Site icon Vistara News

Sanjay Chouhan | `ಪಾನ್ ಸಿಂಗ್ ತೋಮರ್’ ಸಿನಿಮಾದ ಖ್ಯಾತ ಚಿತ್ರಕಥೆಗಾರ ಸಂಜಯ್ ಚೌಹಾಣ್ ವಿಧಿವಶ

Sanjay Chouhan

ಬೆಂಗಳೂರು : ʻಪಾನ್ ಸಿಂಗ್ ತೋಮರ್’ ಸಿನಿಮಾ ಖ್ಯಾತ ಚಿತ್ರಕಥೆಗಾರ ಸಂಜಯ್ ಚೌಹಾಣ್ (Sanjay Chouhan) ಜನವರಿ 12 ರಂದು ಸಂಜೆ ಮುಂಬೈನಲ್ಲಿ ನಿಧನರಾಗಿದ್ದಾರೆ. ಲಿವರ್ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಸಂಜಯ್‌ ಅವರಿಗೆ 62 ವರ್ಷ ವಯಸ್ಸಾಗಿತ್ತು. ಸಂಜಯ್ ಅವರು ʻಪಾನ್ ಸಿಂಗ್ ತೋಮರ್’ ಮತ್ತು ʻಐ ಆ್ಯಮ್ ಕಲಾಂʼ ಮುಂತಾದ ಚಲನಚಿತ್ರಗಳ ಚಿತ್ರಕಥೆಯನ್ನು ಬರೆಯಲು ಹೆಸರುವಾಸಿಯಾಗಿದ್ದಾರೆ. ʻಸಾಹೇಬ್ ಬೀವಿ ಔರ್ ಗ್ಯಾಂಗ್‌ಸ್ಟರ್‌ʼ ಚಿತ್ರದ ಬರಹಗಾರೂ ಹೌದು.

ಲಿವರ್ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಸಂಜಯ್‌ ಅವರು 10 ದಿನಗಳ ಹಿಂದೆ ಆಂತರಿಕ ರಕ್ತಸ್ರಾವ ಮತ್ತು ಪ್ರಜ್ಞೆ ತಪ್ಪಿದ ಕಾರಣ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜಯ್ ಅವರ ಸ್ನೇಹಿತ ಹಾಗೂ ಚಲನಚಿತ್ರ ನಿರ್ಮಾಪಕ ಅವಿನಾಶ್ ದಾಸ್ ಈ ಸುದ್ದಿಯನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Death News | ಸಾತ್ವಿಕ ಸಾಧಕಿ ತಂಗಮ್ಮ ಹಿರೇಮಠ ಇನ್ನಿಲ್ಲ, ವಯೋಸಹಜ ಅನಾರೋಗ್ಯದಿಂದ ವಿಧಿವಶ

ಸಂಜಯ್ ಚೌಹಾಣ್ ಹುಟ್ಟಿ ಬೆಳೆದದ್ದು ಭೋಪಾಲ್‌ನಲ್ಲಿ. ಅವರು ದೆಹಲಿಯಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. 1990ರಲ್ಲಿ ಮುಂಬೈನಲ್ಲಿ ʻಭನ್ವಾರ್ʼ ಎಂಬ ಕ್ರೈಮ್‌ ಟಿವಿ ಸಿರೀಸ್‌ ಬರೆಯಲು ಶುರು ಮಾಡಿದರು. ಸಂಜಯ್ ಅವರ ʻಐ ಆ್ಯಮ್ ಕಲಾಂʼ (2011) ಚಿತ್ರದಲ್ಲಿ ಅತ್ಯುತ್ತಮ ಕಥೆಗಾಗಿ ಪ್ರಶಸ್ತಿಯನ್ನು ಗೆದ್ದರು.

ಇದನ್ನೂ ಓದಿ | Dulquer Salmaan | ಕಲಾ ನಿರ್ದೇಶಕ ಸುನೀಲ್ ಬಾಬು ವಿಧಿವಶ: ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ದುಲ್ಕರ್ ಸಲ್ಮಾನ್

Exit mobile version