Site icon Vistara News

Shekhar Home:  ಪತ್ತೇದಾರಿ ಕಾದಂಬರಿ ಆಧಾರಿತ ಸಿರೀಸ್‌ನಲ್ಲಿ ಅಬ್ಬರಿಸಲಿದ್ದಾರೆ ಕೇ ಕೇ ಮೆನನ್; ಫಸ್ಟ್‌ ಲುಕ್‌ ಔಟ್!‌

Shekhar Home Kay Kay Menon Shares First Look

ಬೆಂಗಳೂರು: ನಿರ್ದೇಶಕ ಶ್ರೀಜಿತ್ ಮುಖರ್ಜಿ ಅವರ ಮುಂಬರುವ ವೆಬ್ ಸಿರೀಸ್‌ ʻಶೇಖರ್ ಹೋಮ್‌ʼ (Shekhar Home)ಮೊದಲ ಲುಕ್‌ ಅನಾವರಣಗೊಂಡಿದೆ. ಶೇಖರ್ ಹೋಮ್ ಸಿರೀಸ್‌ ಪ್ರಸಿದ್ಧ ಬ್ರಿಟಿಷ್ ಕಾದಂಬರಿಕಾರ ಸರ್ ಆರ್ಥರ್ ಕಾನನ್ ಡೋಯ್ಲ್ ರಚಿಸಿದ ಕಾಲ್ಪನಿಕ ಪತ್ತೇದಾರಿ ಪಾತ್ರ ಷರ್ಲಾಕ್ ಹೋಮ್ಸ್‌ನ ಭಾರತೀಯ ರೂಪಾಂತರ ಎಂದು (British novelist Sir Arthur Conan Doyle) ಹೇಳಲಾಗಿದೆ. ಈ ಸರಣಿಯಲ್ಲಿ ರಸಿಕಾ ದುಗಲ್, ರಣವೀರ್ ಶೋರೆ ಮತ್ತು ಕೌಶಿಕ್ ಸೇನ್ ಜತೆಗೆ ಕೇ ಕೇ ಮೆನನ್ ನಟಿಸಿದ್ದಾರೆ. ಕೇ ಕೇ ಮೆನನ್ ಅವರು `ಶೇಖರ್ ಹೋಮ್‌’ ಮುಖ್ಯ ಪಾತ್ರಧಾರಿ. ಇದೀಗ ಈ ಸಿರೀಸ್‌ ಜಿಯೋ ಸಿನಿಮಾದಲ್ಲಿ ಪ್ರೀಮಿಯರ್ ಆಗಲಿದೆ. ʻಶೇಖರ್ ಹೋಮ್‌ʼ ಸಿರೀಸ್‌ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ.

ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ಕೇ ಕೇ ಮೆನನ್ ಹೀಗೆ ಬರೆದಿದ್ದಾರೆ, “ ಎಲ್ಲಾ ರಹಸ್ಯಗಳನ್ನು ಪರಿಹರಿಸಬಲ್ಲ ಏಕೈಕ ವ್ಯಕ್ತಿ ಅವರು ಎಂದು ನೀವು ಅರಿತುಕೊಳ್ಳುತ್ತೀರಿ. ಶೇಖರ್ ಹೋಮ್‌ ಶೀಘ್ರದಲ್ಲೇ ಜಿಯೋ ಸಿನಿಮಾ ಪ್ರೀಮಿಯಮ್‌ನಲ್ಲಿ ಬರಲಿದೆ. ಸರ್ ಆರ್ಥರ್ ಕಾನನ್ ಡಾಯ್ಲ್ ಅವರ ಸಾಹಿತ್ಯ ಕೃತಿಗಳಿಂದ ಸ್ಫೂರ್ತಿ ಪಡೆದ ಕಾದಂಬರಿಯ ಮೂಲ ಕೃತಿಯಾಗಿದೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Yash: ಯಶ್‌ ನಟನೆಯ ʻಟಾಕ್ಸಿಕ್‌ʼ ಸಿನಿಮಾ ವಿರುದ್ಧ ದೂರು ದಾಖಲು

ಇದೀಗ ಕೇ ಕೇ ಮೆನನ್ ಫ್ಯಾನ್ಸ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಕೇ ಕೇ ಈಸ್ ಬ್ಯಾಕ್ʼಎಂದು ಕಮೆಂಟ್‌ ಮಾಡಿದ್ದಾರೆ. ʻಅಂತಿಮವಾಗಿ ಹೊಸ ಯೋಜನೆʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಕಳೆದ ವರ್ಷ, ಶ್ರೀಜಿತ್ ಮುಖರ್ಜಿ ಅವರು ಪತ್ತೇದಾರಿ ಆಧಾರಿತ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸುಳಿವು ನೀಡಿದ್ದರು. ಅವರು ಇನ್ಸ್ಟಾಗ್ರಾಮ್ನಲ್ಲಿ ಬೆನೆಡಿಕ್ಟ್ ಕಂಬರ್ಬ್ಯಾಚ್ ಮತ್ತು ಮಾರ್ಟಿನ್ ಫ್ರೀಮನ್ ಒಳಗೊಂಡ ಪೋಸ್ಟರ್ನ ಮುಂದೆ ಪೋಸ್ ನೀಡಿದ ಫೋಟೋವನ್ನು ಹಂಚಿಕೊಂಡಿದ್ದರು. ಶೇಖರ್ ಹೋಮ್ ಕುರಿತು ಹೆಚ್ಚಿನ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ಹಂಚಿಕೊಳ್ಳಲಿದೆ.

Exit mobile version