಿಮಾ ಅಮೆಜಾನ್ ಪ್ರೈಮ್‌ಗೆ ಬಂದಿತ್ತು. ಆದರೆ ಚಂದಾದಾರರೂ ಹಣ ಪಾವತಿಸಿ ಸಿನಿಮಾ ನೋಡಬೇಕಾಗಿತ್ತು. ಆದರೆ ಇಂದಿನಿಂದ ( ಜೂನ್‌ 2) ಉಚಿತವಾಗಿ ನೋಡುವ ಅವಕಾಶ ಸಿಕ್ಕಿದೆ. ಕನ್ನಡ ವರ್ಷನ್ ‘ಪೊನ್ನಿಯನ್ ಸೆಲ್ವನ್- 2’ ಕೂಡ ಪ್ರೈಂ ವಿಡಿಯೊದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ತೆಲುಗಿನ ‘ಉಗ್ರಂ’ ಸಿನಿಮಾ

ತೆಲುಗು ಆ್ಯಕ್ಷನ್ ಚಿತ್ರ ‘ಉಗ್ರಂ’ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಜೂನ್‌2ರಿಂದ ಸ್ಟ್ರೀಮಿಂಗ್ ಆಗುತ್ತಿದೆ. ಅಲ್ಲರಿ ನರೇಶ್ ಅಭಿನಯದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಒಳ್ಳೆಯ ರೆಸ್ಪಾನ್ಸ್‌ ಇರಲಿಲ್ಲ. ವಿಜಯ್ ಕನಕಮೇಡ ನಿರ್ದೇಶನ ಈ ಸಿನಿಮಾಕ್ಕಿದೆ. ಇದರ ಹೊರತಾಗಿ ನರೇಶ್ ಅವರ ನಟನೆಯು ಮೆಚ್ಚುಗೆಯನ್ನು ಪಡೆದಿದೆ. ಶ್ರೀ ಚರಣ್ ಪಾಕಳ ಅವರ ಸಂಗೀತ, ಸಿದ್ಧಾರ್ಥ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯ್ ಸೇತುಪತಿಯ ಮೊದಲ ಬಾಲಿವುಡ್‌ ಸಿನಿಮಾ ‘ಮುಂಬೈಕರ್’

ʻಮುಂಬೈಕರ್ʼ ಸಿನಿಮಾ ದಕ್ಷಿಣದ ಸ್ಟಾರ್ ನಟ ವಿಜಯ್ ಸೇತುಪತಿ ಅವರ ಮೊದಲ ಬಾಲಿವುಡ್‌ ಸಿನಿಮಾ. ವಿಕ್ರಾಂತ್ ಮಾಸ್ಸೆ, ತಾನ್ಯಾ ಮಾಣಿಕ್ತಾಲಾ, ಸಂಜಯ್ ಮಿಶ್ರಾ ಮತ್ತು ರಣವೀರ್ ಶೋರೆ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂತೋಷ್ ಶಿವನ್ ನಿರ್ದೇಶನದ ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ 2017ರ ತಮಿಳು ಭಾಷೆಯ ʻಮಾನಗರಂʼ ಸಿನಿಮಾದ ರೂಪಾಂತರವಾಗಿದೆ. ಈ ಸಿನಿಮಾ ಥಿಯೇಟರ್ ಬದಲು ನೇರವಾಗಿ ಜಿಯೋ ಸಿನಿಮಾ ಒಟಿಟಿ ಫ್ಲಾಟ್‌ಪಾರ್ಮ್‌ಗೆ ಜೂನ್‌ 2ರಿಂದಲೇ ಬರುತ್ತಿದೆ.

ಇದನ್ನೂ ಓದಿ: Bigg Boss OTT season 2: ʻಹಿಂದಿ ಬಿಗ್‌ ಬಾಸ್‌ ಒಟಿಟಿ 2ನೇʼ ಸೀಸನ್‌ ಹಾಸ್ಟ್‌ ಮಾಡುತ್ತಿದ್ದಾರೆ ಸಲ್ಮಾನ್‌ ಖಾನ್‌; ಪ್ರೊಮೊ ಇಲ್ಲಿದೆ!

ನೆಟ್‌ಪ್ಲಿಕ್ಸ್‌ನಲ್ಲಿ ‘ಮೆನಿಫೆಸ್ಟ್’ (Manifest Season 4 Part 2)

ನೆಟ್‌ಫ್ಲಿಕ್ಸ್‌ನಲ್ಲಿ ‘ಮೆನಿಫೆಸ್ಟ್’ ಸೀಸನ್- 4 ಪಾರ್ಟ್‌- 2(ಇಂಗ್ಲೀಷ್) ವೆಬ್‌ ಸೀರಿಸ್ ರಿಲೀಸ್ ಆಗಲಿದೆ. ‘ವಲರಿಯಾ’ ಸೀಸನ್- 3 (ಇಂಗ್ಲೀಷ್) ಹಾಗೂ ‘ಸ್ಕೂಪ್’ (ಹಿಂದಿ ಸೀರಿಸ್) ಕೂಡ ಬರಲಿದೆ. ಮ್ಯಾನಿಫೆಸ್ಟ್ ಸೀಸನ್ 4 ಭಾಗ 2ರಲ್ಲಿ, ಅನೇಕ ಪಾತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಇವುಗಳಲ್ಲಿ ಆಲಿವ್ ಆಗಿ ಲೂನಾ ಬ್ಲೇಸ್, ಓಲ್ಡರ್ ಕ್ಯಾಲ್ ಆಗಿ ಟೈ ಡೋರಾನ್, ಸಾನ್ವಿಯಾಗಿ ಪರ್ವೀನ್ ಕೌರ್, ಮೈಕೆಲಾ ಆಗಿ ಮೆಲಿಸ್ಸಾ ರಾಕ್ಸ್‌ಬರ್ಗ್, ಬೆನ್ ಆಗಿ ಜೋಶ್ ಡಲ್ಲಾಸ್, ವ್ಯಾನ್ಸ್ ಆಗಿ ಡ್ಯಾರಿಲ್ ಎಡ್ವರ್ಡ್ಸ್ ಮತ್ತು ಜೆರೆಡ್ ಆಗಿ ಜೆ.ಆರ್.ರಾಮಿರೆಜ್ ಅಭಿನಯಿಸಿದ್ದಾರೆ.

ಈವಿಲ್ ಡೆಡ್ ರೈಸ್ (Evil Dead Rise)

ಲೀ ಕ್ರೋನಿನ್ ಅವರ ನಿರ್ದೇಶನದ ಈವಿಲ್ ಡೆಡ್ ರೈಸ್’ ಚಿತ್ರಮಂದರಿಗಳಲ್ಲಿ ಯಶಸ್ವಿ ಪ್ರದರ್ಶನದ ಬಳಿಕ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಸಹೋದರಿಯರ ಸುತ್ತ ಕಥೆ ಇದೆ. ಇದರಲ್ಲಿ ಲಿಲಿ ಸುಲ್ಲಿವಾನ್ ಮತ್ತು ಅಲಿಸ್ಸಾ ಸದರ್ಲ್ಯಾಂಡ್ ಸಹೋದರಿಯರಾಗಿ ನಟಿಸಿದ್ದಾರೆ. ಮೋರ್ಗನ್ ಡೇವಿಸ್, ಗೇಬ್ರಿಯಲ್ ಎಕೋಲ್ಸ್ ಮತ್ತು ನೆಲ್ ಫಿಶರ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಬುಕ್‌ಮೈ ಶೋದಲ್ಲಿ ‘ಈವಿಲ್ ಡೆಡ್ ರೈಸ್’ ಇಂಗ್ಲೀಶ್ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಜಿಯೋ ಸಿನಿಮಾದಲ್ಲಿ ‘ಮುಂಬೈಕರ್’ ಜೊತೆಗೆ ಮರಾಠಿ ಚಿತ್ರ ‘ಗೋದಾವರಿ’ ಕೂಡ ಸ್ಟ್ರೀಮಿಂಗ್ ಆಗಲಿದೆ.

Exit mobile version