ಬೆಂಗಳೂರು: ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ (Rakshit Shetty) ಹಾಗೂ ರುಕ್ಮಿಣಿ ವಸಂತ್ (rukmini vasanth) ಅಭಿನಯದ ʻಸಪ್ತ ಸಾಗರದಾಚೆ ಎಲ್ಲೋʼ (SSE SideB Twitter Review) ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಸಕ್ಸಸ್ ಕಂಡಿತ್ತು. 2023ರ ನವೆಂಬರ್ 17ರಂದು ಸೈಡ್ ಬಿ ಸಿನಿಮಾ ರಿಲೀಸ್ ಆಗಿತ್ತು. ವಿಶೇಷ ಅಂದರೆ ಸೈಡ್ ಬಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿತ್ತು. ಇದೀಗ ಸೈಡ್ ಬಿ ‘ಅಮೆಜಾನ್ ಪ್ರೈಂ ವಿಡಿಯೊ’ (Amazon Prime Video) ಮೂಲಕ ಒಟಿಟಿಗೆ ಲಗ್ಗೆ ಇಟ್ಟಿದೆ.
ರಕ್ಷಿತ್ ಶೆಟ್ಟಿ (Rakshit Shetty) ಜೊತೆ ರುಕ್ಮಿಣಿ ವಸಂತ್ ಮತ್ತು ಚೈತ್ರಾ ಆಚಾರ್ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.ಜನವರಿ 25ರ ರಾತ್ರಿಯಿಂದಲೇ ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಈ ಬಗ್ಗೆ ಚಿತ್ರತಂಡ ಅಷ್ಟೇನೂ ಪ್ರಚಾರ ಮಾಡಿರಲಿಲ್ಲ.
“ಸೈಡ್- A ಬಹಳ ಕಾಡುತ್ತದೆ ಎನ್ನುವವರಿಗೆ ಸೈಡ್- B ಇನ್ನಷ್ಟು ಕಾಡುತ್ತದೆ. ಹೇಮಂತ್ ರಾವ್ ಮೇಕಿಂಗ್, ನಿರೂಪಣೆ ಹಾಗೂ ಅದನ್ನು ಕಟ್ಟಿಕೊಟ್ಟಿರುವ ಬಗೆ ಅದ್ಭುತ. ನೀವು ಸಿನಿಮಾ ಪ್ರೇಮಿಗಳಾಗಿದ್ದರೆ ಸಿನಿಮಾ ನೋಡಿ ಖುಷಿ ಪಡುತ್ತೀರಿ. ಅದು BGM ಆಗಿರಲಿ, ನಟನೆ ಇರಲಿ, ದೃಶ್ಯರೂಪಕ್ಕೆ ಇಳಿಸಿರುವ ಬಗೆ ಇರಲಿ ಪ್ರತಿಯೊಂದರಲ್ಲೂ ಸೈಡ್- B ಚೆನ್ನಾಗಿದೆ. ಚೈತ್ರಾ ಆಚಾರ್ ‘ಟೋಬಿ’ ಚಿತ್ರದಲ್ಲಿ ನಿಮ್ಮ ನಟನೆ ಮೆಚ್ಚಿದ್ದೆ. ಈ ಸಿನಿಮಾ ನೋಡಿದ ಮೇಲೆ ನಿಮ್ ಅಭಿಮಾನಿ ಆಗಿಬಿಟ್ಟೆ. ಎಂದಿನಂತೆ ರಕ್ಷಿತ್, ರುಕ್ಮಿಣಿ ತಮ್ಮ ತಮ್ಮ ಪಾತ್ರಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ. ಫಸ್ಟ್ ಹಾಫ್ ಎಂಜಾಯ್ ಮಾಡುವಂತಿದೆ. ಸೆಕೆಂಡ್ ಹಾಫ್ ಭಾವನಾತ್ಮಕವಾಗಿದೆ” ಎಂದು ವೀಕ್ಷಕರು ಈ ಹಿಂದೆ ಅಭಿಪ್ರಾಯ ಹಂಚಿಕೊಂಡಿದ್ದರು.
ಇದನ್ನೂ ಓದಿ: Leopard attack | ಓಂಕಾರ ಹಿಲ್ಸ್ ಹಿಂಭಾಗದಲ್ಲಿರುವ ಜಾಗ ನಟ ರಕ್ಷಿತ್ ಶೆಟ್ಟಿಗೆ ಸೇರಿದ್ದು; ಚಿರತೆ ಸೆರೆ ಕಾರ್ಯಕ್ಕೆ ಚುರುಕು
ಗೋಪಾಲಕೃಷ್ಣ ದೇಶಪಾಂಡೆ ಅವರು ಕೂಡ ಈ ಸಿನಿಮಾದಲ್ಲಿ ಒಂದು ಮುಖ್ಯವಾದ ಪಾತ್ರ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ, ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಜತೆಗೆ ಅಚ್ಯುತ್ ಕುಮಾರ್, ಅವಿನಾಶ್, ಚೈತ್ರಾ ಆಚಾರ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಸ್ವತಃ ರಕ್ಷಿತ್ ಶೆಟ್ಟಿ.