Site icon Vistara News

Pawan Kalyan: ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮುಂದಾಗಿದ್ದ ಪವನ್ ಕಲ್ಯಾಣ್‌! ಬದುಕು ನೀಡಿದ್ದು ಚಿರಂಜೀವಿ

Pawan Kalyan opens up about his battle with depression

ಬೆಂಗಳೂರು: ತೆಲುಗು ಚಿತ್ರರಂಗದ ಖ್ಯಾತ ನಟ ಪವನ್‌ ಕಲ್ಯಾಣ್‌ (Pawan Kalyan) ಅದೊಮ್ಮೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರಂತೆ. ಆಗ ಅವರನ್ನು ತಡೆದು ರಕ್ಷಣೆ ಮಾಡಿದ್ದು ಮೆಗಾ ಸ್ಟಾರ್‌ ಚಿರಂಜೀವಿ! ಹಾಗಿದ್ದರೆ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಯಾಕೆ? ಮುಂದೇನಾಯಿತು ಅನ್ನೋ ಕುತೂಹಲಕಾರಿ ಮಾಹಿತಿಯನ್ನು ಸ್ವತಃ ಅವರೇ ತೆರೆದಿಟ್ಟಿದ್ದಾರೆ.

ಒಟಿಟಿಯಲ್ಲಿ ನಂದಮೂರಿ ಬಾಲಕೃಷ್ಣ ಅವರು ನಡೆಸಿಕೊಡುವ ಅನ್‌ಸ್ಟಾಪಬಲ್ ವಿತ್ NBK2ನ ಒಂದು ಶೋ ನಡೆಯುತ್ತಿದೆ. ಇದರ ಒಂದು ಸಂಚಿಕೆಯಲ್ಲಿ ಪವನ್‌ ಕಲ್ಯಾಣ್‌ ಅವರು ಭಾಗವಹಿಸಿದ್ದು, ಅದರಲ್ಲಿ ಅವರು ತಮ್ಮ ಬದುಕಿನ ನಾನಾ ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ವೈಯಕ್ತಿಕ ಜೀವನ, ನಟನೆ ಮತ್ತು ಅದೆಲ್ಲಕ್ಕಿಂತಲೂ ಹೆಚ್ಚಾಗಿ ಮನೋವೇದನೆಯ ಕಥೆಗಳನ್ನು ಅವರು ಹೇಳಿಕೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ತಾನೊಂದು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದ, ಅದರಿಂದ ಪಾರಾಗಿ ಬಂದ ಕಥೆಯನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಆ ಕಥೆಯನ್ನು ಹೇಳುತ್ತಾ ಭಾವುಕರಾಗಿದ್ದಾರೆ ಪವನ್‌ ಕಲ್ಯಾಣ್‌. ಬಾಲಕೃಷ್ಣ ಅವರೊಂದಿಗಿನ ಪವನ್ ಅವರ ಸಂದರ್ಶನದ ಎರಡನೇ ಭಾಗ ಫೆಬ್ರವರಿ 10ರಂದು ಆಹಾ ಒಟಿಟಿಯಲ್ಲಿ ಪ್ರೀಮಿಯರ್ ಆಗಲಿದೆ.

ಪವನ್ ಕಲ್ಯಾಣ್‌ ಅವರು ಖಿನ್ನತೆಯನ್ನು ನಿಭಾಯಿಸುವ ಕುರಿತು ಶೋದಲ್ಲಿ ಮಾತನಾಡಿದ್ದನ್ನು ಮಾಧ್ಯಮವೊಂದು ಪ್ರಕಟಿಸಿದೆ. ʻʻಖಿನ್ನತೆಯೊಂದಿಗಿನ ನನ್ನ ಹೋರಾಟ ತುಂಬಾ ದೊಡ್ಡದು. ನನಗೆ ಅಸ್ತಮಾದ ಸಮಸ್ಯೆ ಇದೆ. ಆಗಾಗ ಆಸ್ಪತ್ರೆಗೆ ದಾಖಲಾಗಬೇಕಾದ ಕಾರಣದಿಂದ ನಾನು ಪ್ರತ್ಯೇಕವಾಗಿಯೇ ವಾಸಿಸುತ್ತೇನೆ. ಸಣ್ಣ ವಯಸ್ಸಿನಿಂದಲೂ ನಾನೊಂಥರಾ ಅಂತರ್ಮುಖಿ. ಯಾರ ಜತೆಗೂ ಹೆಚ್ಚು ಬೆರೆಯುತ್ತಿರಲಿಲ್ಲ. ನಾನು ಹೆಚ್ಚು ಸೋಷಿಯಲ್‌ ವ್ಯಕ್ತಿಯಲ್ಲ. ಹೀಗಿರುವಾಗ 17ನೇ ವಯಸ್ಸಿನಲ್ಲಿ ನನಗೆ ಮಾನಸಿಕ ಒತ್ತಡ ತೀವ್ರವಾಗಿ ಕಾಡಿತು. ಪರೀಕ್ಷೆಗಳ ಒತ್ತಡದಿಂದ ನಾನು ಖಿನ್ನನಾಗಿ ಹೋದೆ. ಒಂದು ದಿನ ನಾನು ಎಷ್ಟು ವೇದನೆ, ಕಿರಿಕಿರಿ ಅನುಭವಿಸಿಬಿಟ್ಟೆ ಎಂದರೆ ಇನ್ನು ಬದುಕುವುದೇ ಬೇಡ ಅನಿಸಿತು. ಆವತ್ತು ನನ್ನ ಅಣ್ಣ ಚಿರಂಜೀವಿ ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿ ಚಿರಂಜೀವಿ ಅವರ ಲೈಸನ್ಸ್‌ಡ್‌ ರಿವಾಲ್ವರ್‌ ಇತ್ತು. ಅದನ್ನು ಬಳಸಿ ಪ್ರಾಣ ತೆಗೆದುಕೊಳ್ಳಲು ಮುಂದಾದೆ. ಆದರೆ ಅದೇ ಕ್ಷಣ ನನ್ನ ಇನ್ನೊಬ್ಬ ಸೋದರ ಮತ್ತು ಅತ್ತಿಗೆ ಬಂದಿದ್ದರಿಂದ ನನ್ನ ಪ್ರಾಣ ಉಳಿಯಿತುʼʼ ಎಂದು ಆವತ್ತಿನ ಭಯಾನಕ ಕ್ಷಣವನ್ನು ನೆನಪು ಮಾಡಿಕೊಂಡರು.

ಇದನ್ನೂ ಓದಿ: Actor Prabhas | ಬಯಲಾಯ್ತಾ ಪ್ರಭಾಸ್‌ ವಿಗ್‌ ಸೀಕ್ರೆಟ್‌: ವಿಡಿಯೊ ವೈರಲ್‌!

ಆವತ್ತು ತನ್ನ ಸಹೋದರ ನಾಗಬಾಬು ಮತ್ತು ಅತ್ತಿಗೆ ಸುರೇಖಾ ಅವರು ಸರಿಯಾದ ಸಮಯದಲ್ಲಿ ರಕ್ಷಣೆ ಮಾಡಿದ್ದರಿಂದ ನಾನು ಇವತ್ತು ಜೀವಂತವಾಗಿದ್ದೇನೆ. ನಂತರ ನನಗೆ ಬದುಕಲು ಧೈರ್ಯ ತುಂಬಿದ್ದು ನನ್ನ ಸಹೋದರ ಚಿರಂಜೀವಿ. ʻʻನೀನು ನನಗಾಗಿ ಬದುಕಬೇಕು. ನೀನು ಏನೂ ಮಾಡದಿದ್ದರೂ ಪರವಾಗಿಲ್ಲ. ಆದರೆ ದಯವಿಟ್ಟು ಬದುಕಬೇಕುʼʼ ಎಂದು ಎಂದು ಸಾಂತ್ವನ ಹೇಳಿದ್ದರು. ಅಂದಿನಿಂದ ನಾನು ಬದಲಾದೆ. ಮಾರ್ಷಲ್ ಆರ್ಟ್ಸ್ ಮತ್ತು ಇತರ ಅಭ್ಯಾಸದಲ್ಲಿ ತೊಡಗಿಸಿಕೊಂಡೆ. ನನ್ನ ಓದುವಿಕೆ, ಸಮರ ಕಲೆಗಳು ಮತ್ತು ಕರ್ನಾಟಕ ಸಂಗೀತದ ಕಲಿಕೆ ನನ್ನನ್ನು ಹೊಸ ಮನುಷ್ಯನನ್ನಾಗಿ ಮಾಡಿದವು- ಎಂದಿದ್ದಾರೆ ಪವನ್‌ ಕಲ್ಯಾಣ್‌.

ಇದನ್ನೂ ಓದಿ: Actress Jayasudha | 64ನೇ ವಯಸ್ಸಿಗೆ ಉದ್ಯಮಿ ಜತೆ ಮದುವೆಯಾದ ನಟಿ ಜಯಸುಧಾ?

ಲಕ್ಷಾಂತರ ಅಭಿಮಾನಿಗಳಿಗೆ ಸ್ಫೂರ್ತಿಯಾಗಿರುವ ಪವನ್ ಕೊನೆಯದಾಗಿ, “ನಿಮ್ಮನ್ನು ಇತರರೊಂದಿಗೆ ಹೋಲಿಸಬೇಡಿ ಮತ್ತು ನಿಮ್ಮ ಸ್ಪರ್ಧೆ ನಿಮ್ಮೊಂದಿಗಷ್ಟೇ ಇರಲಿ. ಜ್ಞಾನ ಮತ್ತು ಯಶಸ್ಸು ಕಠಿಣ ಪರಿಶ್ರಮದಿಂದ ಬರುತ್ತದೆ, ನಾವು ಇಂದು ಕಠಿಣ ಶ್ರಮಪಟ್ಟರೆ ನಾಳೆ ನಮ್ಮ ಭವಿಷ್ಯ ಚೆನ್ನಾಗಿ ಇರುತ್ತದೆʼʼಎಂದಿದ್ದಾರೆ.

ಪವನ್‌ ಕಲ್ಯಾಣ್‌ ಫೆಬ್ರವರಿ 3ರಂದು ಪ್ರಸಾರವಾದ ಮೆಗಾ ಎಪಿಸೋಡ್‌ನ ಮೊದಲ ಭಾಗದಲ್ಲಿ ಈಗಾಗಲೇ ಅನೇಕ ಆಸಕ್ತಿದಾಯಕ ಬಹಿರಂಗಪಡಿಸಿದ್ದಾರೆ. ಪವನ್ ಕೊನೆಯದಾಗಿ ʻಭೀಮ್ಲಾ ನಾಯಕ್ʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ರಾಣಾ ದಗ್ಗುಬಾಟಿ ಕೂಡ ನಟಿಸಿದ್ದರು. ಸಾಗರ್ ಕೆ ಚಂದ್ರು ನಿರ್ದೇಶಿಸಿದ್ದಾರೆ. ಭೀಮ್ಲಾ ನಾಯಕ್ ಮಲಯಾಳಂ ಚಲನಚಿತ್ರ ʻಅಯ್ಯಪ್ಪನುಂ ಕೊಶಿಯುಮ್‌ʼನ ರಿಮೇಕ್ ಆಗಿದೆ.

Exit mobile version