ಬೆಂಗಳೂರು: ಈ ವರ್ಷದ ಏಪ್ರಿಲ್‌ನಲ್ಲಿ “ಯೆ ಮೇರಿ ಫ್ಯಾಮಿಲಿ, ಪ್ಯಾರಾಸೈಟ್ ದಿ ಗ್ರೇ, ಫ್ರಾಂಕ್ಲಿನ್ ಸೇರಿದಂತೆ ಹಲವು ವೆಬ್ ಸಿರೀಸ್‌ಗಳು ಹಲವಾರು ಒಟಿಟಿ ಪ್ಲಾಟ್ ಫಾರ್ಮ್‌ಗಳಲ್ಲಿ ಬಿಡುಗಡೆಯಾಗಲಿವೆ. ಹಾಗೆಯೇ, ಮಾಸ್ಟರ್ ಚೆಫ್ ಇಂಡಿಯಾ (ತಮಿಳು ಮತ್ತು ತೆಲುಗು), ಗುಡ್ ಬೈ ಅರ್ಥ್, ಫ್ಯಾಮಿಲಿ ಆಜ್ ಕಲ್ ಮತ್ತು ಇತರ ಮನೋರಂಜನಾ ಕಾರ್ಯಕ್ರಮಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಏಪ್ರಿಲ್‌ನಲ್ಲಿ ನಿಮ್ಮ ಮನತಣಿಸಲಿರುವ ವೆಬ್ ಸರಣಿಗಳ ಪಟ್ಟಿ ಇಲ್ಲಿದೆ (OTT Releases) ನೋಡಿ.
1. ಯೇ ಮೇರಿ ಫ್ಯಾಮಿಲಿ (ಅಮೆಜಾನ್ ಮಿನಿ ಟಿವಿ); ಏಪ್ರಿಲ್ 4
ಜೂಹಿ ಪರ್ಮಾರ್ ಮತ್ತು ರಾಜೇಶ್ ಕುಮಾರ್ “ಯೇ ಮೇರಿ ಫ್ಯಾಮಿಲಿʼಯ ಮೂರನೇ ಸೀಸನ್‌ನೊಂದಿಗೆ ಮತ್ತೆ ಮರಳಿದ್ದಾರೆ. ಮೂರನೇ ಸೀಸನ್ ಏಪ್ರಿಲ್ 4ರಂದು ಅಮೆಜಾನ್ ಮಿನಿ ಟಿವಿ (Amazon miniTV)ಯಲ್ಲಿ ಬಿಡುಗಡೆಯಾಗಲಿದೆ. ಅವಸ್ಥಿ ಕುಟುಂಬದೊಂದಿಗೆ ಸಾಮಾನ್ಯ ಭಾರತೀಯ ಮನೆಯ ಕಥೆಗೆ ಜೀವ ತುಂಬುವ ಮೂಲಕ ಪ್ರೇಕ್ಷಕರನ್ನು ಹೃದಯವನ್ನು ತಟ್ಟಲಿದ್ದಾರೆ. ಜೂಹಿ ಪರ್ಮಾರ್ ನೀರ್ಜಾ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೆಯೇ ಅಂಗದ್ ರಾಜ್ ಮತ್ತು ಹೇತಲ್ ಗಡ ಕೂಡ ಕಾಣಿಸಿಕೊಂಡಿದ್ದಾರೆ.
2. ಪ್ಯಾರಾಸೈಟ್: ದಿ ಗ್ರೇ; ಏಪ್ರಿಲ್ 5
‘ಪ್ಯಾರಾಸೈಟ್: ದಿ ಗ್ರೇ’ ಹಿತೋಶಿ ಇವಾಸಾಕಿ ಅವರ “ಮಾಂಗಾʼ ಪಾತ್ರವನ್ನು ಆಧರಿಸಿದ ಮತ್ತೊಂದು ಲೈವ್-ಆಕ್ಷನ್ ಸರಣಿಯಾಗಿದೆ ಇದು ಹೆಸರಿಗೆ ತಕ್ಕಂತೆ ಅನ್ಯಲೋಕದ ಪರಾವಲಂಬಿಗಳು ಹೇಗೆ ನಿಧಾನವಾಗಿ ನುಸುಳುತ್ತವೆ ಮತ್ತು ಮಾನವ ದೇಹಗಳನ್ನು ನಿಯಂತ್ರಿಸುತ್ತವೆ ಎಂಬುದರ ಕುರಿತಾದ ಕಥೆಯಾಗಿದೆ. ಇದು ಏಪ್ರಿಲ್ 5ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ:Avatar: The Way of Water | ಭಾರತದಲ್ಲಿ 223 ಕೋಟಿ ರೂ. ಗಳಿಸಿದ ಅವತಾರ್-2!
3. ಮಾಸ್ಟರ್ ಷೆಫ್ ಇಂಡಿಯಾ (ಸೋನಿ ಟಿವಿ); ಏಪ್ರಿಲ್ 22
ಮಾಸ್ಟರ್ ಷೆಫ್ ಇಂಡಿಯಾ ಇದು ತಮಿಳು ಹಾಗೂ ತೆಲುಗು ಆವೃತ್ತಿಯ ಪ್ರಸಿದ್ಧ ರಿಯಾಲಿಟಿ ಶೋ ಆಗಿದೆ. ಏಪ್ರಿಲ್ 22ರಂದು ಸೋನಿ ಟಿವಿಯಲ್ಲಿ ಪ್ರಿಮೀಯರ್ ಪ್ರದರ್ಶನಗೊಳ್ಳಲಿದೆ. ದಕ್ಷಿಣ ಭಾರತದ ಸಣ್ಣ ಪಟ್ಟಣ ಹಾಗೂ ಹಳ್ಳಿಯ ಪಾಕ ಪ್ರವೀಣ/ಪ್ರವೀಣೆಯರಿಗೆ ಈ ಸ್ಪರ್ಧಾತ್ಮಕ ಅಡುಗೆ ಸರಣಿಯು ತನ್ನ ಚೊಚ್ಚಲ ತಮಿಳು ಹಾಗೂ ತೆಲುಗು ಆವೃತ್ತಿಗಳ ಮೂಲಕ ಉತ್ತಮ ವೇದಿಕೆ ಒದಗಿಸಿ ಕೊಡಲಿದೆ. ತಮಿಳು ಆವೃತ್ತಿಯಲ್ಲಿ ಪ್ರಸಿದ್ಧ ಷೆಫ್ ಕೌಶಿಕ್ ಶಂಕರ್, ಶ್ರೀಯಾ ಅಡ್ಕಾ ಹಾಗೂ ರಾಕೇಶ್ ರಘುನಾಥನ್ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ತೆಲುಗು ಆವೃತ್ತಿಯಲ್ಲಿ ಷೆಫ್ ಸಂಜಯ್ ತುಮ್ಮ, ನಿಕಿತಾ ಉಮೇಶ್, ಚಲಪತಿ ರಾವ್ ಉಪಸ್ಥಿತರಿರಲಿದ್ದಾರೆ. ತೆಲುಗು ಹಾಗೂ ತಮಿಳು ಎರಡೂ ಶೋಗಳು ಸ್ಪರ್ಧಿಗಳಿಗಾಗಿ ಆಡಿಷನ್ ನಡೆಸಲು ಸಜ್ಜಾಗಿದೆ.
4. ಫ್ಯಾಮಿಲಿ ಆಜ್ ಕಲ್ (ಸೋನಿ LIV)); ಏಪ್ರಿಲ್ 3
ಹೊಸ ಭಾರತೀಯ ಕೌಟುಂಬಿಕ ನಾಟಕವಾದ “ಫ್ಯಾಮಿಲಿ ಆಜ್ ಕಲ್ʼ ಏಪ್ರಿಲ್ 3ರಂದು ಸೋನಿ LIVನಲ್ಲಿ ಬಿಡುಗಡೆಯಾಗಲಿದೆ. ಸಿವಿಕ್ ಸ್ಟುಡಿಯೋಸ್ ನ ಅನುಷ್ಕಾ ಶಾ ನಿರ್ಮಿಸಿದ ಈ ನಾಟಕದಲ್ಲಿ ಅಪೂರ್ವ ಅರೋರಾ, ಸೋನಾಲಿ ಸಚ್ ದೇವ್, ದಿವಂಗತ ನಿತೇಶ್ ಪಾಂಡೆ, ಆಕರ್ಶನ್ ಸಿಂಗ್, ಪ್ರಖರ್ ಸಿಂಗ್ ಮತ್ತು ಮಸೂದ್ ಅಖ್ತರ್ ರಂತಹ ಪ್ರತಿಭಾವಂತರು ಅಭಿನಯಿಸಿದ್ದಾರೆ.. ಮನೋಜ್ ಕಲ್ವಾನಿ ಅವರು ಫ್ಯಾಮಿಲಿ ಆಜ್ ಕಲ್ ಗೆ ಕಥೆ ಬರೆದಿದ್ದಾರೆ ಹಾಗೂ ಪರೀಕ್ಷಿತ್ ಜೋಶಿ ನಿರ್ದೇಶಿಸಿದ್ದಾರೆ.