Site icon Vistara News

Shah Rukh Khan : ಶಾರುಖ್‌ಗೆ ನಟನೆ ಬರುವುದಿಲ್ಲ, ಅವರು ಸುಂದರವಾಗಿಯೂ ಇಲ್ಲ ಎಂದ ಪಾಕ್‌ ನಟಿ!

Mahnoor Baloch talk about shah rukh khan

ಮುಂಬೈ: ಶಾರುಖ್‌ ಖಾನ್‌ (Shah Rukh Khan) 30 ವರ್ಷಗಳಿಂದಲೂ ಸಿನಿ ರಸಿಕರನ್ನು ರಂಜಿಸುತ್ತ ಬಂದಿರುವ ನಟ. ಅವರನ್ನು ಬಾಲಿವುಡ್‌ನ ಲೆಜೆಂಡ್‌ ಎಂದೇ ಅಭಿಮಾನಿಗಳು ಕರೆಯುತ್ತಾರೆ. ಹೀಗಿರುವಾಗ ನೆರೆ ರಾಷ್ಟ್ರ ಪಾಕಿಸ್ತಾನದ ನಟಿಯೊಬ್ಬರು ಶಾರುಖ್‌ ಖಾನ್‌ ಅವರಿಗೆ ನಟನೆಯೇ ಬರುವುದಿಲ್ಲ ಎಂದು ಹೇಳಿದ್ದಾರೆ! ಹಾಗೆಯೇ ಶಾರುಖ್‌ ಸುಂದರವಾಗಿಯೂ ಇಲ್ಲ ಎಂದು ನಟಿ ಟೀಕಿಸಿದ್ದಾರೆ.

ಪಾಕಿಸ್ತಾನದ ಮಹನೂರ್‌ ಬಲೋಚ್‌ ಹೆಸರಿನ ನಟಿ ಈ ರೀತಿಯ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದ ಸಮಾ ವಾಹಿನಿಯ ಟಾಕ್‌ ಶೋ ಹದ್‌ ಕರ್ದಿಯಲ್ಲಿ ಭಾಗವಹಿಸಿದ್ದ ನಟಿ ಈ ರೀತಿಯ ಆರೋಪಗಳನ್ನು ಮಾಡಿದ್ದಾರೆ. “ಶಾರುಖ್‌ ಖಾನ್‌ ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಆದರೆ ಸೌಂದರ್ಯದ ಮಾನದಂಡಗಳ ಪ್ರಕಾರ ಪರಿಗಣಿಸಿದರೆ ಅವರು ಸುಂದರವಾಗಿಲ್ಲ. ಅವರ ವ್ಯಕ್ತಿತ್ವ ಮತ್ತು ಸೆಳವು ಹೆಚ್ಚಿರುವುದರಿಂದ ಅವರು ಉತ್ತಮವಾಗಿ ಕಾಣಿಸಿಕೊಳ್ಳುತ್ತಾರಷ್ಟೇ. ಪ್ರಪಂಚದಲ್ಲಿ ಅವರಿಗಿಂತ ಸುಂದರವಾಗಿರುವವರು ಅನೇಕರಿದ್ದಾರೆ. ಆದರೆ ಅವರಲ್ಲಿ ಸೆಳವು ಇಲ್ಲವಾದ್ದರಿಂದ ಅವರನ್ನು ಜನರು ಗಮನಿಸುವುದಿಲ್ಲ” ಎಂದು ನಟಿ ಹೇಳಿದ್ದಾರೆ.

ಇದನ್ನೂ ಓದಿ: Viral News : ಮನೆ ಬಾಡಿಗೆಗೆ ಕೊಡುವುದರೊಂದಿಗೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ಓನರ್‌! ವೈರಲ್‌ ಆಗ್ತಿದೆ ಕಿಮ್ಚಿ ಕಥೆ
ಹಾಗೆಯೇ, “ಶಾರುಖ್‌ ಅವರಿಗೆ ನಟನೆ ಬರುವುದೇ ಇಲ್ಲ ಎನ್ನುವುದು ನನ್ನ ಅಭಿಪ್ರಾಯ. ಅವರು ದೊಡ್ಡ ಉದ್ಯಮಿ. ತಮ್ಮನ್ನು ತಾವು ಹೇಗೆ ಮಾರ್ಕೆಟಿಂಗ್‌ ಮಾಡಿಕೊಳ್ಳಬೇಕು ಎನ್ನುವುದು ಅವರಿಗೆ ತಿಳಿದಿದೆ. ಬಹುಶಃ ಅವರ ಅಭಿಮಾನಿಗಳ ನನ್ನ ಈ ಅಭಿಪ್ರಾಯವನ್ನು ಒಪ್ಪಿಕೊಳ್ಳದಿರಬಹುದು. ಅದಕ್ಕೇನು ತೊಂದರೆಯಿಲ್ಲ. ಶಾರುಖ್‌ಗೆ ಒಳ್ಳೆಯ ವ್ಯಕ್ತಿತ್ವವಿದೆ ಮತ್ತು ತಮ್ಮನ್ನು ತಾವು ಮಾರ್ಕೆಟಿಂಗ್‌ ಮಾಡಿಕೊಳ್ಳುವುದು ಗೊತ್ತಿದೆ ಎನ್ನುವುದು ಸತ್ಯ. ಸಿನಿಮಾ ಕ್ಷೇತ್ರದಲ್ಲಿ ಸುಂದರವಾಗಿದ್ದೂ ಯಶಸ್ಸು ಕಾಣದ ಸಾಕಷ್ಟು ನಟ ನಟಿಯರಿದ್ದಾರೆ” ಎಂದು ಮಹ್ನೂರ್‌ ಹೇಳಿದ್ದಾರೆ.

ಅವರ ಈ ಸಂದರ್ಶನದ ತುಣಕನ್ನು ಸಮಾ ಟಿವಿ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದೆ. ಅದರ ಕಾಮೆಂಟ್‌ ವಿಭಾಗದಲ್ಲಿ ಶಾರುಖ್‌ ಅವರ ಅಭಿಮಾನಿಗಳು ಮಹ್ನೂರ್‌ ಅವರಿಗೆ ಬೈಯಲಾರಂಭಿಸಿದ್ದಾರೆ. “ಶಾರುಖ್‌ ಅವರು ಬಾಲಿವುಡ್‌ನ ಲೆಜೆಂಡ್‌. ಎಕ್ಸ್‌ಪ್ರೆಶನ್‌ ವಿಚಾರದಲ್ಲಿ ಅವರನ್ನು ಸೋಲಿಸುವವರಿಲ್ಲ”, “ಶಾರುಖ್‌ಗೆ ನಟನೆ ಗೊತ್ತಿಲ್ಲ ಎಂದು ಹೇಳುವ ನಿಮಗೆ ಬುದ್ಧಿಯೇ ಇಲ್ಲ” ಎಂದು ಜನರು ಬೈಯಲಾರಂಭಿಸಿದ್ದಾರೆ. ಇನ್ನು ಕೆಲವರು “ಇದು ಶಾರುಖ್‌ ಹೆಸರು ಹೇಳಿಕೊಂಡು ತಾನು ಪ್ರಚಾರಕ್ಕೆ ಬರಲು ಮಾಡಿದ ತಂತ್ರ” ಎಂದು ನಟಿಗೆ ಹೀಯಾಳಿಸಿದ್ದಾರೆ.

Exit mobile version