Site icon Vistara News

Dunki Movie: ಒಟಿಟಿಗೆ ಎಂಟ್ರಿ ಕೊಟ್ಟ ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ ʻಡಂಕಿʼ!

Shah Rukh Khan Starrer Dunki Movie Streaming OTT

ಬೆಂಗಳೂರು: ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ‘ಡಂಕಿ’ ಸಿನಿಮಾ (Dunki Movie) ಕಳೆದ ವರ್ಷ ಡಿಸೆಂಬರ್ 21ರಂದು ಬಿಡುಗಡೆ ಕಂಡಿತ್ತು. ಡಂಕಿ’ ಶಾರುಖ್ ಮತ್ತು ರಾಜ್ ಕುಮಾರ್ ಹಿರಾನಿ ಅವರ ಮೊದಲ ಚಿತ್ರವಾಗಿದೆ. ಬ್ಲಾಕ್​ಬಸ್ಟರ್​ `ಪಠಾಣ್‌ʼ ಹಾಗೂ ʻಜವಾನ್​ʼ ಸಿನಿಮಾದ ಬಳಿಕ ಇದು ಶಾರುಖ್​ ಪಾಲಿಗೆ ವರ್ಷದ ಮೂರನೇ ಚಿತ್ರವಾಗಿತ್ತು. ಈ ಚಿತ್ರ ಸಾಮಾನ್ಯ ಗಳಿಕೆ ಮಾಡಿದೆ. ಈ ಚಿತ್ರ ಯಾವಾಗ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದು ಫ್ಯಾನ್ಸ್‌ ಕಾದಿದ್ದರು. ಇದೀಗ ಚಿತ್ರತಂಡ ಸಿಹಿ ಸುದ್ದಿ ಹಂಚಿಕೊಂಡಿದೆ. ಫೆಬ್ರವರಿ 14 ಪ್ರೇಮಿಗಳ ದಿನ. ಈ ವಿಶೇಷ ದಿನದಂದು ರಾತ್ರಿ ಸಿನಿಮಾ ಪ್ರಸಾರ ಆರಂಭಿಸಿದೆ.

ವಿಕ್ಕಿ ಕೌಶಲ್, ತಾಪ್ಸಿ ಪನ್ನು, ಬೊಮನ್ ಇರಾನಿ, ಅನಿಲ್ ಗ್ರೋವರ್ ಮತ್ತು ವಿಕ್ರಮ್ ಕೊಚ್ಚರ್ ನಟಿಸಿರುವ ಈ ಚಿತ್ರವು ಡಿಸೆಂಬರ್ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಅಂದಿನಿಂದ ಇದು ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೆಂಡಿಂಗ್ ಆಗಿತ್ತು.  ರಾಜ್ ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ವಲಸೆ ಸಮಸ್ಯೆಯನ್ನು ಕೇಂದ್ರೀಕರಿಸಿದ ಸಿನಿಮಾ. ಸಿನಿಮಾದ ಹೆಸರನ್ನು “ಕತ್ತೆ ಮೇಲಿನ ಪ್ರಯಾಣ” ಎಂಬ ಪದದಿಂದ ಆಯ್ಕೆಮಾಡಿಕೊಳ್ಳಲಾಗಿತ್ತು. ಇದು ಪ್ರಪಂಚದಾದ್ಯಂತದ ಜನರು ತಾವು ವಲಸೆ ಹೋಗಲು ಬಯಸುವ ಸ್ಥಳಗಳನ್ನು ತಲುಪಲು ತೆಗೆದುಕೊಳ್ಳುವ ದೀರ್ಘಕಾಲೀನ, ಅಪಾಯಕಾರಿ ಪಯಣದ ಸುತ್ತ ಸಾಗುತ್ತದೆ.

ಇದನ್ನೂ ಓದಿ: Dunki Movie: ಬುರ್ಜ್ ಖಲೀಫಾದಲ್ಲಿ ʻಡಂಕಿʼ ಟ್ರೈಲರ್‌; ಡ್ರೋನ್‌ ಶೋಗೆ ಶಾರುಖ್‌ ಫ್ಯಾನ್ಸ್‌ ಖುಷ್!‌

‘ಡಂಕಿ’ ರಿಲೀಸ್ ಆಗಿ ಎರಡು ತಿಂಗಳು ತುಂಬಲು ಒಂದು ವಾರ ಇರುವಾಗ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ನೆಟ್‌ಫ್ಲಿಕ್ಸ್‌ಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆಗುತ್ತಿದೆ. ನಿರ್ದೇಶಕ ರಾಜ್​ಕುಮಾರ್ ಹಿರಾನಿ ‘ಮುನ್ನಾ ಭಾಯ್ ಎಂಬಿಬಿಎಸ್’, ‘ಸಂಜು’, ‘3 ಈಡೀಯಟ್ಸ್’, ‘ಪಿಕೆ’ ರೀತಿಯ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದರು. ಅವರು ‘ಡಂಕಿ’ ಚಿತ್ರದ ಮೂಲಕ ಮೊದಲ ಬಾರಿಗೆ ಶಾರುಖ್ ಖಾನ್ ಜತೆ ಕೈ ಜೋಡಿಸಿದರು.

ಡಂಕಿ’ ಸಿನಿಮಾದಲ್ಲಿ ಶಾರುಖ್‌ ಅವರು ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಯಾವುದೇ ಫೈಟ್ಸ್‌ ಇಲ್ಲ. ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಹಾಗೂ ರಾಜ್​ಕುಮಾರ್ ಹಿರಾನಿ ಒಟ್ಟಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದರು.

Exit mobile version