Palak Muchhal | ಗಾಯಕಿ ಪಲಕ್ ಮುಚ್ಚಲ್ ಕಲ್ಯಾಣೋತ್ಸವ ಹೇಗಿತ್ತು? Yashaswi Devadiga 2 ವರ್ಷಗಳು ago ಗಾಯಕಿ ಪಲಕ್ ಮುಚ್ಚಲ್ ಅವರು ಮಿಥುನ್ ಶರ್ಮಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ನವೆಂಬರ್ 6 ಭಾನುವಾರ ಕಾಲಿಟ್ಟಿದ್ದಾರೆ. ಹಲವು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇದೀಗ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಿಥುನ್ ಶರ್ಮಾ ಕೂಡ ಬಾಲಿವುಡ್‌ನಲ್ಲಿ ತಮ್ಮ ಸಂಗೀತ ನಿರ್ದೇಶನದ ಮೂಲಕ ಗುರುತಿಸಿಕೊಂಡಿದ್ದಾರೆ. ಅನೇಕ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿರುವ ಪಲಕ್, ಬಂದ ಹಣದಲ್ಲಿ ಮಕ್ಕಳ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ಪಲಕ್ ಹಾಡಿರುವ ‘ಅಯೋಗ್ಯ’ ಸಿನಿಮಾದ ‘ಏನಮ್ಮಿ ಏನಮ್ಮಿ’ ಹಾಡು ಸೂಪರ್ ಹಿಟ್ ಆಗಿತ್ತು. ‘ಅಧ್ಯಕ್ಷ’ ಸಿನಿಮಾದ ‘ಸುಮ್ ಸುಮ್ನೆ ಕಾಡ್ತಿಯಲ್ಲೋ ಯಾಕಿಂಗೆ’ ಹಾಡು ಹಾಡಿದ್ದರು ಪಲಕ್! ಕನ್ನಡ, ತಮಿಳು, ತೆಲಗು, ಹಿಂದಿ ಸೇರಿದಂತೆ ಸಾಕಷ್ಟು ಭಾಷೆಯ ಹಾಡುಗಳಿಗೆ ಹಾಡಿದ್ದಾರೆ ಪಲಕ್!