Site icon Vistara News

OTT Releases This Week: ಒಟಿಟಿ ಪ್ರಿಯರಿಗೆ ಈ ವಾರ ಮನರಂಜನೆ ನೀಡಲಿರುವ ಸಿನಿಮಾಗಳಿವು!

ಬೆಂಗಳೂರು: ಈ ವಾರ ಒಟಿಟಿ (OTT Releases This Week) ಪ್ರಿಯರಿಗೆ ಹಲವು ಸಿನಿಮಾಗಳು ಮನರಂಜನೆ ನೀಡಲಿವೆ. ಚಿತ್ರಮಂದಿರದಲ್ಲಿ ಯಶಸ್ವಿಯಾದ ಹಲವು ಸಿನಿಮಾಗಳು ಒಟಿಟಿ ಅಂಗಳಕ್ಕೆ ಕಾಲಿಡುತ್ತಿದೆ. ಈ ವಾರದ ಸಿನಿಮಾ ಯಾವವು? ಇಲ್ಲಿದೆ ಮಾಹಿತಿ.

ಕಿಸಿ ಕಾ ಭಾಯ್ ಕಿಸಿ ಕಿ ಜಾನ್

ಸಲ್ಮಾನ್ ಖಾನ್ , ಪೂಜಾ ಹೆಗ್ಡೆ, ವೆಂಕಟೇಶ್, ಜಗಪತಿ ಬಾಬು ನಟನೆಯ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ‘ವೀರಂ’ ಸಿನಿಮಾದ ರಿಮೇಕ್ ಆಗಿದೆ. ಈ ಸಿನಿಮಾ ಜನರ ಮನಗೆಲ್ಲುವಲ್ಲಿ ವಿಫಲವಾಗಿತ್ತು. ಈಗ ಇದೇ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಮೇ 26ರಂದು ಜೀ 5ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಸಲ್ಮಾನ್ ಖಾನ್ ಫಿಲ್ಮ್ಸ್ ಪ್ರೊಡಕ್ಷನ್, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾವನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ. ಭೂಮಿಕಾ ಚಾವ್ಲಾ, ವಿಜೇಂದರ್ ಸಿಂಗ್, ಅಭಿಮನ್ಯು ಸಿಂಗ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್, ಶೆಹನಾಜ್ ಗಿಲ್, ಪಾಲಕ್ ತಿವಾರಿ ಮತ್ತು ವಿನಾಲಿ ಭಟ್ನಾಗರ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು.

ಭೇಡಿಯಾ

ವರುಣ್ ಧವನ್, ಕೃತಿ ಸನೂನ್, ಅಭಿಷೇಕ್ ಬ್ಯಾನರ್ಜಿ ಹಾಗೂ ದೀಪಕ್ ಡೊಬ್ರಿಯಾಲ್ ಅಭಿನಯದ ಸಿನಿಮಾ ‘ಭೇಡಿಯಾ’. ಬಾಲಿವುಡ್‌ ಹಾರರ್ ಕಾಮಿಡಿ ಸಿನಿಮಾ ಮೇ 26ರಂದು ಜಿಯೋ ಸಿನಿಮಾದಲ್ಲಿ ರಿಲೀಸ್ ಆಗಲಿದೆ. ಅಮರ್ ಕೌಶಿಕ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ಮಿಸ್ಸಿಂಗ್

ಅಮೆರಿಕದ ಥ್ರಿಲ್ಲರ್ ಸಿನಿಮಾ ಇದಾಗಿದ್ದು ವಿಲ್ ಮೆರ್ರಿಕ್ (Will Merrick) ಹಾಗೂ ನಿಕ್ ಜಾನ್ಸನ್ (Nick Johnson) ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಮೇ 24ರಂದು ರಿಲೀಸ್ ಆಗಲಿದೆ.

ಮದರ್ಸ್ ಡೇ

ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಮದರ್ಸ್ ಡೇ’ ಮೇ 24ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತಿದೆ. ಮಟೆಯುಸ್ಜ್ ರಾಕಿಯೋವಿಚ್ (Mateusz Rakowicz) ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: Hondisi Bareyiri : ಒಟಿಟಿಯಲ್ಲಿ ಹೊಸ ದಾಖಲೆ ಬರೆದ ʼಹೊಂದಿಸಿ ಬರೆಯಿರಿʼ

ವಿಕ್ಟಿಮ್/ಸಸ್ಪೆಕ್ಟ್

ಕ್ರೈಂ ಥ್ರಿಲ್ಲರ್ ಸಿನಿಮಾ ಇದಾಗಿದೆ. ನ್ಯಾನ್ಸಿ ಶ್ವಾರ್ಟ್ಜ್‌ಮನ್ (Nancy Schwartzman) ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರಾಚೆಲ್ ಡೆ ಲೆಯೋನ್ (Rachel de Leon) ಹಾಗೂ ಅಮಂಡಾ ಪಿಕೆ (Amanda Pike) ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೇ 23ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿದೆ.

Exit mobile version